Asianet Suvarna News Asianet Suvarna News

ಮೊರಾರ್ಜಿ ಕಾಲೇಜು : ಹೊರಬಿತ್ತು ಆತಂಕದ ವಿಚಾರ

ರಾಜ್ಯದಲ್ಲಿ ಈಗಾಗಲೇ ಅನೇಕ ತರಗತಿಗಳಿಗೆ ಶಾಲೆ - ಕಾಲೇಜುಗಳನ್ನು ಆರಂಭ ಮಾಡಲಾಗಿದೆ. ಆದರೆ ಇದೀಗ ವಸತಿ ಶಾಲೆಯಲ್ಲಿ ನಡೆದ ಪರೀಕ್ಷೆಯಲ್ಲಿ ಆತಂಕದ ವಿಚಾರ ಹೊರ ಬಂದಿದೆ.  ಹೆಚ್ಚು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ. 

25 Kodagu Morarji College Students Corona Test Result Positive snr
Author
Bengaluru, First Published Jan 28, 2021, 7:59 AM IST

ಮಡಿಕೇರಿ (ಜ.28):  ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ 24 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಆತಂಕ ಮೂಡಿ​ಸಿ​ದೆ.

ಕಳೆದ ವಾರವಷ್ಟೇ ಕಾಲೇ​ಜಿನ ವಿದ್ಯಾರ್ಥಿಯೊಬ್ಬ​ನಿಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆ​ಲೆ​ಯಲ್ಲಿ ಪೋಷಕರನ್ನು ಕರೆಸಿಕೊಂಡು ಆ ವಿದ್ಯಾರ್ಥಿಯನ್ನು ಮನೆಗೆ ಕಳುಹಿಸಿಕೊಡಲಾಗಿತ್ತು. ಜ್ವರ ಗುಣ​ಮು​ಖ​ವಾ​ಗದ ಕಾರಣ ಆ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಮವಾರ ಕೋವಿಡ್‌ ದೃಢಪಟ್ಟಿತ್ತು. ಈ ಹಿನ್ನೆ​ಲೆ​ಯಲ್ಲಿ ಮುನ್ನೆ​ಚ್ಚ​ರಿಕಾ ಕ್ರಮ​ವಾಗಿ ತಕ್ಷಣ ಪ್ರಾಂಶುಪಾಲ ಲೋಕೇಶ್‌ ಅವರು ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಕರೆಸಿ ಕಾಲೇಜಿನಲ್ಲೇ ಎಲ್ಲಾ ವಿದ್ಯಾರ್ಥಿಗಳಿಗೆ ಕೊರೋನಾ ಟೆಸ್ಟ್‌ ಮಾಡಿಸಿದ್ದು, ಈ ವೇಳೆ 24 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ.

'ಬೆಂಗ್ಳೂರಲ್ಲಿ ನಿತ್ಯ 20 ಸಾವಿರ ಜನರಿಗೆ ಕೊರೋನಾ ಲಸಿಕೆ' .

ಜ.11ರಿಂದ ಕಾಲೇಜು ಆರಂಭವಾಗಿತ್ತು. ಈ ವೇಳೆ ಕೋವಿಡ್‌ ನೆಗೆ​ಟಿವ್‌ ವರದಿ ನೋಡಿಯೇ ವಿದ್ಯಾ​ರ್ಥಿ​ಗ​ಳಿಗೆ ತರಗತಿಗೆ ಹಾಜ​ರಾ​ಗಲು ಅವಕಾಶ ನೀಡಲಾಗಿತ್ತು. ಈ ಮಧ್ಯೆ, ಒಬ್ಬ ವಿದ್ಯಾರ್ಥಿ ಅನಾ​ರೋ​ಗ್ಯದ ಕಾರ​ಣ​ದಿಂದಾಗಿ ಒಮ್ಮೆ ಮನೆಗೆ ಹೋಗಿ ಬಂದಿದ್ದ. ಹೀಗಾಗಿ ಆ ವಿದ್ಯಾರ್ಥಿಗೆ ಕೊರೋನಾ ಸೋಂಕು ತಗುಲಿರಬಹುದು. ಆ ವಿದ್ಯಾ​ರ್ಥಿ​ಯಿಂದ ಇತ​ರ​ರಿಗೆ ಹಬ್ಬಿ​ರ​ಬ​ಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಈ ವಸತಿ ಶಾಲೆ​ಯಲ್ಲಿ ದ್ವಿತೀಯ ಪಿಯುಸಿಯಲ್ಲಿ ಒಟ್ಟು 76 ವಿದ್ಯಾರ್ಥಿಗಳಿದ್ದು, 49 ಮಂದಿ ಕೋವಿಡ್‌ ಟೆಸ್ಟ್‌ ವರದಿ ನೆಗೆ​ಟಿವ್‌ ಬಂದಿದೆ. ಇಬ್ಬರು ಹೆಣ್ಣು ಮಕ್ಕಳಿಗೆ ನೆಗ​ಡಿಯ ಲಕ್ಷಣವಿದ್ದು, ಅವ​ರನ್ನು ವಸತಿ ನಿಲಯದಲ್ಲೇ ಪ್ರತ್ಯೇಕವಾಗಿ ಇರಿಸಲಾಗಿದೆ. ಸೋಂಕಿತ ವಿದ್ಯಾ​ರ್ಥಿ​ಗ​ಳನ್ನು ಮಡಿ​ಕೇರಿ ಆಸ್ಪ​ತ್ರೆಗೆ ದಾಖ​ಲಿ​ಸ​ಲಾ​ಗಿದ್ದು, ಎಲ್ಲಾ ವಿದ್ಯಾ​ರ್ಥಿ​ಗಳು ಆರೋ​ಗ್ಯ​ದಿಂದಿದ್ದಾರೆ ಎಂದು ಅಧಿ​ಕಾ​ರಿ​ಗಳು ತಿಳಿ​ಸಿ​ದ್ದಾ​ರೆ.

ಘಟನೆ ಹಿನ್ನೆ​ಲೆ​ಯಲ್ಲಿ ವಸತಿ ಕಾಲೇ​ಜನ್ನು ಸಂಪೂ​ರ್ಣ ಸ್ಯಾನಿ​ಟೈಸ್‌ ಮಾಡ​ಲಾ​ಗಿ​ದೆ.

Follow Us:
Download App:
  • android
  • ios