ಯಾದಗಿರಿ: ಸೊನ್ನ ಡ್ಯಾಂನಿಂದ ನೀರು ಬಿಡುಗಡೆ, ಭೀಮಾ ಪಾತ್ರದಲ್ಲೂ ಪ್ರವಾಹ ಭೀತಿ

ಕಲಬುರಗಿ ಜಿಲ್ಲೆ ಅಫಜಲ್ಪೂರ ತಾಲೂಕಿನ ಸೊನ್ನ ಜಲಾ​ಶ​ಯ​ದಿಂದ 22000 ಕ್ಯುಸೆಕ್‌ ನೀರು ಬಿಡು​ಗ​ಡೆ| ಭೀಮಾ ತೀರದಲ್ಲಿ ಪ್ರವಾಹ ರೀತಿಯ ಪರಿಸ್ಥಿತಿ| ಕಂಗಳೇಶ್ವರ ಹಾಗೂ ವೀರಾಂಜನೇಯ ದೇವಾಲಯ ಜಲಾವೃತ| 

22000 cusec of water Realsed From Sonna Dam

ಯಾದಗಿರಿ(ಆ.19): ನಾರಾಯಣಪೂರದ ಬಸವಸಾಗರದಿಂದ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನೆಲೆಯಲ್ಲಿ, ಕೃಷ್ಣಾ ನದಿಪಾತ್ರದಲ್ಲಿ ಪ್ರವಾಹದ ನಂತರ, ಇದೀಗ ಭೀಮಾ ನದಿ ಪತ್ರದಲ್ಲೂ ನೆರೆಯ ಆತಂಕ ಎದುರಾಗಿದೆ.

ಕಲಬುರಗಿ ಜಿಲ್ಲೆ ಅಫಜಲ್ಪೂರ ತಾಲೂಕಿನ ಸೊನ್ನ ಜಲಾಶಯದಿಂದ 22,000 ಕ್ಯುಸೆಕ್‌ ನೀರು ಹರಿಬಿಡಲಾಗಿದೆ. ಯಾದಗಿರಿ ನಗರದ ಕೂಗಳತೆ ದೂರದಲ್ಲಿನ ಭೀಮಾನದಿಯಲ್ಲಿ ಪ್ರವಾಹ ಆತಂಕ ಶುರುವಾಗಿದೆ. ಇದರಿಂದಾಗಿ, ಭೀಮಾ ತೀರದಲ್ಲಿ ಪ್ರವಾಹ ರೀತಿಯ ಪರಿಸ್ಥಿತಿ ಎದುರಾಗಿದೆ. ನಗರದ ಕೂಗಳತೆ ದೂರಲ್ಲಿನ ಕಂಗಳೇಶ್ವರ ಹಾಗೂ ವೀರಾಂಜನೇಯ ದೇವಾಲಯ ಜಲಾವೃತವಾಗಿದೆ.

ಛಾಯಾ ಭಗವತಿ ದೇವಿ ಪಾದಸ್ಪರ್ಶ ಮಾಡಿದ 'ಕೃಷ್ಣೆ'..!

ಹತ್ತಿಕುಣಿ ಜಲಾಶಯದಿಂದ ನೀರು

ಹತ್ತಿಕುಣಿ ಯೋಜನೆ ಜಲಾಶಯದ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜಲಾನಯನಕ್ಕೆ ನಿರಂತರವಾಗಿ ಒಳಹರಿವು ಬರುತ್ತಿದೆ. ಈ ಜಲಾನಯನವು ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ಹಂತದಲ್ಲಿದೆ. ಗರಿಷ್ಠ ಮಟ್ಟದ ನಂತರ ಬಂದ ಒಳಹರಿವಿನ ನೀರನ್ನು ಆಣೆಕಟ್ಟೆ ಕೋಡಿ ಮುಖಾಂತರ ಹಳ್ಳಕ್ಕೆ ಹರಿಯಬಿಡಲಾಗುವುದು ಪ್ರಕಟಣೆಯಲ್ಲಿ ತಿಳಿಸಲಾ​ಗಿ​ದೆ.

ಆದ್ದರಿಂದ ಹತ್ತಿಕುಣಿ ಹಳ್ಳದ ಸುತ್ತಮುತ್ತಲಿನ ಗ್ರಾಮಗಳ ನದಿ ಪ್ರವಾಹದಿಂದ ತೊಂದರೆ ಉಂಟಾಗಬಹುದಾಗಿದೆ. ಹಳ್ಳದ ಅಕ್ಕಪಕ್ಕದ ಜನರು, ಸಾರ್ವಜನಿಕರು ನದಿಯಲ್ಲಿ ಇಳಿದು ಈಜುವುದಾಗಲಿ, ಬಟ್ಟೆ  ಒಗೆಯುವುದಾಗಲಿ, ದನಕರುಗಳಿಗೆ ನೀರು ಕುಡಿಸುವುದಾಗಲಿ ಹಾಗೂ ಇನ್ನಿತರೆ ಯಾವುದೇ ಕಾರಣಕ್ಕಾಗಿ ನದಿಯಲ್ಲಿ ಇಳಿಯಬಾರದು. ಹಳ್ಳದ ಪಾತ್ರದಲ್ಲಿರುವ ಸಣ್ಣ ನೀರಾವರಿ ಇಲಾಖೆ ಮತ್ತು ಇನ್ನಿತರ ಯಾವುದೇ ಇಲಾಖೆಗಳಿಗೆ ಸಂಬಂಧಪಟ್ಟ ಆಸ್ತಿಗಳಿದ್ದಲ್ಲಿ ಮುಂಜಾಗ್ರತೆಯಾಗಿ ಸುರಕ್ಷಿತ ಕ್ರಮ ಕೈಗೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios