Asianet Suvarna News Asianet Suvarna News

Covid Crisis: ಕೋವಿಡ್‌ ನಿರ್ಬಂಧ ಸಡಿಲಕ್ಕೆ ರಾಜ್ಯಗಳಿಗೆ ಕೇಂದ್ರ ಸೂಚನೆ

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರಾತ್ರಿ ಕರ್ಫ್ಯೂ ಸೇರಿದಂತೆ ಸಾಮಾಜಿಕ, ಕ್ರೀಡೆ, ಮನರಂಜನೆ, ಶಿಕ್ಷಣ, ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಎಲ್ಲ ನಿರ್ಬಂಧಗಳನ್ನು ಸಡಿಲಗೊಳಿಸಲು ಸೂಚಿಸಿದೆ.

Union Home Ministry asks states Union Territories to allow Relaxation of Covid 19 Curbs gvd
Author
Bangalore, First Published Feb 26, 2022, 3:35 AM IST

ನವದೆಹಲಿ (ಫೆ.26): ದೇಶದಲ್ಲಿ (India) ಕೋವಿಡ್‌ ಪ್ರಕರಣಗಳ (Covid Cases) ಸಂಖ್ಯೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು (Union Home Ministry) ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರಾತ್ರಿ ಕರ್ಫ್ಯೂ (Night Curfew) ಸೇರಿದಂತೆ ಸಾಮಾಜಿಕ, ಕ್ರೀಡೆ, ಮನರಂಜನೆ, ಶಿಕ್ಷಣ, ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಎಲ್ಲ ನಿರ್ಬಂಧಗಳನ್ನು ಸಡಿಲಗೊಳಿಸಲು ಸೂಚಿಸಿದೆ.

ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಭಲ್ಲಾ ‘ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಸ್ಥಳೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಸಂಚಾರ, ಶಾಂಪಿಗ್‌ ಕಾಂಪ್ಲೆಕ್ಸ್‌, ಸಿನಿಮಾ ಮಂದಿರ, ಜಿಮ್‌, ಸ್ಪಾ, ರೆಸ್ಟೋರೆಂಟ್‌, ಶಾಲೆ, ಕಾಲೇಜು, ಕಚೇರಿ ಹಾಗೂ ಎಲ್ಲ ಇತರೆ ಆರ್ಥಿಕ ಚಟುವಟಿಕೆಯ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಬೇಕು’ ಎಂದು ಹೊಸ ಕೋವಿಡ್‌ ಮಾರ್ಗದರ್ಶಿಯಲ್ಲಿ ಸೂಚಿಸಿದ್ದಾರೆ.’

ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಿದ ನಂತರವೂ ಸಾರ್ವಜನಿಕರು ಮಾಸ್ಕ್‌ ಧಾರಣೆ, ಸಾಮಾಜಿಕ ಅಂತರ ಮೊದಲಾದ ನಿಯಮಗಳನ್ನು ಪಾಲಿಸಬೇಕು ಎಂದು ಸೂಚಿಸಿದ್ದಾರೆ.

Covid Crisis: ಕೋವಿಡ್‌ ತುಸು ಏರಿಕೆ: 628 ಕೇಸ್‌ ಪತ್ತೆ, 15 ಸಾವು

ಕೋವಿಡ್‌ನಿಂದಾಗಿ 19 ಲಕ್ಷ ಮಕ್ಕಳು ಅನಾಥ: ಕೋವಿಡ್‌ ಸೋಂಕಿನಿಂದಾಗಿ ಭಾರತದಲ್ಲಿ 19 ಲಕ್ಷ ಮಕ್ಕಳು ತಮ್ಮ ಪಾಲಕರು ಅಥವಾ ಪೋಷಕರನ್ನು ಕಳೆದುಕೊಂಡಿದ್ದಾರೆಂದು ಲಾನ್ಸೆಟ್‌ ಜರ್ನಲ್‌ ವರದಿಯೊಂದನ್ನು ಪ್ರಕಟಿಸಿದೆ. ಜಾಗತಿಕವಾಗಿ ಕೋವಿಡ್‌ನಿಂದ 52 ಲಕ್ಷ ಮಕ್ಕಳು ತಮ್ಮ ಪಾಲಕರನ್ನು ಕಳೆದುಕೊಂಡಿದ್ದಾರೆ. 

ಕೋವಿಡ್‌ನಿಂದ ಅನಾಥರಾದ ಮೂವರಲ್ಲಿ ಇಬ್ಬರು ಮಕ್ಕಳು 10 ರಿಂದ 17 ವರ್ಷದ ಒಳಗಿನವರಾಗಿದ್ದಾರೆ. ಪೆರು ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪ್ರತಿ ಸಾವಿರ ಮಕ್ಕಳಲ್ಲಿ ಕ್ರಮವಾಗಿ 8 ಹಾಗೂ 7 ಮಕ್ಕಳು ಕೋವಿಡ್‌ನಿಂದ ಅನಾಥರಾಗಿದ್ದಾರೆ. ಬಹುತೇಕ ರಾಷ್ಟ್ರಗಳಲ್ಲಿ ಮಕ್ಕಳು ಕೋವಿಡ್‌ನಿಂದಾಗಿ ತಂದೆಯನ್ನು ಕಳೆದುಕೊಂಡವರ ಪ್ರಮಾಣ ತಾಯಿಯನ್ನು ಕಳೆದುಕೊಂಡವರಿಗಿಂತ ಹೆಚ್ಚಾಗಿದೆ ಎಂದು ಅಧ್ಯಯನ ತಿಳಿಸಿದೆ.

13166 ಕೇಸು, 302 ಸಾವು: ದೇಶದಲ್ಲಿ ದೈನಂದಿನ ಕೋವಿಡ್‌ ಪ್ರಕರಣಗಳು ಮತ್ತಷ್ಟುಕಡಿಮೆಯಾಗಿದ್ದು ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 13,166 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 302 ಸೋಂಕಿತರು ಸಾವಿಗೀಡಾಗಿದ್ದಾರೆ. ಸತತ 19 ದಿನಗಳಿಂದ ದೇಶದಲ್ಲಿ 1 ಲಕ್ಷಕ್ಕಿಂತಲೂ ಕಡಿಮೆ ದೈನಂದಿನ ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿದ್ದು, ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ 1.34 ಲಕ್ಷಕ್ಕೆ ಕುಸಿದಿದೆ. ದೈನಂದಿನ ಪಾಸಿಟಿವಿಟಿ ದರವು 1.2 ರಷ್ಟಿದ್ದು, ವಾರದ ಪಾಸಿಟಿವಿಟಿ ದರ 1.48 ರಷ್ಟಿದೆ. ದೇಶದಲ್ಲಿ ಈವರೆಗೆ 176.86 ಕೋಟಿ ಲಸಿಕೆ ವಿತರಿಸಲಾಗಿದೆ.

Covid Vaccine: ರಾಜ್ಯದಲ್ಲಿ 10 ಕೋಟಿ ಡೋಸ್‌ ಲಸಿಕೆ ಮೈಲಿಗಲ್ಲು!

346 ಮಂದಿಗೆ ಸೋಂಕು: 769 ಮಂದಿ ಗುಣಮುಖ:  ನಗರದಲ್ಲಿ ಶುಕ್ರವಾರ 346 ಮಂದಿಯಲ್ಲಿ ಕೋವಿಡ್‌-19 ಪತ್ತೆಯಾಗಿದೆ. 12 ಮಂದಿ ಮರಣವನ್ನಪ್ಪಿದ್ದಾರೆ. 769 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 188 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 18 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 51 ಮಂದಿ ತೀವ್ರ ನಿಗಾ ವಿಭಾಗ ಮತ್ತು 102 ಮಂದಿ ಜನರಲ್‌ ವಾರ್ಡ್‌ನಲ್ಲಿ ದಾಖಲಾಗಿದ್ದಾರೆ. 17 ಮಂದಿ ಆಕ್ಸಿಜನ್‌ ಬೆಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ 24,777 ಪರೀಕ್ಷೆ ನಡೆದಿದೆ. ಕಂಟೈನ್ಮೇಂಟ್‌ ವಲಯಗಳ ಸಂಖ್ಯೆ 7ಕ್ಕೆ ಇಳಿಕೆಯಾಗಿದೆ.

ಲಸಿಕೆ ಅಭಿಯಾನ: ಶುಕ್ರವಾರ 1,310 ಮಂದಿ ಮೊದಲ ಡೋಸ್‌, 26,082 ಮಂದಿ ಎರಡನೇ ಡೋಸ್‌ ಮತ್ತು 2,632 ಮಂದಿ ಮುನ್ನೆಚ್ಚರಿಕೆ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ. ನಗರದಲ್ಲಿ ಈವರೆಗೆ ಒಟ್ಟು 1.77 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.

Follow Us:
Download App:
  • android
  • ios