*  ನೈಸ್‌ ರಸ್ತೆಯ ಬ್ರಿಡ್ಜ್‌ ಸಮೀಪದ 100 ಅಡಿ ರಸ್ತೆಯಲ್ಲಿ ನಡೆದ ದುರ್ಘಟನೆ*  ಕೆಳಗೆ ಬಿದ್ದವಳ ಮೇಲೆ ಹರಿದ ಲಾರಿಯ ಹಿಂಬದಿ ಚಕ್ರ*  ಅಪಘಾತದ ಬಳಿಕ ಟಿಪ್ಪರ್‌ ಲಾರಿ ಬಿಟ್ಟು ಚಾಲಕ ಪರಾರಿ

ಬೆಂಗಳೂರು(ಏ.14): ಟಿಪ್ಪರ್‌ ಲಾರಿಯೊಂದು ದ್ವಿಚಕ್ರ ವಾಹನಕ್ಕೆ(Bike) ಡಿಕ್ಕಿ ಹೊಡೆದಿದ್ದರಿಂದ ರಸ್ತೆಗೆ ಬಿದ್ದ ಯುವತಿ ಮೇಲೆ ಟಿಪ್ಪರ್‌ ಲಾರಿ ಚಕ್ರ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿರುವ(Death) ಘಟನೆ ಕುಮಾರಸ್ವಾಮಿ ಲೇಔಟ್‌ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೆಂಗೇರಿ ಉಪನಗರದ ಬೀಡಿ ಕಾರ್ಮಿಕರ ಕಾಲೋನಿ ನಿವಾಸಿ ಶಬ್ರೀನ್‌ ತಾಜ್‌ (26) ಮೃತ ದುರ್ದೈವಿ. ಆಕೆಯ ಅಣ್ಣ ಶೇಕ್‌ ಹುಸೈನ್‌(27) ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Vijayapura Accident: ಬೈಕ್‌-ಲಾರಿ ಡಿಕ್ಕಿ: ತಂದೆ-ಮಗ ಸ್ಥಳದಲ್ಲಿಯೇ ಸಾವು

ಶಬ್ರೀನ್‌ ತಾಜ್‌ ಮತ್ತು ಶೇಕ್‌ ಹುಸೈನ್‌ ಬುಧವಾರ ದ್ವಿಚಕ್ರ ವಾಹನದಲ್ಲಿ ಬನ್ನೇರುಘಟ್ಟಕ್ಕೆ ತೆರಳಿ ಮನೆಗೆ ವಾಪಸಾಗುತ್ತಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ನೈಸ್‌ ರಸ್ತೆಯ ಬ್ರಿಡ್ಜ್‌ ಸಮೀಪದ 100 ಅಡಿ ರಸ್ತೆಯಲ್ಲಿ ಹೋಗುವಾಗ ಹಿಂದಿನಿಂದ ವೇಗವಾಗಿ ಬಂದಿರುವ ಟಿಪ್ಪರ್‌ ಲಾರಿ(Tipper Truck), ದ್ವಿಚಕ್ರ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಡಿಕ್ಕಿಯಾಗಿದೆ(Collision). ಈ ವೇಳೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಶೇಕ್‌ ಹುಸೈನ್‌ ರಸ್ತೆಯ ಬಲ ಭಾಗಕ್ಕೆ ಬಿದ್ದಿದ್ದಾನೆ. ಹಿಂಬದಿ ಕುಳಿತ್ತಿದ್ದ ಶಬ್ರೀನ್‌ ತಾಜ್‌ ರಸ್ತೆಯ ಎಡಭಾಗಕ್ಕೆ ಬಿದ್ದ ಪರಿಣಾಮ ಆಕೆ ಮೇಲೆ ಟಿಪ್ಪರ್‌ ಲಾರಿಯ ಹಿಂಬದಿ ಚಕ್ರ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tumakuru: ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ, ಸ್ಥಳದಲ್ಲೇ ಮೂವರ ದುರ್ಮರಣ

ಅಪಘಾತದ(Accident) ಬಳಿಕ ಸ್ಥಳದಲ್ಲೇ ಟಿಪ್ಪರ್‌ ಲಾರಿ ಬಿಟ್ಟು ಚಾಲಕ(Driver) ಪರಾರಿಯಾಗಿದ್ದಾನೆ. ಟಿಪ್ಪರ್‌ ಲಾರಿ ಜಪ್ತಿ ಮಾಡಿದ್ದು, ತಲೆಮರೆಸಿಕೊಂಡಿರುವ ಚಾಲಕನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಮಾರಸ್ವಾಮಿ ಲೇಔಟ್‌ ಸಂಚಾರ ಪೊಲೀಸ್‌(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸಾವು

ಗುಂಡ್ಲುಪೇಟೆ: ಹಿರೀಕಾಟಿ ಗೇಟ್‌ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ಮೈಸೂರು(Mysuru) ಜಿಲ್ಲೆ ನಂಜನಗೂಡು ತಾಲೂಕಿನ ತರದೆಲೆ ಗ್ರಾಮದ ನಂಜಶೆಟ್ಟಿ(62) ಮೃತ ವ್ಯಕ್ತಿ. ಈತ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ವೇಗವಾಗಿ ಬಂದ ಭಾರಿ ವಾಹನವೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ದೇಹವೆಲ್ಲ ನಜ್ಜುಗುಜ್ಜಾಗಿ ಮೃತರ ಗುರುತು ಪತ್ತೆಯಾಗಿರಲಿಲ್ಲ. ನಂತರ ಪೊಲೀಸರು ಮಾಹಿತಿ ಕಲೆ ಹಾಕಿದ ನಂತರ ಗುರುವಾರ ಸತ್ತ ವ್ಯಕ್ತಿ ಗುರುತು ಪತ್ತೆ ಹಚ್ಚಲಾಗಿದೆ. ಈ ಸಂಬಂಧ ಬೇಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತ ಮಾಡಿದ ವಾಹನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.