ಮಂಗಳೂರು(ಮೇ 17): ಶುಕ್ರವಾರ ಸೋಂಕು ಪತ್ತೆಯಾದ ಸುರತ್ಕಲ್‌ ಗುಡ್ಡೆಕೊಪ್ಲ ಮೂಲದ 68 ವರ್ಷದ ಮಹಿಳೆ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಹಿತಿ ಬೆಳಕಿಗೆ ಬಂದ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಯ 25 ಮಂದಿ ಸಿಬ್ಬಂದಿಯನ್ನು ಅಬ್ಸರ್ವೇಶನ್‌ನಲ್ಲಿ ಇರಿಸಲಾಗಿದೆ.

ರೋಗಿಯ ನಿರ್ವಹಣೆಯಲ್ಲಿ ಒಳಗೊಂಡ ಈ 25 ಮಂದಿ ಸಿಬ್ಬಂದಿಯಲ್ಲಿ ಯಾರಿಗೂ ಇದುವರೆಗೆ ಕೊರೋನಾ ಪಾಸಿಟಿವ್‌ ಬಂದಿಲ್ಲ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್‌ ಮಾರ್ಲ ತಿಳಿಸಿದ್ದಾರೆ.

ಉಡುಪಿಯಲ್ಲಿ ಭಾರೀ ಮಳೆ: ಹತ್ತಾರು ಮನೆಯೊಳಗೆ ನೀರು

ಮೇ 12ರಂದು ರಾತ್ರಿ 10.55ರ ವೇಳೆಗೆ ವೃದ್ಧೆ ಎ.ಜೆ. ಆಸ್ಪತ್ರೆಗೆ ಬಂದಿದ್ದರು. ಅವರನ್ನು ಸುರತ್ಕಲ್‌ನ ಖಾಸಗಿ ಆಸ್ಪತ್ರೆಯಿಂದ ಕಳಿಸಿಕೊಡಲಾಗಿತ್ತು. ಕಾರ್ಡಿಯೊಮಿಯೋಪಥಿ ಮತ್ತು ಚರ್ಮದ ಸಮಸ್ಯೆ ಹಿನ್ನೆಲೆಯಲ್ಲಿ ಆಗಮಿಸಿದ್ದರು. ತಕ್ಷಣ ಐಸೊಲೇಷನ್‌ ಐಸಿಯುಗೆ ಶಿಫ್ಟ್‌ ಮಾಡಲಾಗಿತ್ತು.

ಹಿಂದಿನ ತಿಂಗಳ ವಿದ್ಯುತ್‌ ಬಿಲ್ ಸರಾಸರಿ ಆಧಾರದ ಮೇಲೆ ಈ ತಿಂಗಳ ಬಿಲ್

ಈ ವೇಳೆ ಸ್ವಲ್ಪ ಪ್ರಮಾಣದಲ್ಲಿ ಜ್ವರದ ಲಕ್ಷಣಗಳು ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಮೇ 13ರಂದು ವೃದ್ಧೆಯ ಸ್ವಾಬ್‌ ಸಂಗ್ರಹ ಮಾಡಿ ವೆನ್ಲಾಕ್‌ ಆಸ್ಪತ್ರೆ ಲ್ಯಾಬ್‌ಗೆ ಕಳುಹಿಸಿಕೊಡಲಾಗಿತ್ತು. ಆ ಸ್ಯಾಂಪಲ್‌ನ ವರದಿಯು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಲಭಿಸಿದ್ದು ಪಾಸಿಟಿವ್‌ ಬಂದಿತ್ತು. ಬಳಿಕ ಅವರನ್ನು ಶುಕ್ರವಾರ 3.30ಕ್ಕೆ ವೆನ್ಲಾಕ್‌ಗೆ ಶಿಫ್ಟ್‌ ಮಾಡಲಾಗಿತ್ತು.

ಅಧಿಕಾರಿಗಳಿಗೆ ಮಾಹಿತಿ ಇಲ್ಲ!:

ಈ ಕುರಿತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ಈ ಕುರಿತು ಯಾವುದೇ ಮಾಹಿತಿ ಇಲ್ಲ, ಪರಿಶೀಲಿಸುವುದಾಗಿ ಹೇಳಿದ್ದಾರೆ. ಸೋಂಕಿನ ಮೂಲ ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಶುಕ್ರವಾರ ಜಿಲ್ಲಾಧಿಕಾರಿ ತಿಳಿಸಿದ್ದರು. ಆದರೆ ಯಾವುದೇ ಮಾಹಿತಿ ಆಡಳಿತದ ಕಡೆಯಿಂದ ಇದುವರೆಗೂ ಬಂದಿಲ್ಲ.