ಕೋವಿಡ್‌ ವೇಳೆ ನೆರವಾಗಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಡೊಮಿನಿಕಾ ದೇಶದ ಅತ್ಯುನ್ನತ ಗೌರವ!

ಕೋವಿಡ್‌ ಸಮಯದಲ್ಲಿ ಇಡೀ ವಿಶ್ವದಲ್ಲಿ ಕೋವಿಡ್‌ ಲಸಿಕೆಗಳಿಗೆ ಭಾರೀ ಬೇಡಿಕೆ ಇದ್ದಾಗ 70000 ಡೋಸ್‌ಗಳಷ್ಟು ಆಸ್ಟ್ರಾಜೆನಿಕಾ ಕೋವಿಡ್‌ ಲಸಿಕೆಯನ್ನು ಉಚಿತವಾಗಿದ್ದ ನೀಡಿ ಮಾನವೀಯತೆ ಮೆರೆದಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಕೆರೆಬಿಯನ್‌ ದೇಶವಾದ ಡೊಮಿನಿಕಾ ತನ್ನ ಅತ್ಯುನ್ನತ ನಾಗರಿಕ ಗೌರವ ನೀಡಲು ನಿರ್ಧರಿಸಿದೆ.

Dominica bestows its highest national award upon PM Modi for his contribution during COVID-19 rav

ನವದೆಹಲಿ: ಕೋವಿಡ್‌ ಸಮಯದಲ್ಲಿ ಇಡೀ ವಿಶ್ವದಲ್ಲಿ ಕೋವಿಡ್‌ ಲಸಿಕೆಗಳಿಗೆ ಭಾರೀ ಬೇಡಿಕೆ ಇದ್ದಾಗ 70000 ಡೋಸ್‌ಗಳಷ್ಟು ಆಸ್ಟ್ರಾಜೆನಿಕಾ ಕೋವಿಡ್‌ ಲಸಿಕೆಯನ್ನು ಉಚಿತವಾಗಿದ್ದ ನೀಡಿ ಮಾನವೀಯತೆ ಮೆರೆದಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಕೆರೆಬಿಯನ್‌ ದೇಶವಾದ ಡೊಮಿನಿಕಾ ತನ್ನ ಅತ್ಯುನ್ನತ ನಾಗರಿಕ ಗೌರವ ನೀಡಲು ನಿರ್ಧರಿಸಿದೆ.

ಇದೇ ನ.19-21ರಂದು ಮೋದಿ ಗಯಾನಾಕ್ಕೆ ಭೇಟಿ ನೀಡಲಿದ್ದು ಈ ವೇಳೆ ಅವರಿಗೆ ‘ಡೊಮಿನಿಕಾ ಅವಾರ್ಡ್‌ ಆಫ್‌ ಆನರ್‌’ ನೀಡಲು ಡೊಮಿನಿಕಾ ಸರ್ಕಾರ ನಿರ್ಧರಿಸಿದೆ. ಭಾರತ- ಕರಿಕೊಮ್‌ ಶೃಂಗಸಭೆಯಲ್ಲಿ ಡೊಮಿನಿಕಾ ಅಧ್ಯಕ್ಷ ಸಿಲ್ವನಿ ಬರ್ಟನ್‌ ಈ ಗೌರವ ಪ್ರದಾನ ಮಾಡಲಿದ್ದಾರೆ.

ರಾಜ್ಯದ ಕ್ರೈಸ್ತರಿಗೆ ವಕ್ಫ್‌ ಬಿಸಿ ತಟ್ಟಿಲ್ಲ | ಮತಾಂತರ ನಡೆಯುತ್ತಿದ್ದರೆ ಕ್ರೈಸ್ತರ ಸಂಖ್ಯೆ ಏಕೆ ಕುಸಿದಿದೆ?: ಫಾ. ಸಲ್ಡಾನಾ

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಡೊಮಿನಿಕಾ ಪ್ರಧಾನಿ ಕಚೇರಿ, ‘2021ರ ಫೆಬ್ರವರಿಯಲ್ಲಿ ಮೋದಿ 70,000 ಡೋಸ್‌ ವ್ಯಾಕ್ಸಿನ್‌ ನೀಡಿ, ಕೆರೇಬಿಯನ್‌ ದೇಶಗಳಿಗೆ ಸಹಾಯ ಮಾಡಲು ನೆರವಾಗಿದ್ದರು. ಜೊತೆಗೆ, ಆರೋಗ್ಯ, ಶಿಕ್ಷಣ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಸಹಕಾರ ಹಾಗೂ ಮೋದಿ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ ನಿಗ್ರಹ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ವಹಿಸಿದ ಪಾತ್ರವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ’ ಎಂದು ಹೇಳಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ‘ಜಾಗತಿಕ ಸಮಸ್ಯೆಗಳಾದ ಹವಾಮಾನ ಬದಲಾವಣೆ, ಸಂಘರ್ಷಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಡೊಮಿನಿಕಾದೊಂದಿಗೆ ಕೆಲಸ ಮಾಡಲು ಬದ್ಧವಾಗಿದ್ದೇವೆ’ ಎಂದರು.

Latest Videos
Follow Us:
Download App:
  • android
  • ios