Covid Crisis: ಕೊರೋನಾ ದಿಢೀರ್ ಹೆಚ್ಚಳ..!
* ಬೆಂಗಳೂರಲ್ಲಿ ಏಕಾಏಕಿ 200ರ ಗಡಿ ದಾಟಿದ ಸೋಂಕಿತರ ಸಂಖ್ಯೆ
* ಕೆಲ ದಿನದಿಂದ 100ರ ಆಸುಪಾಸಿನಲ್ಲಿದ್ದ ಕೊರೋನಾ
* ಶೇ.1.15 ಪಾಸಿಟಿವಿಟಿ ದರ ದಾಖಲು
ಬೆಂಗಳೂರು(ಮಾ.04): ನಗರದಲ್ಲಿ ಇದ್ದಕ್ಕಿದ್ದಂತೆ ಕೋವಿಡ್(Covid-19) ದೈನಂದಿನ ಪ್ರಕರಣದಲ್ಲಿ ಹೆಚ್ಚಳವಾಗಿದೆ. ಬುಧವಾರವಷ್ಟೆ 106ಕ್ಕೆ ಕುಸಿದಿದ್ದ ದೈನಂದಿನ ಸೋಂಕಿತರ ಸಂಖ್ಯೆ ಗುರುವಾರ ದಿಢೀರ್ 239ಕ್ಕೆ ಏರಿಕೆಯಾಗಿದೆ, ನಾಲ್ವರು ಮೃತಪಟ್ಟಿದ್ದಾರೆ(Death). 340 ಮಂದಿ ಚೇತರಿಸಿಕೊಂಡಿದ್ದಾರೆ.
ಕಳೆದ ಕೆಲ ದಿನಗಳಿಂದ ನೂರರ ಅಸುಪಾಸಿನಲ್ಲಿದ್ದ ದೈನಂದಿನ ಪ್ರಕರಣಗಳ ಸಂಖ್ಯೆ ಮತ್ತೆ 200ರ ಗಡಿ ದಾಟಿದೆ. ಕೋವಿಡ್ ಪರೀಕ್ಷೆಯಲ್ಲಿ(Covid Test) ಹೆಚ್ಚಳವಾಗಿರದಿದ್ದರೂ ಸೋಂಕು ಹೆಚ್ಚು ಮಂದಿಯಲ್ಲಿ ಪತ್ತೆಯಾಗಿದೆ. ಹಾಗೆಯೇ ಕಂಟೈನ್ಮೆಂಟ್ ಸಂಖ್ಯೆಯಲ್ಲೂ ಏರಿಳಿತವಾಗಿಲ್ಲ. ರಾರಯಂಡಂ ಸ್ಯಾಂಪಲ್‌ನಲ್ಲಿ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
Covid Crisis: ಕೋವಿಡ್ ನಿರ್ಬಂಧ ಸಡಿಲಕ್ಕೆ ರಾಜ್ಯಗಳಿಗೆ ಕೇಂದ್ರ ಸೂಚನೆ
17,343 ಕೋವಿಡ್ ಪರೀಕ್ಷೆ ನಡೆದಿದ್ದು, ಶೇ.1.15 ಪಾಸಿಟಿವಿಟಿ ದರ(Positivity Rate) ದಾಖಲಾಗಿದೆ. 2,630 ಸಕ್ರಿಯ ಪ್ರಕರಣಗಳಿದ್ದು, 110 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 15 ಮಂದಿ ವೆಂಟಿಲೇಟರ್ ಸಹಿತ ತೀವ್ರ ನಿಗಾ ವಿಭಾಗ, 30 ಮಂದಿ ತೀವ್ರ ನಿಗಾ ವಿಭಾಗ, 14 ಮಂದಿ ಆಮ್ಲಜನಕಯುಕ್ತ ಹಾಸಿಗೆ ಮತ್ತು 51 ಮಂದಿ ಜನರಲ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ ಮತ್ತು ಪೂರ್ವ ಹಾಗೂ ಯಲಹಂಕ ವಲಯದಲ್ಲಿ ತಲಾ ಒಂದು ಕಂಟೈನ್ಮೆಂಟ್ ವಲಯಗಳಿವೆ. ಬೆಳ್ಳಂದೂರು, ದೊಡ್ಡನೆಕ್ಕುಂದಿ, ವರ್ತೂರು, ಅರಕೆರೆ, ಹಗದೂರು, ಬೇಗೂರು, ಸಿಂಗಸಂದ್ರ, ನ್ಯೂ ತಿಪ್ಪಸಂದ್ರ, ಎಚ್‌ಎಸ್‌ಆರ್ ಬಡಾವಣೆ ಮತ್ತು ಹೆಮ್ಮಿಗೆಪುರದಲ್ಲಿ ಹೆಚ್ಚು ಪ್ರಕರಣಗಳಿವೆ. ಪದ್ಮನಾಭ ನಗರ, ಗುರುಪ್ಪನಪಾಳ್ಯ, ಯಡಿಯೂರು, ಗಾಳಿ ಅಂಜನೇಯ ಟೆಂಪಲ್, ಶ್ರೀನಗರ, ಆಡುಗೋಡಿ, ಲಕ್ಕಸಂದ್ರ, ಸಿದ್ದಾಪುರ, ಸುಂಕೆನಹಳ್ಳಿ ಮತ್ತು ಅಜಾದ್ ನಗರದಲ್ಲಿ ಕಳೆದ ಏಳು ದಿನದಿಂದ ಒಂದೂ ಪ್ರಕರಣ ಪತ್ತೆಯಾಗಿಲ್ಲ.
ಲಸಿಕೆ ಅಭಿಯಾನ
ನಗರದಲ್ಲಿ 25,576 ಮಂದಿ ಕೋವಿಡ್ ಲಸಿಕೆ(Vaccine) ಪಡೆದಿದ್ದಾರೆ. 1,286 ಮಂದಿ ಮೊದಲ ಡೋಸ್, 20,823 ಮಂದಿ ಎರಡನೇ ಡೋಸ್ ಮತ್ತು 3,467 ಮಂದಿ ಮುನ್ನೆಚ್ಚರಿಕೆ ಡೋಸ್ ಪಡೆದಿದ್ದಾರೆ. ಈವರೆಗೆ ನಗರದಲ್ಲಿ ಒಟ್ಟು 1.78 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
Summer Holidays ಬದಲಾಯ್ತು ಶಾಲೆ ಬೇಸಿಗೆ ರಜೆ: ಕೆಲ ಮಹತ್ವದ ಬದಲಾವಣೆ ತಂದ ಶಿಕ್ಷಣ ಇಲಾಖೆ
6561 ಕೋವಿಡ್ ಕೇಸು: ಎರಡೂವರೆ ತಿಂಗಳಲ್ಲೇ ಕನಿಷ್ಠ
ನವದೆಹಲಿ: ದೇಶದಲ್ಲಿ(India) ದೈನಂದಿನ ಕೋವಿಡ್ ಪ್ರಕರಣಗಳು ಮತ್ತಷ್ಟುಕಡಿಮೆಯಾಗಿದ್ದು ಗುರುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 6,561 ಪ್ರಕರಣಗಳು ದಾಖಲಾಗಿವೆ. ಇದು ಎರಡೂವರೆ
ತಿಂಗಳ ಕನಿಷ್ಠ.
ಇದೇ ಅವಧಿಯಲ್ಲಿ 142 ಸೋಂಕಿತರು ಸಾವಿಗೀಡಾಗಿದ್ದಾರೆ. ಸತತ 25 ದಿನಗಳಿಂದ ದೇಶದಲ್ಲಿ 1 ಲಕ್ಷಕ್ಕೂ ಕಡಿಮೆ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದು, ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 77,152ಕ್ಕೆ ಕುಸಿದಿದೆ. ದೈನಂದಿನ ಪಾಸಿಟಿವಿಟಿ ದರವು 0.74 ರಷ್ಟಿದ್ದು, ವಾರದ ಪಾಸಿಟಿವಿಟಿ ದರವು 0.99 ರಷ್ಟಿದೆ. ದೇಶದಲ್ಲಿ ಈವರೆಗೆ 178.02 ಕೋಟಿ ಡೋಸು ಲಸಿಕೆ ವಿತರಿಸಲಾಗಿದೆ.
ಜೂನ್‌ನಲ್ಲಿ ಭಾರತಕ್ಕೆ 4ನೇ ಕೋವಿಡ್ ಅಲೆ: ಮತ್ತೆ ಆತಂಕ
ಹೈದರಾಬಾದ್: ದೇಶದಲ್ಲಿ ಕೋವಿಡ್ 3ನೇ ಅಲೆ (Covid Third Wave) ಇನ್ನೇನು ಅಂತ್ಯಕ್ಕೆ ಸಮೀಪಿಸಿದೆ ಅನ್ನುವಷ್ಟರಲ್ಲೇ, 2022ರ ಜೂನ್ ಅಂತ್ಯದ ವೇಳೆಗೆ ದೇಶದ ಮೇಲೆ ಸೋಂಕಿನ 4ನೇ ದಾಳಿಯ ಸಾಧ್ಯತೆ ಇದೆ ಎಂದು ಐಐಟಿ (IIT) ಕಾನ್ಪುರದ ತಜ್ಞರ ತಂಡ ಎಚ್ಚರಿಸಿದೆ.
ಒಂದು ವೇಳೆ 4ನೇ ಅಲೆ ಕಾಣಿಸಿಕೊಂಡಿದ್ದೇ ಆದಲ್ಲಿ ಅದರ ಪರಿಣಾಮಗಳು, ಆಗ ಹುಟ್ಟಿಕೊಳ್ಳಬಹುದಾದ ಹೊಸ ರೂಪಾಂತರಿಯ ತೀವ್ರತೆ, ಕೋವಿಡ್ ಲಸಿಕೆ (Covid Vaccine)ವಿತರಣೆಯ ಸ್ಥಿತಿಗತಿ, ಬೂಸ್ಟರ್ ಡೋಸ್ (Booster Dose) ನೀಡಿಕೆ ಅವಲಂಬಿಸಿರುತ್ತದೆ ಎಂದು ಹೇಳಿದೆ. ಐಐಟಿ ಕಾನ್ಪುರದ ಎಸ್.ಪಿ.ರಾಜೇಶ್‌ಭಾಯಿ, ಶುಭ್ರಾಶಂಕರ್ ಧರ್ ಮತ್ತು ಶಲಭ್ ಅವರನ್ನೊಳಗೊಂಡ ತಂಡವು ಬೂಟ್‌ಸ್ಟ್ರಾಪ್ ಎಂಬ ಸಾಂಖ್ಯಿಕ ಮಾದರಿಯನ್ನು ಆಧರಿಸಿ ವರದಿಯೊಂದನ್ನು ತಯಾರಿಸಿದ್ದು, ಅದರಲ್ಲಿ ಈ ಮಾಹಿತಿ ಇದೆ.
ಮುನ್ಸೂಚನೆ ಏನು?:
ತಜ್ಞರ ತಂಡದ ವರದಿ ಅನ್ವಯ, ಭಾರತದಲ್ಲಿ ಕೋವಿಡ್ ಮೊದಲ ಪ್ರಕರಣ ಕಾಣಿಸಿಕೊಂಡ (2020 ಜ.30) 936 ದಿನಗಳ ನಂತರ 4ನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅಂದರೆ 4ನೇ ಅಲೆಯು ಜೂನ್ 22ರ ವೇಳೆಗೆ ಆರಂಭಗೊಂಡು, ಆಗಸ್ಟ್ 23-31ರ ಅವಧಿಯಲ್ಲಿ ತನ್ನ ಗರಿಷ್ಠ ಮಟ್ಟಮುಟ್ಟಲಿದೆ. ಅಕ್ಟೋಬರ್ 24ರ ವೇಳೆಗೆ ಅದು ಅಂತ್ಯವಾಗಲಿದೆ.
ಅಂದರೆ ಸುಮಾರು 4 ತಿಂಗಳ ಕಾಲ ದೇಶದಲ್ಲಿ ತನ್ನ ಪ್ರಭಾವವನ್ನು ಹೊಂದಿರಲಿದೆ ಎಂದು ಹೇಳಿದೆ. ಈ ತಜ್ಞರ ತಂಡ ಕೋವಿಡ್‌ನ ಒಟ್ಟು 3 ಅಲೆಯ ಬಗ್ಗೆ ತನ್ನ ವಿಶ್ಲೇಷಣೆಯನ್ನು ಇದುವರೆಗೆ ಮಾಡಿದ್ದು, ಈ ಪೈಕಿ 3ನೇ ಅಲೆ ಕುರಿತ ಲೆಕ್ಕಾಚಾರ ಬಹುತೇಕ ಪಕ್ಕಾ ಆಗಿತ್ತು. ಹೀಗಾಗಿ ಈ ವರದಿ ಸಾಕಷ್ಟು ಕುತೂಹಲ ಮತ್ತು ಆತಂಕ ಮೂಡಿಸಿದೆ.