ಅಕ್ರಮ ಸಂಬಂಧ : ವಿವಸ್ತ್ರಗೊಳಿಸಿ ಫೋಟೊ ತೆಗೆದಿದ್ದಕ್ಕೆ ಯುವಕ ಸೂಸೈಡ್

ಅಕ್ರಮ ಸಂಬಂಧ  ಯುವಕನ ಪ್ರಾಣವನ್ನೇ ಬಲಿ ಪಡೆಯಿತು. ವಿವಸ್ತ್ರಗೊಳಿಸಿ ಫೋಟೊ ತೆಗೆದಿದ್ದು ಇದಾದ ಬಳಿ ಭೀತನಾದ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ.

Youth Commits Suicide After Blackmailing About his relationship snr

ಟಿ. ನರಸೀಪುರ (ಫೆ.01):  ಅಕ್ರಮ ಸಂಬಂಧ ಹೊಂದಿದ್ದ ಜೋಡಿಗಳನ್ನು ಬೆದರಿಸಿ ವಿವಸ್ತ್ರಗೊಳಿಸಿ ಪೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಸಿದ ಪರಿಣಾಮ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬನ್ನೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಭೋವಿ ಕಾಲೋನಿಯಲ್ಲಿ ನಡೆದಿದೆ.

ಭೋವಿ ಕಾಲೋನಿಯ ಸ್ವಾಮಿ ಆತ್ಮಹತ್ಯೆ ಮಾಡಿಕೊಂಡವನಾಗಿದ್ದು, ಆತ ಅದೇ ಕಾಲೋನಿಯ ವಿಧವೆಯೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನೆಂದು ತಿಳಿದು ಬಂದಿದೆ.

ವಿಧವೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಸ್ವಾಮಿ ಜ. 16ರ ರಾತ್ರಿ 10ರ ಸಮಯದಲ್ಲಿ ದೂರವಾಣಿ ಕರೆ ಮಾಡಿ ಮನೆಗೆ ಬರುತ್ತಿರುವುದಾಗಿ ತಿಳಿಸಿ ಆಕೆಯ ಮನೆಗೆ ಹೋಗಿದ್ದಾನೆ. ಇದನ್ನು ಗಮನಿಸಿದ ಆಕೆಯನ್ನು ಪ್ರೀತಿಸಿ ನಿರಾಕರಿಸಲ್ಪಟ್ಟಿದ್ದ ಭಗ್ನ ಪ್ರೇಮಿ ಮೋಹನ್‌ ಕುಮಾರ್‌ ಕೂಡಾ ಸ್ವಾಮಿಯನ್ನು ಹಿಂಬಾಲಿಸಿದ್ದಾನೆ. ಸ್ವಾಮಿ ಆಕೆಯ ಮನೆ ಮುಂದೆ ನಿಂತು ನೀರು ಪಡೆದು ಕುಡಿಯುತ್ತಿರುವ ವೇಳೆ ಬಲವಂತವಾಗಿ ಆತನನ್ನು ಮನೆಯೊಳಗೆ ತಳ್ಳಿದ್ದಾನೆ. ಇಬ್ಬರ ಅಕ್ರಮ ಸಂಬಂಧವನ್ನು ಊರಿಗೆ ಬಹಿರಂಗ ಮಾಡುವುದಾಗಿ ಬೆದರಿಕೆ ಒಡ್ಡಿ ಇಬ್ಬರನ್ನೂ ವಿವಸ್ತ್ರಗೊಳಿಸಿ ಮೊಬೈಲ್‌ನಲ್ಲಿ ಫೋಟೋ ತೆಗೆದಿದ್ದಾನೆ ಎಂದು ಆಕೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮನೆಗೆ ಬಾರದ ಗಂಡ : ಇತ್ತ ಕೊನೆಯಾದ ಸುರಸುಂದರಿ ಹೆಂಡತಿ ಬದುಕು

ಆನಂತರ ಆತ ಆಕೆಗೆ ನಾನು ಹೇಳಿದಂತೆ ಕೇಳಿದರೆ ಏನೂ ಮಾಡುವುದಿಲ್ಲ ಇಲ್ಲದಿದ್ದರೆ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಒಡ್ಡಿ ತನ್ನೊಂದಿಗೆ ಸಹಕರಿಸುವಂತೆ ಆಕೆಯ ಮೈ ಮುಟ್ಟಿದ್ದಾನೆ. ಆದರೆ ಆಕೆ ಇದಕ್ಕೆ ಒಪ್ಪದೇ ಆತ್ಮಹತ್ಯೆಗೆ ಶರಣಾಗುವುದಾಗಿ ಬೆದರಿಕೆ ಒಡ್ಡಿದ ಹಿನ್ನೆಲೆ ಬಾಗಿಲು ತೆಗೆದು ಸ್ವಾಮಿಯನ್ನು ಅಲ್ಲಿಂದ ಕಳುಹಿಸಿದ್ದಾನೆ. ಘಟನೆಯಿಂದ ಭೀತನಾದ ಸ್ವಾಮಿ ಜ.17ರಂದು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪೋಷಕರು ದೂರು ನೀಡಿ ಸುಮ್ಮನಾಗಿದ್ದರು.

ಆದರೆ ಜ. 19ರಂದು ಆ ಮಹಿಳೆ ಸ್ವಾಮಿಯ ಅಣ್ಣನಾದ ಬಾಬುಗೆ ಕರೆ ಮಾಡಿ ನಡೆದ ಘಟನೆಯ ವಿವರವನ್ನು ಹೇಳಿದಾಗ, ಸ್ವಾಮಿ ಸಹೋದರ ಬಾಬು ಬನ್ನೂರು ಪೊಲೀಸ್‌ ಠಾಣೆಯಲ್ಲಿ ಆಕೆ ಹಾಗೂ ಮೋಹನ್‌ಕುಮಾರ್‌ ವಿರುದ್ಧ ದೂರು ದಾಖಲಿಸಿದರೆ, ಆಕೆ ಮೋಹನ್‌ ಕುಮಾರ್‌ ವಿರುದ್ಧ ದೂರು ದಾಖಲಿಸಿದ್ದಾರೆ. ಬನ್ನೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Latest Videos
Follow Us:
Download App:
  • android
  • ios