ಕಲಬುರಗಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ಮಹಿಳೆ ಸಾವು
ಶರಣಮ್ಮ ಹಡಗಿಲ ಹಾರುತಿ ಗ್ರಾಮದ ಶಾರದಾಬಾಯಿ ಚಿಂಚಪಳ್ಳಿ ಅವರ ಬಾಳೆ ತೋಟದಲ್ಲಿ ಕಸ ತೆಗೆಯುತ್ತಿದ್ದಾಗ ಹಾವು ಕಚ್ಚಿದ್ದು ಅವರನ್ನು ಗ್ರಾಮದಲ್ಲಿ ಔಷಧಿ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಕಲಬುರಗಿ(ಅ.08): ಬಾಳೆ ತೋಟದಲ್ಲಿ ಕಸ ತೆಗೆಯುತ್ತಿದ್ದಾಗ ವಿಷ ಪೂರಿತ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಹಡಗಿಲ ಹಾರುತಿ ಗ್ರಾಮದಲ್ಲಿ ನಡೆದಿದೆ. ಶರಣಮ್ಮ ವಿಜಯಕುಮಾರ ಚಿಂಚಪಳ್ಳಿ (22) ಮೃತಪಟ್ಟ ಮಹಿಳೆಯಾಗಿದ್ದಾಳೆ.
ಶರಣಮ್ಮ ಹಡಗಿಲ ಹಾರುತಿ ಗ್ರಾಮದ ಶಾರದಾಬಾಯಿ ಚಿಂಚಪಳ್ಳಿ ಅವರ ಬಾಳೆ ತೋಟದಲ್ಲಿ ಕಸ ತೆಗೆಯುತ್ತಿದ್ದಾಗ ಹಾವು ಕಚ್ಚಿದ್ದು ಅವರನ್ನು ಗ್ರಾಮದಲ್ಲಿ ಔಷಧಿ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಪ್ರಿಯಾಂಕ್ ಖರ್ಗೆ ರಾಜ್ಯದ ಸೂಪರ್ ಸಿಎಂ; ಸಿದ್ದರಾಮಯ್ಯರ ಮಾತಿಗೆ ಕಿಮ್ಮತ್ತಿಲ್ಲ: ಎನ್ ರವಿಕುಮಾರ್
ಈ ಸಂಬಂಧ ಅವರ ಪತಿ ವಿಜಯಕುಮಾರ ಚಿಂಚಪಳ್ಳಿ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.