ಉಡುಪಿ(ಮೇ 17): ಲಾಕ್‌ಡೌನ್‌ ಸಂದರ್ಭದಲ್ಲಿ ವಿದ್ಯುತ್‌ ಶುಲ್ಕ ಹೆಚ್ಚಳ ಮತ್ತು ಈ ಬಗ್ಗೆ ಗ್ರಾಹಕರಲ್ಲಾಗಿರುವ ಗೊಂದಲಗಳ ಬಗ್ಗೆ ಶನಿವಾರ ಉಡುಪಿ ಶಾಸಕ ಕೆ. ರಘುಪತಿ ಭಟ್‌ ಅವರು ತಮ್ಮ ಕಚೇರಿಯಲ್ಲಿ ಮೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಮೆಸ್ಕಾಂ ಅಧಿಕಾರಿಗಳು ಗ್ರಾಹಕರು ಡಿಸೆಂಬರ್‌, ಜನವರಿ, ಫೆಬ್ರವರಿ ತಿಂಗಳಲ್ಲಿ ಬಳಸಿದ ವಿದ್ಯುತ್‌ ಸರಾಸರಿ ಆಧಾರದ ಮೇಲೆ ಮೇ ತಿಂಗಳಲ್ಲಿ ವಿದ್ಯುತ್‌ ಬಿಲ್‌ನ್ನು ತಂತ್ರಾಂಶದ ಮೂಲಕ ನೀಡಲಾಗಿದೆ ಹಾಗೂ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವರ್ಗೀಕರಣದ ಆಧಾರದ ಶುಲ್ಕವನ್ನು ವಿಧಿಸಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಆಟಕ್ಕೆ ಬಿಜೆಪಿ ಬ್ರೇಕ್‌: ರಾಜಕೀಯ ಬೆಳವೆಣಿಗೆಗೆ ಸಿಎಂ BSY ಬೇಸರ

ನಿಗದಿತ ಅವಧಿಯಲ್ಲಿ ವಿದ್ಯುತ್‌ ಶುಲ್ಕವನ್ನು ಪಾವತಿಸದೆ ಇರುವವರಿಗೆ ಶೇ.1ರಷ್ಟುಬಡ್ಡಿ ದರವನ್ನು ವಿಧಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಶುಲ್ಕವನ್ನು ಪಾವತಿ ಮಾಡಿದವರಿಗೆ ಯಾವುದೇ ಬಡ್ಡಿ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಡಿಮೆ ವಿದ್ಯುತ್‌ ಬಳಸಿದ್ದರೂ ಸರಾಸರಿ ಬಳಕೆಯ ಆಧಾರದ ಹಿನ್ನೆಲೆಯಲ್ಲಿ ನೀಡಿದ ಬಿಲ್‌ ಹೆಚ್ಚಾಗಿದ್ದರೆ ಅದನ್ನು ಮುಂದಿನ ತಿಂಗಳು ಮರುಹೊಂದಾಣಿಕೆ ಮಾಡುವಂತೆ ತಂತ್ರಾಂಶವನ್ನು ರೂಪಿಸಿ ಸರಿಪಡಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು ಮತ್ತು ವಿದ್ಯುತ್‌ ಬಳಕೆಯ ಶುಲ್ಕದ ಬಗ್ಗೆ ಬಳಕೆದಾರರಿಗೆ ಇರುವ ಗೊಂದಲವನ್ನು ಸೂಕ್ತ ಮಾಹಿತಿಯ ಮೂಲಕ ನಿವಾರಿಸುವಂತೆ ತಿಳಿಸಿದರು.

ಕೊರೋನಾ ಮಧ್ಯೆಯೂ ರಾಜಕೀಯ: BJPಗೆ ಶಾಕ್‌ಗೆ ಕೊಟ್ಟ ಆಪರೇಷನ್‌ ಹಸ್ತ..!

ಈ ಸಂದರ್ಭದಲ್ಲಿ ಮೆಸ್ಕಾಂನ ಅಧೀಕ್ಷಕ ಎಂಜಿನಿಯರ್‌ ನರಸಿಂಹ ಪಂಡಿತ್‌, ಕಾರ್ಯನಿರ್ವಾಹಕ ಅಭಿಯಂತ ದಿನೇಶ್‌ ಉಪಾಧ್ಯ ಹಾಗೂ ಅಧಿಕಾರಿಗಳು ಮೆಸ್ಕಾಂನ ಹಿರಿಯ ಲೆಕ್ಕಾಧಿಕಾರಿ ಮತ್ತು ಸಹಾಯಕ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.