ಮಾಟ ಮಂತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ನನಗೆ ಸೋಲಾಗಿದೆ: ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ
ಹಗರಿಬೊಮ್ಮನಹಳ್ಳಿ ಕ್ಷೇತ್ರವನ್ನು ಕಳೆದ 10 ವರ್ಷ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ಆದರೂ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನನ್ನನ್ನು ಸೋಲಿಸಲು ಕೇರಳದ ಮಂತ್ರವಾದಿಯ ಸಲಹೆ ಪಡೆದು ಮಾಟ- ಮಂತ್ರ ಮಾಡಿಸಿದರು.
ಕೊಟ್ಟೂರು (ಆ.17): ಹಗರಿಬೊಮ್ಮನಹಳ್ಳಿ ಕ್ಷೇತ್ರವನ್ನು ಕಳೆದ 10 ವರ್ಷ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ಆದರೂ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನನ್ನನ್ನು ಸೋಲಿಸಲು ಕೇರಳದ ಮಂತ್ರವಾದಿಯ ಸಲಹೆ ಪಡೆದು ಮಾಟ- ಮಂತ್ರ ಮಾಡಿಸಿದರು. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಸೋಲುವಂತಾಯಿತು ಎಂದು ಮಾಜಿ ಶಾಸಕ, ಕೆಎಂಎಫ್ ಅಧ್ಯಕ್ಷ ಎಸ್. ಭೀಮಾನಾಯ್ಕ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಸೋಲು- ಗೆಲುವು ಸಹಜ. ಕ್ಷೇತ್ರದಲ್ಲಿ ಅಭಿವೃದ್ಧಿ ಸೋತಿದೆ. ಈ ಸೋಲಿನಿಂದ ಧೃತಿಗೆಟ್ಟಿಲ್ಲ. ಆದರೆ ಚುನಾವಣೆಯಲ್ಲಿ ಕಣ್ಣೀರನ್ನು ಸುರಿಸಿ, ಮತದಾರರ ಅನುಕಂಪ ಗಿಟ್ಟಿಸಿಕೊಂಡ ಜೆಡಿಎಸ್ ಅಭ್ಯರ್ಥಿ ನನ್ನ ವಿರುದ್ಧ ಮಂತ್ರ ತಂತ್ರ ಹೆಣೆದರು. ಹೀಗಾಗಿ ಚುನಾವಣೆಯಲ್ಲಿ ಸೋಲು ಕಂಡೆ ಎಂದರು. ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಲು ಹಿಂದಿನ ಬಿಜೆಪಿ ಸರ್ಕಾರ ಮೇಲೆ ಶಾಸಕನಾಗಿ ತೀವ್ರ ಒತ್ತಡ ತಂದಿದ್ದೆ.
ತುಂಗಭದ್ರಾ ಕಾಲುವೆಗೆ ನ.30ರವರೆಗೆ ನೀರು: ಸಚಿವ ಶಿವರಾಜ ತಂಗಡಗಿ
ಆದರೆ ಈಗಿನ ಶಾಸಕ ನೇಮರಾಜ ನಾಯ್ಕ ಅವರು ಜಲಸಂಪನ್ಮೂಲ ಸಚಿವರಾಗಿದ್ದ ಗೋವಿಂದ ಕಾರಜೋಳಗೆ ಪತ್ರ ಬರೆದು ಈ ಯೋಜನೆ ಜಾರಿಗೊಳ್ಳದಂತೆ ತಡೆ ಹಿಡಿದರು. ಇದೀಗ ಶಾಸಕನಾದ ಮೇಲೆ ಮತ್ತೆ ಈ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡುತ್ತೇನೆಂದು ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಮುಖಂಡರಾದ ಕುರಿ ಶಿವಮೂರ್ತಿ, ಕೆ.ಎನ್. ಕೊಟ್ರೇಶ್, ಐ. ದಾರುಕೇಶ್, ಪವಾಡಿ ಹನುಮಂತಪ್ಪ, ಅಡಿಕೆ ಮಂಜುನಾಥ, ಗೂಳಿ ಮಲ್ಲಿಕಾರ್ಜುನ, ತೋಟದ ರಾಮಣ್ಣ ಮತ್ತಿತರರು ಇದ್ದರು.
ನಿತ್ಯ1 ಕೋಟಿ ಲೀಟರ್ ಹಾಲು ಉತ್ಪಾದನೆ ಗುರಿ: ಪ್ರತಿನಿತ್ಯ ಕೆಎಂಎಫ್ ಒಂದು ಕೋಟಿ ಲೀಟರ್ ಸಾಮರ್ಥ್ಯ ಹಾಲು ಉತ್ಪಾದನೆಯ ಗುರಿಯನ್ನು ಹೊಂದಿದ್ದು, ಈ ಕಾರಣಕ್ಕಾಗಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪ್ರತಿ ಮನೆಗೊಂದರಂತೆ ಆಕಳನ್ನು ಸಾಕುವಂತೆ ಪ್ರೋತ್ಸಾಹಿಸುವ ಯೋಜನೆ ಹಮ್ಮಿಕೊಳ್ಳಬೇಕೆಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಎಸ್. ಭೀಮಾನಾಯ್ಕ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಹುಲ್ ಗಾಂಧಿ ಇಮೇಜ್ ಡೌನ್ ಮಾಡಲು ಬಿಜೆಪಿಯವರಿಂದ ಸಾವಿರಾರು ಕೋಟಿ ಖರ್ಚು: ಸಚಿವ ಸಂತೋಷ್ ಲಾಡ್
ಕೆಎಂಎಫ್ ರಾಜ್ಯದಲ್ಲಿನ ಹಾಲಿ ಒಕ್ಕೂಟಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಯೋಜನೆಗಳನ್ನು ರೂಪಿಸಿದೆ ಹೊರತು ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಒಕ್ಕೂಟ ಸೇರಿದಂತೆ ಇತರ ಯಾವುದೇ ಒಕ್ಕೂಟಗಳನ್ನು ವಿಭಜಿಸುವ ಪ್ರಸ್ತಾಪ ಇಲ್ಲವೇ ಇಲ್ಲ ಸ್ಪಷ್ಟಪಡಿಸಿದರು. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ರಾಜ್ಯ ಕಾಂಗ್ರೆಸ್ ಸರ್ಕಾರ 6 ತಿಂಗಳಲ್ಲಿ ಅಧಿಕಾರದಲ್ಲಿ ಪತನಗೊಳ್ಳುತ್ತದೆ ಎಂಬ ಹೇಳಿಕೆ ಹತಾಶೆಯಿಂದ ಕೂಡಿದೆ. ಮೊದಲು ಬಿಜೆಪಿಯನ್ನು ಉಳಿಸಿಕೊಂಡರೆ ಅದೇ ಆ ಪಕ್ಷಕ್ಕೆ ದೊಡ್ಡ ಸಾಧನೆಯಾಗಲಿದೆ ಎಂದು ವ್ಯಂಗ್ಯವಾಡಿದರು.