ಉಡುಪಿ(ಮೇ 17): ಉಡುಪಿ- ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ಎ ಕಾಮಗಾರಿಯ ಆಮೆಗತಿಯಿಂದಾಗಿ ಶುಕ್ರವಾರ ಸುರಿದ ಮಳೆಯ ನೀರು ಇಲ್ಲಿನ ಬಾಸೆಲ್‌ ಮಿಷನ್‌ ಶಾಲಾ ಬಳಿಯ ಹತ್ತಾರು ಮನೆಗಳೊಳಗೆ ನುಗ್ಗಿ ಆವಾಂತರ ಸೃಷ್ಟಿಸಿದೆ.

ಕಳೆದೆರಡು ವರ್ಷಗಳಿಂದ ಈ ರಾ.ಹೆ.ಯ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ರಸ್ತೆಯನ್ನು ಹಿಂದಿನ ನೆಲಮಟ್ಟದಿಂದ ನಾಲ್ಕೈದು ಅಡಿ ಎತ್ತರಿಸಲಾಗಿದೆ. ನೀರು ಹರಿಯುವ ಚರಂಡಿಯನ್ನು ಪೂರ್ಣಗೊಳಿಸದೆ, ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದೆ.

ಹಿಂದಿನ ತಿಂಗಳ ವಿದ್ಯುತ್‌ ಬಿಲ್ ಸರಾಸರಿ ಆಧಾರದ ಮೇಲೆ ಈ ತಿಂಗಳ ಬಿಲ್

ಮನೆಯೊಳಗಿನ ಕೋಣೆ, ಅಡುಗಮನೆಗೂ ನೀರು ನುಗ್ಗಿ ವಸ್ತುಗಳೆಲ್ಲಾ ಒದ್ದೆಯಾಗಿವೆ, ಪಾತ್ರೆ ಪಗಡಿಗಳು ನೀರಿನಲ್ಲಿ ತೇಲುತ್ತಿದ್ದು, ರಾತ್ರಿ ಮತ್ತೆ ಮಳೆ ಸುರಿದರೆ ಜನರು ಮಲಗುವುದಕ್ಕೂ ಸಾಧ್ಯವಾಗದಂತಾಗಿದೆ. ಮಳೆಗಾಲದಲ್ಲಿ ಈ ಸಮಸ್ಯೆಯ ಸಾಧ್ಯತೆಯ ಬಗ್ಗೆ ಇಲ್ಲಿನ ಜನರು ಅಧಿಕಾರಿಗಳ ಗನಮಕ್ಕೆ ತಂದಿದ್ದರೂ ಕಾಮಗಾರಿ ತ್ವರಿತಗೊಳಿಸದೆ, ಜನರ ಬವಣೆಗೆ ಕಾರಣರಾಗಿದ್ದಾರೆ. ಪೂರ್ಣ ಮುಂಗಾರು ಆರಂಭವಾದಲ್ಲಿ ಇಲ್ಲಿನ ಹಲವಾರು ಮನೆಗಳು ನೀರಿನಲ್ಲಿ ಮುಳುಗುವ, ಕುಸಿದು ಬೀಳುವ ಅಪಾಯವಿದೆ.