ಬಿ.ಸಿ.ರೋಡ್ ರೈಲು ನಿಲ್ದಾಣ ಅಭಿವೃದ್ಧಿಗೆ 26 ಕೋಟಿ ಅನುದಾನ ಬಿಡುಗಡೆ: ನಳಿನ್ ಕಟೀಲ್
ಅಮೃತ್ ಭಾರತ್ ಯೋಜನೆಯ ಮೂಲಕ ಬಿ.ಸಿ. ರೋಡು ರೈಲು ನಿಲ್ದಾಣದ ಅಭಿವೃದ್ಧಿಗಾಗಿ 26.18 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಬಿ.ಸಿ. ರೋಡು ರೈಲು ನಿಲ್ದಾಣವನ್ನು ಸುಸಜ್ಜಿತ, ಅತ್ಯಾಕರ್ಷಕವಾಗಿ ಮಾರ್ಪಾಡು ಮಾಡುವ ನಿಟ್ಟಿನಲ್ಲಿ ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದರು.
ಬಂಟ್ವಾಳ (ಆ.17): ಅಮೃತ್ ಭಾರತ್ ಯೋಜನೆಯ ಮೂಲಕ ಬಿ.ಸಿ. ರೋಡು ರೈಲು ನಿಲ್ದಾಣದ ಅಭಿವೃದ್ಧಿಗಾಗಿ 26.18 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಬಿ.ಸಿ. ರೋಡು ರೈಲು ನಿಲ್ದಾಣವನ್ನು ಸುಸಜ್ಜಿತ, ಅತ್ಯಾಕರ್ಷಕವಾಗಿ ಮಾರ್ಪಾಡು ಮಾಡುವ ನಿಟ್ಟಿನಲ್ಲಿ ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದರು. ಅವರು ಬಿ.ಸಿ. ರೋಡು ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.
ನಮ್ಮ ಬೇಡಿಕೆಯಂತೆ ಜಿಲ್ಲೆಯ ಮೂರು ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಅನುದಾನ ಮಂಜೂರಾಗಿದೆ. ಇದರಲ್ಲಿ ಈಗಾಗಲೇ ಮಂಗಳೂರಿನ ರೈಲು ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಬಂಟ್ವಾಳದ ಈ ರೈಲು ನಿಲ್ದಾಣದ ಅಭಿವೃದ್ಧಿಗೆ 26.18 ಕೋಟಿ ರು. ಅನುದಾನವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಇದರ ಮಾಸ್ಟರ್ ಪ್ಲಾನ್ ಕೂಡ ತಯಾರಿಸಿದೆ ಎಂದರು. ಜಿಲ್ಲೆಗೆ ವಂದೇ ಭಾರತ್ ರೈಲಿಗೆ ಬೇಡಿಕೆ ಇದ್ದು, ಪುತ್ತೂರುವರೆಗೆ ಇರುವ ರೈಲನ್ನು ಸುಬ್ರಹ್ಮಣ್ಯ ವರೆಗೆ ವಿಸ್ತರಣೆ ಮಾಡಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದೇನೆ. ರೈಲ್ವೆ ಸಂಬಂಧಿಸಿದಂತೆ ಸಂಪೂರ್ಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.
ಬಿಜೆಪಿಯ ಯಾವುದೇ ಶಾಸಕ ಕಾಂಗ್ರೆಸ್ ಕದ ತಟ್ಟುತ್ತಿಲ್ಲ: ಕೋಟ ಶ್ರೀನಿವಾಸ ಪೂಜಾರಿ
ಸುಸಜ್ಜಿತ ರೈಲ್ವೆ ನಿಲ್ದಾಣ: ಮಳೆಗಾಲದಲ್ಲಿ ಮಳೆ ನೀರು ಬೀಳದಂತೆ ಮೇಲ್ಛಾವಣಿ ನಿರ್ಮಾಣ, ಎರಡು ಸುಸಜ್ಜಿತ ಪ್ಲಾಟ್ ಫಾರಂ ನಿರ್ಮಾಣ, ಸುಸಜ್ಜಿತ ಕಟ್ಟಡ, ವೈಫೈ, ಪಾರ್ಕಿಂಗ್, ಪಾರ್ಕ್, ರಸ್ತೆ, ಶೌಚಾಲಯ, ಕ್ಯಾಂಟೀನ್ ಸಹಿತ ಸಮಗ್ರ ಅಭಿವೃದ್ಧಿ ನಡೆಯಲಿದೆ ಎಂದು ರೈಲ್ವೆ ಇಲಾಖೆಯ ಡೆಪ್ಯೂಟಿ ಚೀಫ್ ಎಂಜಿನಿಯರ್ ರಾಮಸುಬ್ಬಯ್ಯ ರೆಡ್ಡಿ ವಿವರ ನೀಡಿದರು.
ಮಾಟ ಮಂತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ನನಗೆ ಸೋಲಾಗಿದೆ: ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ
ಈ ಸಂದರ್ಭದಲ್ಲಿ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಸುಲೋಚನಾ ಜಿ.ಕೆ. ಭಚ್, ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ, ದೇವಪ್ಪ ಪೂಜಾರಿ, ರವೀಶ್ ಶೆಟ್ಟಿಕಾರ್ಕಳ, ಸುದರ್ಶನ ಬಜ, ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಸಾವನ್ ಕುಮಾರ್ ಹಾಗೂ ಡೆಪ್ಯೂಟಿ ಆಪರೇಷನ್ ಮ್ಯಾನೇಜರ್ ಸರವಣ, ಅಬ್ದುಲ್ ಜಾವೇದ್ ಅಜ್ಮಿ, ಸೈಟ್ ಎಂಜಿನಿಯರ್ ನವೀನ್, ಗುತ್ತಿಗೆ ವಹಿಸಿಕೊಂಡಿರುವ ಎಂ.ವಿ.ವಿ. ಸತ್ಯನಾರಾಯಣ್ ಸಂಸ್ಥೆಯ ಎನ್. ಜನಾರ್ದನ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.