ಈ ಬಾರಿಯ ದಸರೆಗೆ 28.74 ಕೋಟಿ ರು. ವೆಚ್ಚ

ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದ್ದು, ಅದಕ್ಕಾಗಿ . 28.74 ಕೋಟಿ ವೆಚ್ಚವಾಗಿದೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

28 crore Spent for this 2022 Dussehra snr

 ಮೈಸೂರು (ನ.02):  ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದ್ದು, ಅದಕ್ಕಾಗಿ . 28.74 ಕೋಟಿ ವೆಚ್ಚವಾಗಿದೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ಮೈಸೂರು (Mysuru)  ಅರಮನೆ (Palace)  ಮಂಡಳಿಯ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಮಹೋತ್ಸವಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ . 10 ಕೋಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ . 15 ಕೋಟಿ, ಅರಮನೆ ಆಡಳಿತ ಮಂಡಳಿಯಿಂದ . 5 ಕೋಟಿ, ಪ್ರಾಯೋಜಕತ್ವದಿಂದ . 32.50 ಲಕ್ಷ, ಟಿಕೆಟ್‌ ಮತ್ತು ಗೋಲ್ಡ… ಕಾರ್ಡ್‌ ಮಾರಾಟದಿಂದ . 76.38 ಲಕ್ಷ ಸೇರಿದಂತೆ ಒಟ್ಟು . 31.08 ಕೋಟಿ ಜಿಲ್ಲಾಧಿಕಾರಿಯವರ ಖಾತೆಯಲ್ಲಿ ಸಂಗ್ರಹವಾಗಿತ್ತು ಎಂದು ವಿವರಿಸಿದರು.

ಇದರಲ್ಲಿ ದಸರಾ ಉಪ ಸಮಿತಿಗಳಿಗೆ . 26.54 ಕೋಟಿ, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಯ ದಸರಾ ಉತ್ಸವಕ್ಕೆ . 2.20 ಕೋಟಿ ವೆಚ್ಚವಾಗಿದೆ. ರಾಜವಂಶಸ್ಥರಿಗೆ . 47.20 ಲಕ್ಷ ಗೌರವಧನ ನೀಡಲಾಗಿದೆ. . 1.26 ಕೋಟಿಗೆ ಉಳಿಕೆಯಾಗಿದ್ದು, 21 ದಸರಾ ಉಪ ಸಮಿತಿಗಳು ಸೇರಿದಂತೆ ವೆಚ್ಚದ ಲೆಕ್ಕಾಚಾರವನ್ನು ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ಇನ್ನೂ 3- 4 ದಿನಗಳಲ್ಲಿ ಮರು ಪರಿಶೀಲನೆ ನಡೆಯಲಿದೆ ಎಂದರು.

ವಿವಿಧ ಉಪ ಸಮಿತಿಗಳ ವೆಚ್ಚದ ವಿವರ

ಸ್ವಾಗತ ಮತ್ತು ಆಮಂತ್ರಣ ಉಪಸಮಿತಿಗೆ . 78.57 ಲಕ್ಷ, ಗಣ್ಯರಿಗೆ ಮತ್ತು ಕಲಾವಿದರಿಗೆ ಸ್ಥಳಾವಕಾಶ ಮತ್ತು ಸಾರಿಗೆ ವ್ಯವಸ್ಥೆ . 3.77 ಕೋಟಿ, ಮೆರವಣಿಗೆ ಉಪಸಮಿತಿಗೆ . 2.22 ಕೋಟಿ, ಪಂಜಿನ ಕವಾಯತು ಉಪಸಮಿತಿಗೆ . 1.17 ಕೋಟಿ, ಸ್ತಬ್ಧಚಿತ್ರ ಉಪಸಮಿತಿಗೆ . 29.88 ಲಕ್ಷ, ರೈತ ದಸರಾ (ಗ್ರಾಮೀಣ ದಸರಾ)ಕ್ಕೆ . 51.66 ಲಕ್ಷ, ಕ್ರೀಡಾ ಉಪಸಮಿತಿಗೆ . 22.02 ಲಕ್ಷ, ಸಾಂಸ್ಕೃತಿಕ ಉಪಸಮಿತಿಗೆ . 1.61 ಕೋಟಿ, ಲಲಿತಕಲೆ ಮತ್ತು ಕರಕುಶಲ ಉಪಸಮಿತಿಗೆ . 17.90 ಲಕ್ಷ, ಕವಿಗೋಷ್ಠಿ ಉಪಸಮಿತಿಗೆ . 41.69 ಲಕ್ಷ, ಯೋಗ ದಸರಾ ಉಪಸಮಿತಿಗೆ . 18.94 ಲಕ್ಷ, ಯುವ ಸಂಭ್ರಮ ಮತ್ತು ಯುವ ದಸರಾ ಉಪಸಮಿತಿಗೆ . 6.36 ಕೋಟಿ, ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಗೆ . 31.07 ಲಕ್ಷ, ಸ್ವಚ್ಛತೆ ಮತ್ತು ವ್ಯವಸ್ಥೆ ಉಪಸಮಿತಿಗೆ . 29.08 ಲಕ್ಷ, ಚಲನಚಿತ್ರ ಉಪಸಮಿತಿಗೆ . 25.50 ಲಕ್ಷ, ಕುಸ್ತಿ ಉಪಸಮಿತಿಗೆ . 34.47 ಲಕ್ಷ, ಪ್ರಚಾರ ಉಪಸಮಿತಿಗೆ . 7.40 ಲಕ್ಷ, ದಸರಾ ದರ್ಶನ ಉಪಸಮಿತಿಗೆ . 18.50 ಲಕ್ಷ ನೀಡಲಾಗಿದೆ ಎಂದು ಅವರು ವಿವರಿಸಿದರು.

ಹಾಗೆಯೇ, ಅರಣ್ಯ ಇಲಾಖೆಗೆ . 1.46 ಕೋಟಿ, ರಂಗಾಯಣಕ್ಕೆ . 10 ಲಕ್ಷ, ಸಿವಿಲ್‌ ಮತ್ತು ವಿದ್ಯುತ್‌ ಕಾಮಗಾರಿಗಳಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ- . 1.88 ಕೋಟಿ, ಲೋಕೋಪಯೋಗಿ ಇಲಾಖೆ- . 1.86 ಕೋಟಿ ಹಾಗೂ ನಗರ ಪಾಲಿಕೆ . 2.01 ಕೋಟಿ ವೆಚ್ಚವಾಗಿದೆ ಎಂದರು.

ಸಂಸದ ಪ್ರತಾಪ್‌ ಸಿಂಹ, ಮೇಯರ್‌ ಶಿವಕುಮಾರ್‌, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್‌, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, ಎಸ್ಪಿ ಆರ್‌. ಚೇತನ್‌, ಜಿಪಂ ಸಿಇಒ ಬಿ.ಆರ್‌. ಪೂರ್ಣಿಮಾ, ನಗರ ಪಾಲಿಕೆ ಆಯುಕ್ತ ಲಕ್ಷ್ಮೇಕಾಂತ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್‌. ಮಂಜುನಾಥಸ್ವಾಮಿ, ಉಪ ವಿಭಾಗಾಧಿಕಾರಿ ಕಮಲಾಬಾಯಿ ಮೊದಲಾದವರು ಇದ್ದರು.

Latest Videos
Follow Us:
Download App:
  • android
  • ios