Encroachment on Govt Land: ಬಿಡಿಎಯಿಂದ 300 ಕೋಟಿ ಮೌಲ್ಯದ ಆಸ್ತಿ ಒತ್ತುವರಿ ತೆರವು
* ರಾಜಾಜಿನಗರ, ವಿಜಯನಗರದಲ್ಲಿ ಒಟ್ಟು 3 ಎಕರೆ ಒತ್ತುವರಿ ತೆರವು
* ಬಿಡಿಎ ಕಾರ್ಯಪಾಲಕ ಅಭಿಯಂತರಾದ ಸುಷ್ಮಾ ನೇತೃತ್ವದಲ್ಲಿ ಕಾರ್ಯಾಚರಣೆ
* ನೂರಾರು ಕೋಟಿ ರೂ.ಮೌಲ್ಯದ ಬಿಡಿಎ ಆಸ್ತಿ ಪತ್ತೆ ಮಾಡಿ ವಶಪಡಿಸಿಕೊಂಡಿದ್ದೇವೆ: ವಿಶ್ವನಾಥ್
ಬೆಂಗಳೂರು(ಜ.05): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(Bengaluru Development Authority) ಆಸ್ತಿ ಕಬಳಿಸಿರುವ ಭೂ ಕಬಳಿಕೆದಾರರ ವಿರುದ್ಧ ಬಿಡಿಎ(BDA) ಅಧಿಕಾರಿಗಳ ಕಾರ್ಯಾಚರಣೆ ಮುಂದುವರೆಸಿದ್ದು, ರಾಜಾಜಿನಗರ ಮತ್ತು ವಿಜಯ ನಗರದಲ್ಲಿ ಒತ್ತುವರಿಗೆ ಒಳಗಾಗಿದ್ದ 300 ಕೋಟಿ ರುಪಾಯಿ ಮೌಲ್ಯದ ಆಸ್ತಿಯನ್ನು(Property) ಮರಳಿ ವಶಕ್ಕೆ ಪಡೆದಿದ್ದಾರೆ. ಮಂಗಳವಾರ ಬಿಡಿಎ ಕಾರ್ಯಪಾಲಕ ಅಭಿಯಂತರಾದ ಸುಷ್ಮಾ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ರಾಜಾಜಿನಗರ 6ನೇ ಹಂತದಲ್ಲಿ ಪ್ರಸನ್ನ ಚಿತ್ರಮಂದಿರದ ಸಮೀಪ 2.20 ಎಕರೆ ಬಿಡಿಎ ಜಾಗವನ್ನು ಅತಿಕ್ರಮಿಸಿ(Encroachment) ನಿರ್ಮಿಸಿಕೊಂಡಿದ್ದ 5 ತಾತ್ಕಾಲಿಕ ಶೆಡ್‌ಗಳು ಮತ್ತು 1 ಗ್ಯಾರೇಜ್‌ಗಳನ್ನು ತೆರವುಗೊಳಿಸಲಾಯಿತು.
ಬಿಡಿಎ ಅಧ್ಯಕ್ಷರು, ಬಿಡಿಎ ಪೊಲೀಸ್(Police) ವರಿಷ್ಠಾಧಿಕಾರಿಗಳಾದ ಭಾಸ್ಕರ್ ಮತ್ತು ರವಿಕುಮಾರ್ ನೇತೃತ್ವದಲ್ಲಿ ಐದಕ್ಕೂ ಹೆಚ್ಚು ಜೆಸಿಬಿಗಳು(JCB) ಮತ್ತು ಐವತ್ತಕ್ಕೂ ಹೆಚ್ಚು ಸಿಬ್ಬಂದಿ ತಾತ್ಕಾಲಿಕ ಶೆಡ್‌ಗಳು ಮತ್ತು ಗ್ಯಾರೇಜನ್ನು ತೆರವುಗೊಳಿಸಿದರು. ಬಿಡಿಎ ವಶಪಡಿಸಿಕೊಂಡ ಈ ಆಸ್ತಿಯ ಮೌಲ್ಯ 175 ಕೋಟಿ ಎಂದು ಅಂದಾಜಿಸಲಾಗಿದೆ.
Bengaluru| ಬಿಡಿಎಯಲ್ಲಿ ಬಗೆದಷ್ಟು ಬ್ರಹ್ಮಾಂಡ ಭ್ರಷ್ಟಾಚಾರ..!
ವಿಜಯನಗರ ಅತ್ತಿಗುಪ್ಪೆಯ ಕೆಂಪಾಪುರ ಅಗ್ರಹಾರದಲ್ಲಿ ಬಿಡಿಎಗೆ ಸೇರಿದ ಸರ್ವೆ ನಂ. 329/3ರಲ್ಲಿ ಅತಿಕ್ರಮವಾಗಿ ನಿರ್ಮಾಣವಾಗಿದ್ದ ಪೆಟ್ರೋಲ್ ಬಂಕ್ ಮತ್ತು ಖಾಲಿ ಜಾಗ ಸೇರಿದಂತೆ 1.09 ಎಕರೆ ಜಾಗವನ್ನು ವಶಕ್ಕೆ ಪಡೆಯಲಾಗಿದೆ. ಈ ಭೂಮಿಯ ಅಂದಾಜು ಮೌಲ್ಯ 125 ಕೋಟಿಗಳಾಗಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್(SR Vishwanath), ನೂರಾರು ಕೋಟಿ ರೂಪಾಯಿ ಮೌಲ್ಯದ ಬಿಡಿಎ ಆಸ್ತಿಯನ್ನು ಪತ್ತೆ ಮಾಡಿ ವಶಪಡಿಸಿಕೊಂಡಿದ್ದೇವೆ. ಪ್ರಾಧಿಕಾರದ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಾರ್ಯಾಚರಣೆ ಮುಂದುವರೆಸುತ್ತೇವೆ. ಇದು ಸಾರ್ವಜನಿಕರ ಸ್ವತ್ತಾಗಿದ್ದು, ದುರುಪಯೋಗ ಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಬಗೆದಷ್ಟೂ ಹೊರಬರ್ತಿದೆ ಬಿಡಿಎ ಹಗರಣ
‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)’ದಲ್ಲಿ ಭ್ರಷ್ಟಾಚಾರ ನಿಗ್ರಹ ದಳವು (ACB) ಬಗೆದಷ್ಟು ಭೂ ಹಗರಣಗಳು ಹೊರ ಬರುತ್ತಿದ್ದು, ನ.23ರಂದು ಬಿಡಿಎ ಕೇಂದ್ರ ಕಚೇರಿ ಸೇರಿದಂತೆ ಉಪ ಕಚೇರಿಗಳ ಮೇಲೆ ಮತ್ತೆ ದಾಳಿ(Raid) ನಡೆಸಿ ಕೋಟ್ಯಂತರ ರುಪಾಯಿ ಮೌಲ್ಯದ ಭೂ ಅಕ್ರಮವನ್ನು ಎಸಿಬಿ ಬಯಲುಗೊಳಿಸಿತ್ತು.
Bengaluru| ಬಿಡಿಎಯಲ್ಲಿ 100 ಕೋಟಿ ಅಕ್ರಮ ಪತ್ತೆ..!
ನಗರದ ಕುಮಾರಕೃಪಾ ಪಶ್ಚಿಮ ಭಾಗದಲ್ಲಿರುವ ಬಿಡಿಎ ಕೇಂದ್ರ ಕಚೇರಿ, ಆರ್.ಟಿ.ನಗರದಲ್ಲಿರುವ ಉತ್ತರ ವಿಭಾಗದ ಕಚೇರಿ, ವಿಜಯನಗರದಲ್ಲಿನ ಪಶ್ಚಿಮ ವಿಭಾಗದ ಕಚೇರಿ, ಎಚ್‌ಎಸ್‌ಆರ್ ಲೇಔಟ್‌ನ ಪೂರ್ವ ವಿಭಾಗದ ಕಚೇರಿ ಹಾಗೂ ಬನಶಂಕರಿಯಲ್ಲಿರುವ ದಕ್ಷಿಣ ವಿಭಾಗದ ಬಿಡಿಎ ಕಚೇರಿಗಳಲ್ಲಿ ಎಸಿಬಿ ಕಾರ್ಯಾಚರಣೆ ನಡೆಸಿದೆ. ಈ ದಾಳಿ ವೇಳೆ ಹಲವು ಭೂ ಅವ್ಯವಹಾರಗಳಿಗೆ ಸಂಬಂಧಿಸಿದ ಕಡತಗಳನ್ನು ಎಸಿಬಿ ಜಪ್ತಿ ಮಾಡಿತ್ತು.
ಸಿಎ, ಮೂಲೆ ನಿವೇಶನಗಳು ಗುಳುಂ
ನಗರದ(Bengaluru) ಹೊರ ವಲಯದಲ್ಲಿ ಹೊಸದಾಗಿ ಬಡಾವಣೆಗಳ ಅಭಿವೃದ್ಧಿಗೆ ಭೂ ಸ್ವಾಧೀನದಲ್ಲಿ(Land Acquisition) ಭಾರಿ ಪ್ರಮಾಣ ಅವ್ಯವಹಾರ ನಡೆದಿರುವುದು ಎಸಿಬಿ ದಾಳಿ ವೇಳೆ ಬೆಳಕಿಗೆ ಬಂದಿತ್ತು. ಕೆಲವು ಕಡೆ ಭೂಸ್ವಾಧೀನ ನೆಪದಲ್ಲಿ ನಕಲಿ ದಾಖಲೆ(Fake Documents) ಸೃಷ್ಟಿಸಿ ಅನರ್ಹ ಫಲಾನುಭವಿಗಳಿಗೆ ಜಮೀನಿನ ಪರಿಹಾರವನ್ನು ಬಿಡಿಎ ಅಧಿಕಾರಿಗಳು ವಿತರಿಸಿದ್ದಾರೆ. ಅದೇ ರೀತಿ ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿಯ ಭಾರತ್ ಎಚ್‌ಬಿಸಿಎಸ್ ಲೇಔಟ್‌ನಲ್ಲಿ ಸಂಘ ಸಂಸ್ಥೆಗಳಿಗೆ ಹಂಚಿಕೆಯಾದ ನಾಗರಿಕ ಸೌಲಭ್ಯ (ಸಿಎ) ನಿವೇಶನಗಳು ಉದ್ದೇಶಿತ ಸೌಲಭ್ಯಗಳಿಗೆ ಬಳಕೆಯಾಗದೆ ಷರತ್ತು ಉಲ್ಲಂಘನೆಯಾಗಿದೆ. ಆದರೆ ಈ ಬಗ್ಗೆ ಕಾನೂನು ಕ್ರಮ ಜರುಗಿಸದ ಬಿಡಿಎ ಮೌನ ಅನುಮಾನಗಳಿಗೆ ಕಾರಣವಾಗಿದೆ ಎಂದು ಎಸಿಬಿ ಹೇಳಿತ್ತು.