ನಿವೃತ್ತ ಶಿಕ್ಷಕರೋರ್ವರ ಪತ್ನಿ, ಪುತ್ರ, ಪುತ್ರಿ ಮೂವರು ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಈ ಸಾವಿಗೆ ಕಾರಣ..?

ದಾವಣಗೆರೆ (ಫೆ.01): ಮಗಳಿಗೆ ವಿವಾಹ ಮಾಡುವ ವಿಚಾರದಲ್ಲಿ ಉಂಟಾದ ಕೌಟುಂಬಿಕ ಕಲಹದಿಂದಾಗಿ ಬೇಸತ್ತು ತಾಯಿ, ಮಗಳು ಮತ್ತು ಮಗ ಸೇರಿ ಒಂದೇ ಕುಟುಂಬದ ಮೂವರು ಸಮೀಪದ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

ಚನ್ನಗಿರಿ ಸಮೀಪದ ಮರವಂಜಿ ಗ್ರಾಮದ ನಿವಾಸಿಗಳಾದ ನಿವೃತ್ತ ಶಿಕ್ಷಕ ರಾಜಪ್ಪ ಅವರ ಪತ್ನಿ ಕಮಲಮ್ಮ(50) ಮಗಳು ಶ್ರುತಿ(24) ಹಾಗೂ ಮಗ ಸಂಜಯ್‌(20) ನಾಲೆಗೆ ಹಾರಿ ಸಾವಿಗೆ ಶರಣಾದ ದುರ್ದೈವಿಗಳು. ರಾಜ್ಯಶಾಸ್ತ್ರದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಮುಗಿಸಿದ್ದ ಮಗಳು ಶ್ರುತಿ ಅವರ ಮದುವೆಗೆ ತಂದೆ ರಾಜಪ್ಪ ವರನನ್ನು ಹುಡುಕುತ್ತಿದ್ದರು.

ಅಕ್ರಮ ಸಂಬಂಧ : ವಿವಸ್ತ್ರಗೊಳಿಸಿ ಫೋಟೊ ತೆಗೆದಿದ್ದಕ್ಕೆ ಯುವಕ ಸೂಸೈಡ್

 ಆದರೆ, ಶ್ರುತಿ ಬಂದ ಎಲ್ಲ ಸಂಬಂಧಗಳನ್ನು ನಿರಾಕರಿಸುತ್ತಿದ್ದ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಆಗಾಗ್ಗೆ ಮನಸ್ತಾಪ ಉಂಟಾಗುತಿತ್ತು ಎನ್ನಲಾಗಿದೆ. ಇದರಿಂದ ನೊಂದ ತಾಯಿ, ಮಗಳು ಬುಧವಾರ ಮನೆಯಿಂದ ನಾಪತ್ತೆಯಾಗಿದ್ದರು. ಅವರನ್ನು ಹುಡುಕುತ್ತಾ ಬಂದ ಮಗ ಕೂಡಾ ತೆರಳಿದ್ದ. ಆದರೆ, ಮೂವರೂ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಜಯ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದರು. ಶ್ರುತಿ ಅವರ ಮೃತದೇಹ ಗುರುವಾರ ಸಂತೇಬೆನ್ನೂರು ಸಮೀಪದ ಮೆದಿಕೆರೆ ಬಳಿ ಪತ್ತೆಯಾಗಿದೆ. ಸಂಜಯ್‌ ಅವರ ಮೃತದೇಹ ಶುಕ್ರವಾರ ಯಕ್ಕೆಗೊಂದಿ ಭದ್ರಾನಾಲೆಯಲ್ಲಿ ಸಿಕ್ಕಿದೆ. ಕಮಲಮ್ಮ ಅವರ ಮೃತ ದೇಹಕ್ಕಾಗಿ ಶೋಧ ನಡೆಯುತ್ತಿದೆ. ಸಂತೇಬೆನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.