ಹಳಿ ದಾಟುತ್ತಿದ್ದ ಆನೆಗೆ ರೈಲು ಡಿಕ್ಕಿಯಾಗಿದೆ. ಪರಿಣಾಮ 2 ಕಾಲು ಕಳೆದುಕೊಂಡ ಆನೆ ತೆವಳುತ್ತಾ ಸಾಗಿ ಪ್ರಾಣಬಿಟ್ಟ ಹೃದಯ ವಿದ್ರಾವಕ ವಿಡಿಯೋ ಎಂತವರ ಕಣ್ಣಲ್ಲಿ ಕಣ್ಣೀರು ಜಿನುಗಿಸುತ್ತದೆ.
ಗುವ್ಹಾಟಿ(ಜು.11) ರೈಲು ಡಿಕ್ಕಿಯಾಗಿ ಎರಡೂ ಕಾಲು ಮುರಿದ ಆನೆ ತೆವಳುತ್ತಾ ಸಾಗಿ ಪ್ರಾಣಬಿಟ್ಟ ಘಟನೆ ಅಸ್ಸಾಂನಲ್ಲಿ ನಡೆದಿದೆ. ಭಾರಿ ಮಳೆಯಿಂದ ಅಸ್ಸಾಂನ ಹಲವು ವನ್ಯ ಜೀವಿಗಳು ಪ್ರಾಣ ಕಳೆದುಕೊಂಡಿದೆ. ಕೆಲ ಪ್ರಾಣಿಗಳು ದಿಕ್ಕುಪಾಲಾಗಿ ರಸ್ತೆಗೆ ಇಳಿದಿವೆ. ಇತ್ತ ಅತೀ ವೇಗದನ ವಾಹನಗಳಿಗೆ ಸಿಕ್ಕಿ ಗಂಭೀರವಾಗಿ ಗಾಯಗೊಳ್ಳುತ್ತಿದೆ. ಇತ್ತ ಗುವ್ಹಾಟಿಯಿಂದ ಕೆಲವೇ ದೂರದಲ್ಲಿ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಿಂದ ಆನೆ ತನ್ನ ಎರಡು ಕಾಲು ಕಳೆದುಕೊಂಡಿದೆ. ತೀವ್ರ ನೋವು, ರಕ್ತ ಸ್ರಾವದ ನಡುವೆ ಹಳಿಯ ನಡುವೆ ತೆವಳುತ್ತಾ ಸಾಗಿದ ಆನೆ ಕೊನೆಗೆ ಪ್ರಾಣ ಬಿಟ್ಟಿದೆ. ಈ ವಿಡಿಯೋ ಎಂತವರ ಕಣ್ಣಲ್ಲಿ ಕಣ್ಣೀರಿ ಜಿನುಗಿಸುತ್ತೆ. ಈ ವಿಡಿಯೋ ಹಂಚಿಕೊಂಡು ಸಂಬಂಧ ಪಟ್ಟ ಅಧಿಕಾರಿಗಳು ವನ್ಯ ಪ್ರಾಣಿಗಳ ಪ್ರಾಣ ಉಳಿಸಲು ಏನಾದರು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೇ ಎಂದು ಕೆಕೆಆರ್ ಸ್ಟಾರ್ ಕ್ರಿಕೆಟಿಗ ವರುಣ್ ಚಕ್ರವರ್ಥಿ ಅಗ್ರಹಿಸಿದ್ದಾರೆ.
ಅಸ್ಸಾನಂ ಮೊರಿಗಾಂವ್ ಜಿಲ್ಲೆಯ ಜಾಗಿರೋಡ್ ರೈಲು ನಿಲ್ದಾಣದ ಸಮೀಪದಲ್ಲಿ ಈ ಘಟನೆ ನಡೆದಿದೆ. ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ವೇಗವಾಗಿ ತೆರಳುತ್ತಿದ್ದ ವೇಳೆ ಎರಡು ಆನೆಗಳು ಹಳಿ ದಾಟುತ್ತಿತ್ತು. ಒಂದು ಆನೆ ಕೂದಲೆಳೆಯುವ ಅಂತರದಲ್ಲಿ ಹಳಿ ದಾಟಿದರೆ ಅದರ ಹಿಂದಿದ್ದ ಈ ಆನೆಗೆ ರೈಲು ಡಿಕ್ಕಿಯಾಗಿದೆ. ರೈಲು ಡಿಕ್ಕಿಯಾದ ಪರಿಣಾಮ ಆನೆ ಗಂಭೀರವಾಗಿ ಗಾಯಗೊಂಡಿದೆ. ಎರಡೂ ಕಾಲುಗಳನ್ನು ಕಳೆದುಕೊಂಡಿದೆ.
ಅಸ್ಸಾಂ ಪ್ರವಾಹದಲ್ಲಿ ಕೊಚ್ಚಿ ಹೋದ ಮರಿ ಆನೆ ರಕ್ಷಿಸಿದ ಅರಣ್ಯಾಧಿಕಾರಿ ತಂಡ, ವಿಡಿಯೋ!
ಇತ್ತ ಆನೆ ತೀವ್ರ ನೋವಿನಿಂದ ಚೀರಾಡುತ್ತಾ ರೈಲು ಹಳಿಯಲ್ಲಿ ತೆವಳುತ್ತಾ ಸಾಗಿದ ಹೃದಯ ವಿದ್ರಾವಕ ಘಟನೆ ಸೆರೆಯಾಗಿದೆ. ಗಂಭೀರವಾಗಿ ಗಾಯಗೊಂಡ ಕಾರಣ ಆನೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೂ ತೆವಳುತ್ತಾ ಹಳಿಯಿಂದ ಹೊರಬರಲು ಪ್ರಯತ್ನಿಸಿದೆ. ಕೆಲ ದೂರ ತನಕ ನೋವಿನಲ್ಲೇ ಸಾಗಿದೆ. ಬಳಿಕ ಕುಸಿದು ಬಿದ್ದು ಮೃತಪಟ್ಟಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ವಲಯದಲ್ಲಿ ನೋವು, ಆಕ್ರೋಶ ಹೊರಬಿದ್ದಿದೆ. ವನ್ಯ ಪ್ರಾಣಿಗಳ ಪ್ರಾಣ ಉಳಿಸಲು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಈ ರೀತಿಯ ಘಟನೆ ಪದೇ ಪದೇ ಮರುಕಳಿಸುತ್ತಿದೆ. ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಹಲವರು ಪ್ರಶ್ನಿಸಿದ್ದಾರೆ. ಈ ಗಜರಾಜನ ಶಾಪ ತಟ್ಟದೇ ಇರಲ್ಲ ಎಂದಿದ್ದಾರೆ.
ಘಟನೆ ವಿಡಿಯೋ ಹಂಚಿಕೊಂಡ ಟೀಂ ಇಂಡಿಯಾ ಕ್ರಿಕೆಟಿಗ, ಕೆಕೆಆರ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವರುಣ್ ಚಕ್ರವರ್ತಿ ನೋವು, ಅಸಹನೆ ತೋಡಿಕೊಂಡಿದ್ದಾರೆ. ಇಂತಹ ಘಟೆನೆಗಳನ್ನು ತಡೆಯಲು ಅಧಿಕಾರದಲ್ಲಿರುವವರು ಅಥವಾ ಸಂಬಂಧಪಟ್ಟ ಅಧಿಕಾರಿಗಳು ಒಂದು ಪರಿಹಾರ ಕಂಡುಕೊಳ್ಳಬೇಕು. ಈ ಮೂಲಕ ಈ ರೀತಿ ಸಾವು ತಪ್ಪಿಸಬೇಕು . ಅಥವಾ ಈ ರೀತಿ ಘಟನೆಗಳಿಗೆ ಪರಿಹಾರವೇ ಇಲ್ಲವೇ? ಯಾರಾದರೂ ನನಗೆ ಮಾಹಿತಿ ನೀಡಿ, ಇದು ನಿಜಕ್ಕೂ ಹೃದಯ ವಿದ್ರಾವಕ ಎಂದು ವರುಣ್ ಚಕ್ರವರ್ತಿ ಹೇಳಿದ್ದಾರೆ.
ಇದು ಕಲ್ಲು ಬಂಡೆಯಲ್ಲ, ಬ್ರಹ್ಮಪುತ್ರ ನದಿ ದಾಡುತ್ತಿರುವ ಆನೆ ಹಿಂಡು ವಿಡಿಯೋ!
