KSRTC ಬಸ್‌ಗೆ ಅಡ್ಡ ಬಂದ ಮಹಿಳೆ ತಲೆ ಪೀಸ್ ಪೀಸ್ ಆಗಿದೆ. ಹುಬ್ಬಳ್ಳಿಯಿಂದ ಹಾವೇರಿಯತ್ತ ಬರುತ್ತಿದ್ದ ಬಸ್‌ಗೆ ಸಿಲುಕಿ ಮಹಿಳೆ ಸಾವನ್ನಪ್ಪಿದ್ದಾಳೆ. ಮೃತ ಜಯಮ್ಮ ಹಾವೇರಿಯ ಇಜಾರಿ ಲಕ್ಮಾಪುರದ ನಿವಾಸಿ ಎಂದು ತಿಳಿದು ಬಂದಿದೆ.

ಹಾವೇರಿ(ಜು.17): ಗಂಡ ಕರೆದ ಅಂತ ರಸ್ತೆ ದಾಟಲು ಹೋಗುವ ವೇಳೆ KSRTC ಬಸ್ ಗೆ ಸಿಲುಕಿ ಮಹಿಳೆ ಸಾವನ್ನಪ್ಪಿದ ಘಟನೆ ಹಾವೇರಿ ನಗರದ ವಾಲ್ಮೀಕಿ‌ ವೃತ್ತದ ಬಳಿ ಇಂದು(ಬುಧವಾರ) ನಡೆದಿದೆ. ಜಯಮ್ಮ ಜಗದೀಶ್ ಕೂಳೇನೂರ(31) ಮೃತಪಟ್ಟ ದುರ್ದೈವಿ ಮಹಿಳೆ. 

KSRTC ಬಸ್‌ಗೆ ಅಡ್ಡ ಬಂದ ಮಹಿಳೆ ತಲೆ ಪೀಸ್ ಪೀಸ್ ಆಗಿದೆ. ಹುಬ್ಬಳ್ಳಿಯಿಂದ ಹಾವೇರಿಯತ್ತ ಬರುತ್ತಿದ್ದ ಬಸ್‌ಗೆ ಸಿಲುಕಿ ಮಹಿಳೆ ಸಾವನ್ನಪ್ಪಿದ್ದಾಳೆ. ಮೃತ ಜಯಮ್ಮ ಹಾವೇರಿಯ ಇಜಾರಿ ಲಕ್ಮಾಪುರದ ನಿವಾಸಿ ಎಂದು ತಿಳಿದು ಬಂದಿದೆ. 

ಹೃದಯ ವಿದ್ರಾವಕ ವಿಡಿಯೋ, ರೈಲು ಡಿಕ್ಕಿಯಾಗಿ ಕಾಲು ಕಳೆದುಕೊಂಡು ತೆವಳುತ್ತಾ ಸಾಗಿ ಪ್ರಾಣ ಬಿಟ್ಟ ಆನೆ!

ಮೃತ ಜಯಮ್ಮ ಅವರು ಸರ್ಕಾರಿ ಮಹಿಳಾ ಹಾಸ್ಟೆಲ್‌ನಲ್ಲಿ ಅಡುಗೆ ಮಾಡಲು ಬಂದಿದ್ದರು. ಗಂಡ ರಸ್ತೆ ಪಕ್ಕ ನಿಂತು ಕರೆದ ಎಂದು ರಸ್ತೆ ದಾಟಲು ಹೋಗಿ‌ ಬಸ್‌ಗೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾಳೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.