Kannada Sahitya Sammelana: ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ 32.87 ಕೋಟಿ ಬೇಡಿಕೆ

ಜ.6ರಿಂದ 8ರವರೆಗೆ ಮೂರು ದಿನಗಳ ಕಾಲ ಇಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಘ-ಸಂಸ್ಥೆಗಳು, ವಾಣಿಜ್ಯೋದ್ಯಮಿಗಳು ನೆರವು ನೀಡುವಂತೆ ಹಣಕಾಸು ಸಮಿತಿಯ ಉಪಾಧ್ಯಕ್ಷ, ಮಾಜಿ ಶಾಸಕ ಸುರೇಶಗೌಡ ಪಾಟೀಲ ಹಾಗೂ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮನವಿ ಮಾಡಿಕೊಂಡಿದ್ದಾರೆ. 

32 87 Crore Demand for Haveri Kannada Sahitya Sammelana gvd

ಹಾವೇರಿ (ಡಿ.17): ಜ.6ರಿಂದ 8ರವರೆಗೆ ಮೂರು ದಿನಗಳ ಕಾಲ ಇಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಘ-ಸಂಸ್ಥೆಗಳು, ವಾಣಿಜ್ಯೋದ್ಯಮಿಗಳು ನೆರವು ನೀಡುವಂತೆ ಹಣಕಾಸು ಸಮಿತಿಯ ಉಪಾಧ್ಯಕ್ಷ, ಮಾಜಿ ಶಾಸಕ ಸುರೇಶಗೌಡ ಪಾಟೀಲ ಹಾಗೂ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮನವಿ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಣಕಾಸು ಸಮಿತಿ ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಸುರೇಶಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸಮ್ಮೇಳನದ ವಿವಿಧ ಉಪ ಸಮಿತಿಗಳು ಸಲ್ಲಿಸಿದ ಪ್ರಸ್ತಾವನೆ ಹಾಗೂ ಅನುದಾನ ಬೇಡಿಕೆಗಳನ್ನು ಪರಿಶೀಲಿಸಲಾಯಿತು.

ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ 20 ಕೋಟಿ ಬಿಡುಗಡೆ ಮಾಡಿದೆ. ವಿವಿಧ ಉಪ ಸಮಿತಿಗಳು 32.87 ಕೋಟಿ ಅನುದಾನದ ಬೇಡಿಕೆ ಸಲ್ಲಿಸಿವೆ. ಅದ್ಧೂರಿಯಾಗಿ ಸಮ್ಮೇಳನ ನಡೆಸಲು ವಿವಿಧ ದಾನಿಗಳು, ವಾಣಿಜ್ಯೋದ್ಯಮಿಗಳಿಂದ ಹೆಚ್ಚಿನ ನೆರವು ಪಡೆಯುವುದು ಅವಶ್ಯವಾಗಿದೆ. ಊಟ, ವಸತಿ, ಸಾರಿಗೆ ಸೇರಿದಂತೆ ವಿವಿಧ ಜವಾಬ್ದಾರಿಯ ಪ್ರಾಯೋಜಕತ್ವ ವಹಿಸಿಕೊಳ್ಳಲು ಸ್ವಯಂ ಪ್ರೇರಣೆಯಿಂದ ಮುಂದೆ ಬರುವಂತೆ ದಾನಿಗಳಿಗೆ ಮನವಿ ಮಾಡಿಕೊಂಡರು. ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ವಿವಿಧ 24 ಸಮಿತಿಗಳು ಸಲ್ಲಿಸಿದ ಕಾರ್ಯಕ್ರಮಗಳು ಹಾಗೂ ಅನುದಾನದ ಬೇಡಿಕೆ ಮಾಹಿತಿಯನ್ನು ಸಭೆಗೆ ವಿವರಿಸಿದರು.

ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ 1.5 ಲಕ್ಷ ಮಂದಿಗೆ ಊಟದ ವ್ಯವಸ್ಥೆ

ಸರ್ಕಾರ 20 ಕೋಟಿ ಅನುದಾನ ನೀಡಿದೆ. ಸರ್ಕಾರಿ ನೌಕರರ ಒಂದು ದಿನದ ವೇತನದಿಂದ 1 ಕೋಟಿ ರುನೆರವು ದೊರೆಯಲಿದೆ. ಸಾಹಿತ್ಯ ಪರಿಷತ್ತಿನ 20 ಸಾವಿರ ಸದಸ್ಯರು ನೋಂದಾಯಿಸಿಕೊಂಡರೆ 1 ಕೋಟಿ ನೆರವು ನಂತರ ದೊರೆಯಲಿದೆ ಎಂದು ತಿಳಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸುರೇಶಗೌಡ ಪಾಟೀಲ, ಬ್ಯಾಡಗಿಯಲ್ಲಿ ಕಲ್ಯಾಣ ಮಂಟಪ ಉಚಿತವಾಗಿ ನೀಡಲಾಗುವುದುವಾರದೊಳಗೆ ಹಣಕಾಸಿನ ನೆರವು ಕುರಿತಂತೆ ಘೋಷಿಸಲಾಗುವುದುಹೆಚ್ಚಿನ ಅನುದಾನ ಬಿಡುಗಡೆಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದರು.

ರಾಣಿಬೆನ್ನೂರು ವಾಣಿಜ್ಯೋದ್ಯಮಿಗಳ ಸಂಘದ ವತಿಯಿಂದ ರಾಣಿಬೆನ್ನೂರಿನಲ್ಲಿ ಕಲ್ಯಾಣ ಮಂಟಪ ಮತ್ತು ಸಭಾಭವನಗಳನ್ನು ಉಚಿತವಾಗಿ ಒದಗಿಸಲಾಗವುದು. ಅಗತ್ಯ ಬಿದ್ದರೆ ಇತರ ನೆರವನ್ನು ಒದಗಿಸಲಾಗುವುದು ಎಂದು ಘೋಷಿಸಿದರು. ಬಹದ್ದೂರ ದೇಸಾಯಿ ಹಿರೋಹೊಂಡಾ ಶೋರೂಂ ಮಾಲೀಕರು ಸಾರಿಗೆ ವ್ಯವಸ್ಥೆಗೆ ವಾಹನಗಳ ಪ್ರಾಯೋಜಕತ್ವ ನೀಡುವುದಾಗಿ ಘೋಷಿಸಿದರು. ಅಗತ್ಯಬಿದ್ದರೆ ಇತರ ನೆರವನ್ನು ಸಮ್ಮೇಳನಕ್ಕೆ ನೀಡಲಾಗುವುದು ಎಂದು ಹೇಳಿದರು.

ಬೇಡಿಕೆ: ಸಮ್ಮೇಳನ ನಂತರದ ಉಳಿಕೆ ಅನುದಾನದಲ್ಲಿ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡಕ್ಕೆ ಅನುದಾನ ನೀಡುವಂತೆ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಬೇಡಿಕೆ ಸಲ್ಲಿಸಿದರು. ಸರ್ಕಾರಿ ನೌಕರರು ನೀಡುವ 1 ಕೋಟಿ ರುಅನುದಾನದಲ್ಲಿ ಶೇ.30ರಷ್ಟು ಅನುದಾನವನ್ನು ಜಿಲ್ಲಾ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕಾಗಿ ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ನೀಡುವಂತೆ ಜಿಲ್ಲಾಧ್ಯಕ್ಷ ಅಮೃತಗೌಡ ಪಾಟೀಲ ಮನವಿ ಸಲ್ಲಿಸಿದರು.

ಅನುಮೋದನೆ: ವಸತಿ, ಸಾರಿಗೆ, ಊಟೋಪಚಾರ, ಪ್ರಚಾರ, ವೇದಿಕೆ ಸೇರಿದಂತೆ ವಿವಿಧ ಸಮಿತಿಗಳಿಂದ 32,86,60,562 ಮೊತ್ತದ ಪ್ರಸ್ತಾವನೆ ಸ್ವೀಕರಿಸಲಾಗಿದ್ದು, ಸಮಿತಿಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ 19,93,50,000 ಮೊತ್ತಕ್ಕೆ ಸೀಮಿತಗೊಳಿಸಿ ಅನುಮೋದನೆ ನೀಡಲಾಯಿತು. ವೇದಿಕೆ ನಿರ್ಮಾಣ ಸಮಿತಿಗೆ 5 ಕೋಟಿ, ಆಹಾರ ಸಮಿತಿಗೆ 5 ಕೋಟಿ, ಮೆರವಣಿಗೆ ಸಮಿತಿಗೆ 40 ಲಕ್ಷ, ವಸತಿ ಸಮಿತಿಗೆ 2 ಕೋಟಿ, ಆರೋಗ್ಯ ಮತ್ತು ನೈಮಲ್ಯಕ್ಕೆ 40 ಲಕ್ಷ, ಸಾಂಸ್ಕೃತಿಕ ತಂಡಗಳ ಆಯ್ಕೆ ಸಮಿತಿಗೆ 42 ಲಕ್ಷ, ಸಾರಿಗೆ ಸಮಿತಿಗೆ 1 ಕೋಟಿ, ನಗರ ಅಲಂಕಾರ ವಿದ್ಯುತ್‌ ಸಮಿತಿಗೆ 50 ಲಕ್ಷ, ಪುಸ್ತಕ ಮಳಿಗೆ ವಸ್ತುಪ್ರದರ್ಶನ ಸಮಿತಿಗೆ 5 ಲಕ್ಷ, ಪ್ರಚಾರ ಸಮಿತಿಗೆ 1.10 ಕೋಟಿ, ಪ್ರತಿನಿಧಿಗಳ ನೋಂದಣಿ ಸಮಿತಿಗೆ 62.50 ಲಕ್ಷ, ಮಹಿಳಾ ಶಕ್ತಿ ಸಮಿತಿಗೆ 2 ಲಕ್ಷ, ಆಮಂತ್ರಣ ಪತ್ರಿಕೆ ಸಮಿತಿಗೆ 4.50 ಲಕ್ಷ, ಸ್ಮರಣಿಕೆಗೆ 25 ಲಕ್ಷ, ಸ್ಮರಣ ಸಂಚಿಕೆ ಹಾಗೂ 86 ಪುಸ್ತಕಗಳ ಮುದ್ರಣಕ್ಕಾಗಿ 40 ಲಕ್ಷ, 

ಚಿತ್ರದುರ್ಗ ಜಿಲ್ಲೆಯ ರೈತರಿಗೆ 223 ಕೋಟಿ ಬೆಳೆ ಪರಿಹಾರ: ಸಚಿವ ಬಿ.ಸಿ.ಪಾಟೀಲ್‌

ವೇದಿಕೆ ನಿರ್ವಹಣೆ, ಶಾಲು ಹಾಗೂ ಮಾಲೆಗಾಗಿ 5 ಲಕ್ಷ, ಸಿಸಿ ಟಿವಿ ಅಳವಡಿಕೆ ಸೇರಿದಂತೆ ಶಿಷ್ಟಾಚಾರ ಮತ್ತು ರಕ್ಷಣಾ ಸಮಿತಿಗೆ 40 ಲಕ್ಷ, ಮಾಧ್ಯಮ ಕೇಂದ್ರ ಸ್ಥಾಪನೆ ಸೇರಿದಂತೆ ಮಾಧ್ಯಮ ಸಮನ್ವಯ ಸಮಿತಿಗೆ 1 ಕೋಟಿ, ಸ್ವಯಂ ಸೇವಕರ ಆಯ್ಕೆ ಮತ್ತು ಉಸ್ತುವಾರಿಗೆ 22.50 ಲಕ್ಷ, ಶಿಷ್ಟಾಚಾರ ಪಾಲನೆಗೆ 5 ಲಕ್ಷ, ಪಾಸ್‌ ಮತ್ತು ಬ್ಯಾಡ್ಜ್‌ ಮುದ್ರಣ ಸಮಿತಿಗೆ 20 ಲಕ್ಷ, ಕನ್ನಡ ರಥ ಸಂಚಾರಕ್ಕೆ 25 ಲಕ್ಷ, ಕನ್ನಡ ರಥ ಸಂಚಾರ ಸಂದರ್ಭದಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಕಲಾ ತಂಡಗಳಿಗೆ ಗೌರವಧನವಾಗಿ 30 ಲಕ್ಷ, ಸಮ್ಮೇಳನ ನಡೆಯುವ ಜಾಗ ನೀಡಿರುವ ರೈತರಿಗೆ ಪರಿಹಾರವಾಗಿ 25 ಲಕ್ಷ ಅನುದಾನ ಹಂಚಿಕೆ ಮಾಡಲಾಗಿದೆಈ ಅನುದಾನದಲ್ಲೇ ಜಿಎಸ್‌ಟಿ ತೆರಿಗೆಗಳು, ಇತರ ವೆಚ್ಚ ಭರಿಸಲು ಸಮಿತಿಯ ಸದಸ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ.

ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕರಾದ ಬಸವರಾಜ ಅರಬಗೊಂಡ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಎಸ್‌.ಎಫ್‌.ಎನ್‌ಗಾಜೀಗೌಡ್ರ, ಸುಭಾಸ ಎಂಗಡೆಪ್ಪನವರ, ಎಸ್‌.ಎನ್‌ದೊಡ್ಡಗೌಡರ, ರಾಣಿಬೆನ್ನೂರಿನ ಜಿ.ಜಿಹೊಟ್ಟೆಗೌಡರ, ವೀರೇಶ ಮೊಟಗಿ, ತಿಪ್ಪಣ್ಣ ಸುಬಣ್ಣನವರ, ಬಿ.ಪಿಶಿಡೇನೂರ, ಎಂ.ಎಸ್‌ಅರಕೆರಿ, ಪಿ.ಡಿಶಿರೂರ, ಕಸಾಪ ತಾಲೂಕು ಅಧ್ಯಕ್ಷ ವೈ.ಬಿ.ಆಲದಕಟ್ಟಿ, ಹನುಮಂತಗೌಡ ಭೀಮಣ್ಣನವರ, ಲಿಂಗರಾಜ ಹಿರೇಮಠ ಇತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios