ಉಡುಪಿಯಲ್ಲೊಂದು ಶತಮಾನ ಕಂಡ ಎತ್ತಿನ ಗಾಡಿ! 

ಎತ್ತಿನ ಬಂಡಿ ಇಂದು ಕೇವಲ ಗತಕಾಲದ ಕುರುಹಾಗಿ ಉಳಿದುಕೊಂಡಿದೆ. ಈ ತಲೆಮಾರಿನ ಮಕ್ಕಳಿಗೆ ಬಿಡಿ ದೊಡ್ಡವರಿಗೂ ಎತ್ತಿನ ಬಂಡಿಯೊಂದಿಗೆ ಭಾವನಾತ್ಮಕ ನಂಟಿಲ್ಲ. ಅಂತದ್ದೊಂದು ಬಂಡಿ ಇತ್ತೆಂದು ಮೆಲುಕು ಹಾಕುತ್ತಾರಷ್ಟೇ. ಆದರೆ ಉಡುಪಿಯ ರೈತನೊಬ್ಬ ಮುನ್ನೂ ವರ್ಷಗಳಷ್ಟು ಹಳೆಯದಾದ ಎತ್ತಿನ ಬಂಡಿಯನ್ನು ಜೋಪನವಾಗಿ ಉಳಿಸಿಕೊಂಡಿದ್ದಾರೆಂಬುದು ಅಚ್ಚರಿಯೇ ಸರಿ.

300years old bullock cart in udup

ಉಡುಪಿ (ಜು.14): ಈಗೆಲ್ಲಾ ಹೈಫೈ ಕಾರುಗಳದ್ದೇ ಕಾರುಬಾರು. ವಾಹನಗಳಿಲ್ಲದ ಮನೆಯೇ ಇಲ್ಲ ಎನ್ನಬಹುದು. ನಡೆದು ಹೋಗಬಹುದಾದ ಸ್ಥಳಗಳಿಗೂ ವಾಹನಗಳನ್ನೇ ಅವಲಂಬಿಸಿದ್ದೇವೆ. ಮನೆ ಮುಂದಿನ ದಿನಸಿ ತರಲೂ ವಾಹನಗಳು ಬೇಕು. ಆದರೆ ನಿಮಗೆ ತಿಳಿದಿರಲಿ,  ಕಾಲ ಹಿಂದೆ ಹೀಗಿರಲಿಲ್ಲ, ತಮ್ಮ ಎಲ್ಲಾ ಚಟುವಟಿಕೆಗಳಿಗೂ ಎತ್ತಿನಗಾಡಿಯನ್ನೇ ಅವಲಂಬಿಸಿದ್ದರು. ಪಕ್ಕದ ಊರುಗಳಿಗೆ, ನಗರಗಳಿಗೆ ದಿನಗಟ್ಟಲೇ ಪ್ರಯಾಣಿಸಬೇಕಾಗಿತ್ತು. ತಂತ್ರಜ್ಞಾನ ಹೆಚ್ಚಿದಂತೆ ಕಾಲಕ್ರಮೇಣ ಎತ್ತಿನ ಗಾಡಿ ಮೂಲೆ ಸರಿಯಿತು, ಎತ್ತಿನ ಬಂಡಿಯ ಜಾಗದಲ್ಲಿ ಟ್ರ್ಯಾಕ್ಟರ್‌ಗಳು ಲಗ್ಗೆಯಿಟ್ಟವು. ಇದರ ಪರಿಣಾಮ ಉಪಯೋಗವಿಲ್ಲದೆ ಮನೆಮುಂದೆ ಗತಕಾಲದ ಪಳೆಯುವಳಿಕೆಯಂತೆ ನಿಂತ ಎತ್ತಿನ ಬಂಡಿಗಳು ಕ್ರಮೇಣ ಮುರಿದು ಮಣ್ಣು ಪಾಲಾಯ್ತು. ಕರಾವಳಿಯಲ್ಲೀಗ  ಕಾಣಬೇಕೆಂದರೂ ಎತ್ತಿನಗಾಡಿ ಸಿಗುವುದಿಲ್ಲ! 

ಹಾಗೂ ಹೀಗೂ ನೀವು ಎತ್ತಿನ ಗಾಡಿ ನೋಡಲೇಬೇಕೆಂದರೆ ಉಡುಪಿಯ ಪರ್ಕಳಕ್ಕೆ ಬನ್ನಿ. ಇಲ್ಲಿನ ಸರಸ್ವತಿ ನಗರದ ದಿನೇಶ್ ಶೆಟ್ಟಿಗಾರ (Dinesh Shettigar) ಅವರ ಮನೆಯಲ್ಲಿ ಹಳೆ ಕಾಲದ ಮೂರು ತಲೆಮಾರು ಕಂಡ ಎತ್ತಿನ ಗಾಡಿಯೊಂದು. ಕಾಣಸಿಗುತ್ತದೆ. 

ಶತಮಾನದ  ಹಿಂದೆ ಈ ಎತ್ತಿನಗಾಡಿ (bullock cart) ಬೈಲೂರು, ಕಾರ್ಕಳ, ಹೆಬ್ರಿ, ಉಡುಪಿ (udupi) ಮೊದಲಾದ ಕಡೆ ಸಂತೆ ನಡೆಯುವಲ್ಲಿ ಹೋಗಿ, ಅಕ್ಕಿ ಮೂಟೆ, ದಿನಸಿ,ಸಾಂಬಾರು ಪದಾರ್ಥ, ಬೆಲ್ಲದ ಡಬ್ಬಿ, ಒಡೆದಕಟ್ಟಿಗೆ, ತೆಂಗಿನಕಾಯಿ. ಬೈ ಹುಲ್ಲು ತರಕಾರಿ ಮೊದಲವುಗಳನ್ನ ಮೂಟೆ ಮೂಟೆ ಹೊತ್ತುಕೊಂಡು ಬರುತ್ತಿತ್ತು .

ಇದನ್ನೂ ಓದಿ: ರಂಗೋಲಿ ಕಲೆಯನ್ನೇ ಉಸಿರಾಗಿಸಿ ಅದರಲ್ಲೇ ಸಂಶೋಧನೆ ನಡೆಸಿ ಡಾಕ್ಟರೇಟ್ ಪಡೆದ ಕಲಾವಿದೆ

ಎತ್ತಿನ ಬಂಡಿಯ ಮೂಲಕ ಎಲ್ಲಾ ವಸ್ತುಗಳನ್ನು ಬೇಕು ಬೇಕಾದಲ್ಲಿಗೆ ಸರಬರಾಜು ಮಾಡಲಾಗುತ್ತಿತ್ತು. ಒಂದು ಕುಟುಂಬದ ಜೀವನಾಡಿಯಾದ ಈ ಎತ್ತಿನ ಗಾಡಿ ಇದೀಗ ಶತಮಾನ ಪೂರೈಸಿದೆ.. ಎಂದು ಸರಸ್ವತಿ ನಗರದ ದಿನೇಶ್ ಶೆಟ್ಟಿಗಾರ್ ತಿಳಿಸಿದ್ದಾರೆ. ನಮ್ಮ ಅಜ್ಜ ದಿವಂಗತ ಕಿಟ್ಟ ಶೆಟ್ಟಿಗಾರ್ ಇದನ್ನು ಮೊದಲು ಉಪಯೋಗಿಸುತ್ತಿದ್ದರು. ನಂತರ ನನ್ನ ತಂದೆ ದಿವಂಗತ ಸಾದು ಶೆಟ್ಟಿಗಾರ್, ಅವರು ಸ್ವಲ್ಪ ದುರಸ್ತಿ ಮಾಡಿಸಿದ್ದರು. ಈ ಎತ್ತಿನ ಗಾಡಿಯನ್ನು ಉಪಯೋಗಿಸುತ್ತಿದ್ದರು ಮೂರು ತಲೆಮಾರುಗಳನ್ನು ಕಂಡ ಎತ್ತಿನಗಾಡಿ ಇದಾಗಿದ್ದು, ಇಂದಿಗೂ ತಮ್ಮ ಮನೆಯ ಮುಂದೆ ಅದನ್ನು ಉಳಿಸಿಕೊಂಡಿದ್ದೇವೆ ಎನ್ನುತ್ತಾರೆ .

ನನ್ನ ಪತಿ ಬಳಸುತ್ತಿದ್ದ ಎತ್ತಿನ ಗಾಡಿ ಮನೆಯ ಮುಂದೆ ಇರುವುದು ನನಗೆ ಸಂತಸವಿದೆಯೆಂದು ದಿ. ಸಾಧು ಶೆಟ್ಟಿಗಾರರ ಪತ್ನಿ ಭವಾನಿ ಶೆಟ್ಟಿಗಾರ್ ನೆನಪನ್ನು ಹಂಚಿಕೊಂಡಿದ್ದಾರೆ. ನನ್ನ ಮಕ್ಕಳು ಈಗ..ಕಲಿತು ಉದ್ಯೋಗ ಅರಸಿ ಮಣಿಪಾಲ ಮತ್ತು ಉಡುಪಿಯತ್ತ ಮುಖ ಮಾಡಿದ್ದರೂ ಮಕ್ಕಳು ಇದನ್ನ ಮನೆಯ ಮುಂದೆ ಇಟ್ಟು ನಮ್ಮ ಹಿರಿಯರ ನೆನಪು ಮಾಡಿಸಿದ್ದಾರೆ. ಅವರು ಬಾಳಿ ಬದುಕಿದ ಮತ್ತು ನಮ್ಮೆಲ್ಲರ ಜೀವನದ ಬಂಡಿಯೇ ಎನಿಸಿದ  ಈ ಎತ್ತಿನ ಗಾಡಿಯಿಂದ ಹಳೇಕಾಲದ ಸವಿನೆನಪನ್ನು ಮೆಲಕು ಹಾಕಬಹುದು ಎನ್ನುತ್ರಾರೆ.

ಒಟ್ಟಿನಲ್ಲಿ ಇಂದು ಸರಕುಸಾಗಾಟದ ಲಾರಿ ಟೆಂಪೋ ಇತರೆ ವಾಹನಗಳ ವ್ಯಾಲಿಡಿಟಿ ಕೇವಲ 15 ವರ್ಷದಿಂದ 25 ವರ್ಷ,  ನಂತರ ಎಫ್, ಸಿ ಮಾಡಿ ಮುಂದೂಡಿ, ಒಂದು ಎರಡು ವರ್ಷ ಕಳೆದು ನಂತರ ಗುಜರಿಗೆ ಹೋಗುತ್ತದೆ,  ಆದರೆ ಈ ಎತ್ತಿನ ಬಂಡಿ ಶತಮಾನ ಕಂಡಿದ್ದು, ಈಗಲು ಉಪಯೋಗಿಸುವ ಸ್ಥಿತಿಯಲ್ಲಿದೆ ಅಂದರೆ ಅಚ್ಚರಿಯಾಗುತ್ತೆ . 

ಇದನ್ನೂ ಓದಿ: ಉಡುಪಿ ಇತಿಹಾಸ ಹೇಳುವ 16ನೇ ಶತಮಾನದ ಜೈನ ಶಾಸನ ಪತ್ತೆ

ಕಾಲ ಬದಲಾದಂತೆ ನಾಗರಿಕರು ವಾಹನಗಳ ಮೂಲಕ ಸಾಗಾಟ ಮಾಡುವ ಪ್ರಕ್ರಿಯೆಗೆ ಹೆಚ್ಚು ಒತ್ತು ಕೊಟ್ಟಿರುವುದರಿಂದ ಎತ್ತಿನ ಗಾಡಿ ತುಳುನಾಡಿನಲ್ಲಿ ಅವಸಾನದ ಅಂಚಿನಲ್ಲಿದೆ.  ಈ ಎತ್ತಿನ ಗಾಡಿ ಮನೆಯ ಎದುರೇ ಇರುವುದು ನಗರದ ಜನರಿಗೆಲ್ಲಾ ಗತಕಾಲದ ನೆನಪು ಮಾಡಿಕೊಳ್ಳಲು ಅನುಕೂಲ ಕಲ್ಪಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶರಾಜ್ .

Latest Videos
Follow Us:
Download App:
  • android
  • ios