ಕುರಿಗಾಯಿಗಳು ಬೆಳ್ಳಂಬೆಳಗ್ಗೆ ಕುರಿ ಮೇಯಿಸಲು ಹೋಗುತ್ತಿದ್ದರು. ಈ ವೇಳೆ ಟ್ರಕ್ ರಸ್ತೆ ಬಳಿ ಹೋಗುತ್ತಿದ್ದ ಕುರಿಗಳಿಗೆ ಗುದ್ದಿದ ಪರಿಣಾಮ ದುರ್ಘಟನೆ ಸಂಭವಿಸಿದೆ. 

ಯಾದಗಿರಿ(ಸೆ.16): ರಭಸವಾಗಿ ಟ್ರಕ್ ಗುದ್ದಿದ ಪರಿಣಾಮ 25 ಕುರಿಗಳು ಸಾವನ್ನಪ್ಪಿದ ಘಟನೆ ಯಾದಗಿರಿ ನಗರದ ಹೊರಭಾಗದ ಚಿತ್ತಾಪುರ ರಸ್ತೆಯಲ್ಲಿ ಇಂದು(ಶನಿವಾರ) ಬೆಳಗಿನ ಜಾವ 5 ಗಂಟೆಗೆ ನಡೆದಿದೆ. 

ಕುರಿಗಾಯಿಗಳು ಬೆಳ್ಳಂಬೆಳಗ್ಗೆ ಕುರಿ ಮೇಯಿಸಲು ಹೋಗುತ್ತಿದ್ದರು. ಈ ವೇಳೆ ಟ್ರಕ್ ರಸ್ತೆ ಬಳಿ ಹೋಗುತ್ತಿದ್ದ ಕುರಿಗಳಿಗೆ ಗುದ್ದಿದ ಪರಿಣಾಮ ದುರ್ಘಟನೆ ಸಂಭವಿಸಿದೆ. 

ರಾಜ್ಯದ ಆ ಜಿಲ್ಲೆಗೂ ಕಾಲಿಟ್ಟಿದ್ದಾರಾ ಉಗ್ರರು ? ಐಸಿಸ್‌ ನಂಟು ಇರುವ ಶಂಕೆ !

ಟ್ರಕ್ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಗಪ್ಪ, ಅಂಬಲಯ್ಯ, ಧರ್ಮರಾಜ ಹಾಗೂ ನಿಂಗಪ್ಪ ಎಂಬ ಕುರಿಗಾಯಿಗಳಿಗೆ ಸೇರಿದ ಕುರಿಗಳಾಗಿವೆ. 

ಕುರಿಗಾಯಿಗಳು ಯಾದಗಿರಿ ಜಿಲ್ಲೆಯ ಶಹಾಪುರ‌ ತಾಲೂಕಿನ ನಾಗನಟಗಿ ಗ್ರಾಮದದವರಾಗಿದ್ದಾರೆ ಅಂತ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಯಾದಗಿರಿ ಸಂಚಾರಿ ಪೊಲೀಸರು ಭೇಟಿ ನೀಡಿ ಕೇಸ್ ದಾಖಲಿಸಿಕೊಂಡಿದ್ದಾರೆ.