ಆಳಂದ: ಕಲುಷಿತ ಆಹಾರ, ನೀರಿನಿಂದ 21 ಜನರು ಅಸ್ವಸ್ಥ
ಆಳಂದ ಪಟ್ಟಣದ ಲಾಡ್ಲೆಮಶಾಕ ದಾರ್ಗಕ್ಕೆ ದೇವರು ಹರಕೆ ತೀರಿಸಲು ಬಂದಿದ್ದ ಒಂದೇ ಊರಿನ ಹಲವು ಯಾತ್ರಾರ್ಥಿಗಳಲ್ಲಿ ಒಂದು ಗಂಡು ಮಗು ಸೇರಿ ಹೆಣ್ಣು ಮಕ್ಕಳು, ಯುವತಿಯರು ಸೇರಿ 13 ಮಂದಿ ಮಹಿಳೆಯರಲ್ಲೇ ಹಠಾತಾಗಿ ತೀವ್ರ ಸ್ವರೂಪದ ವಾಂತಿ, ಭೇದಿ ಉಲ್ಬಣಿಸಿದೆ. ಸ್ಥಳೀಯ ಸಾರ್ವಜನಿಕ ಆಸ್ಪತ್ರಗೆ ದಾಖಲಿಸಿದ್ದಾರೆ.
ಕಲಬುರಗಿ(ಜೂ.03): ಕಲುಷಿತ ಆಹಾರ ಸೇವಿಸಿ 21 ಜನರು ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದಿದೆ. ಅಸ್ವಸ್ಥರು ವಿಜಯಪುರ ಜಿಲ್ಲೆಯ ಚಡಚಣದ ಡೋಣಿ ನಿವಾಸಿಗಳು ಎಂದು ತಿಳಿದುಬಂದಿದೆ. ಗುರುವಾರ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾಕ್ಕೆ ಹರಕೆ ತೀರಿಸಲು ಬಂದಿದ್ದರು. ಊಟ ಸೇವಿಸಿದ್ದ ಬಳಿಕ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥರಿಗೆ ಆಳಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆಳಂದನ ಲಾಡ್ಲೆ ಮಶಾಕ್ ದರ್ಗಾಕ್ಕೆ ಹರಕೆ ಸಲ್ಲಿಸಲು ಒಂದೇ ಕುಟುಂಬದ 21 ಜನ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಊಟ ಸೇವನೆಯ ನಂತರ ಹಲವರಲ್ಲಿ ಕಾಣಿಸಿಕೊಂಡ ವಾಂತಿಭೇದಿಗೆ ಎಲ್ಲರೂ ಹೌಹಾರಿದ್ದಾರೆ. ಕೂಡಲೇ ವಾಂತಿಯಿಂದ ಬಳಲುತ್ತಿದ್ದವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಫುಡ್ ಪಾಯಿಸನ್ ಅಥವಾ ಕಲುಷಿತ ನೀರಿನಿಂದ ಅಸ್ವಸ್ಥರಾಗಿರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.
ಅಸ್ವಸ್ಥರು ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಡೋಣಿ ಗ್ರಾಮದವರು ಎಂದು ಗೊತ್ತಾಗಿದೆ. ಸ್ಥಳಕ್ಕೆ ಪೊಲೀಸ್ ಮತ್ತು ವೈದ್ಯಾಧಿಕಾರಿಗಳು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಕಲಬುರಗಿ: ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಹಾವು ಕಡಿದು ವಿದ್ಯಾರ್ಥಿನಿ ಸಾವು
ನಡೆದದ್ದೇನು?:
ಆಳಂದ ಪಟ್ಟಣದ ಲಾಡ್ಲೆಮಶಾಕ ದಾರ್ಗಕ್ಕೆ ದೇವರು ಹರಕೆ ತೀರಿಸಲು ಬಂದಿದ್ದ ಒಂದೇ ಊರಿನ ಹಲವು ಯಾತ್ರಾರ್ಥಿಗಳಲ್ಲಿ ಒಂದು ಗಂಡು ಮಗು ಸೇರಿ ಹೆಣ್ಣು ಮಕ್ಕಳು, ಯುವತಿಯರು ಸೇರಿ 13 ಮಂದಿ ಮಹಿಳೆಯರಲ್ಲೇ ಹಠಾತಾಗಿ ತೀವ್ರ ಸ್ವರೂಪದ ವಾಂತಿ, ಭೇದಿ ಉಲ್ಬಣಿಸಿದೆ. ಸ್ಥಳೀಯ ಸಾರ್ವಜನಿಕ ಆಸ್ಪತ್ರಗೆ ದಾಖಲಿಸಿದ್ದಾರೆ. ಣದ ಹಜರತ್ ಲಾಡ್ಲೆಮಶಾಕ್ ದರ್ಗಾಕ್ಕೆ ಗುರುವಾರ ದೇವರು ಮಾಡಲು ಬಂದಿದ್ದ ಚಡಚಣ ತಾಲೂಕಿನ ಲೋಣಿ ಗ್ರಾಮದ ನಿವಾಸಿಗಳು ಮನೆಯಿಂದ ತಂದ ಊಟವನ್ನು ಸವಿದು ಜಿಡಗಾ ಗ್ರಾಮಕ್ಕೆ ತೆರಳಿದ್ದು, ಆಗ ಹಠಾತಾಗಿ ವಾಂತಿ, ಭೇದಿ ಕಾಣಿಸಿಕೊಂಡಿದ್ದರಿಂದ ಜಿಡಗಾದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಲ್ಲರನ್ನು ದಾಖಲಿಸಲಾಗಿತ್ತಾದರು, ಹೆಚ್ಚಿನ ಚಿಕಿತ್ಸೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಂಜೆ ದಾಖಲಿಸಿಲಾಗಿದೆ.
ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಬಿಡುಗಡೆ:
ಆಸ್ಪತ್ರೆಯಲ್ಲಿನ ಆಡಳಿತ ಮುಖ್ಯ ವೈದ್ಯಾಧಿಕಾರಿ ಡಾ. ಮಹಾಂತಪ್ಪಾ ಹಾಳಮಳಿ ಮಾರ್ಗದರ್ಶನದಲ್ಲಿ ವೈದ್ಯರು ಮತ್ತು ವೈದ್ಯ ಸಿಬ್ಬಂದಿಗಳು ತಂಡವು ನೀಡಿದ ಚಿಕಿತ್ಸೆಯೂ 12 ಗಂಟೆಯಲ್ಲಿ ರೋಗಿಗಳಿಗೆ ಫಲಕಾರಿ ನೀಡಿದ ಹಿನ್ನೆಲೆಯಲ್ಲಿ ದಾಖಲಾಗಿದ್ದ ಎಲ್ಲರನ್ನು ಶುಕ್ರವಾರ ಆಸ್ಪತ್ರೆಯಿಂದ ವೈದ್ಯರು ಬಿಡುಗಡೆ ಮಾಡಿದರು. ಈ ನಡುವೆ ದರ್ಗಾ ಕಮೀಟಿಯ ಮುಖಂಡರು ಭೇಟಿ ನೀಡಿ ಯಾತ್ರಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ.
ಲೋಣಿ ಗ್ರಾಮದ ನಿವಾಸಿ ಚಿಕಿತ್ಸೆಗೆ ದಾಖಲಾಗಿದ್ದ ಕಾವೇರಿ ವಿಜಯಕುಮಾರ (14), ಸುನಿತಾ ವಿಜಯಕುಮಾರ (11), ಆರತಿ ಸಂತೋಷ (16), ಸರೂಬಾಯಿ ಗಂಡ ಸಂಜಯಕುಮಾರ (35), ಆಕಾಶ ಕಲ್ಲಪ್ಪಾ (7), ಶರಣಬಾಯಿ ಪ್ರಭು (52), ಸಂಗೀತಾ ಮಹಾಂತೇಶ (32), ಸುಗಲಾಬಾಯಿ ಸಿದ್ಧರಾಮ ಲೋಣಿ (40), ಶೀಲಾಬಾಯಿ ಚಿತಾದನಂದ (36), ಪದ್ಮಾವತಿ ನಾಗಪ್ಪಾ (65), ಪ್ರೀತಿ ಸಿದ್ರಾಮಪ್ಪ (16), ಪುಟಕ್ಕಾ ಸಿದ್ದು (30), ಈರಮ್ಮಾ ಹಣಮಂತ (38), ಸುನಿತಾ ಪ್ರಕಾಶ (27) ಎಂಬುವರನ್ನೇ ಆಸ್ಪತ್ರೆಗೆ ದಾಖಲಿಸಿ ನೀಡಿದ ಗುಣಮುಖರಾದ ಮೇಲೆ ಬಿಡುಗಡೆ ಮಾಡಲಾಗಿದೆ.
183 ದಿನಗಳಿಂದ ಸಿಮೆಂಟ್ ಕಂಪನಿ ವಿರುದ್ಧ ಧರಣಿ ನಡೆಸುತ್ತಿದ್ದ ರೈತ ಸಾವು!
ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ 12 ಗಂಟೆಯಲ್ಲಿ ವಾಂತಿ, ಭೇದಿ ರೋಗಿಗಳನ್ನು ಸೂಕ್ತ ಚಿಕಿತ್ಸೆ ನೀಡಿ ಗುಣಮುಖರಾಗಿಸಿದ್ದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ತಂಡದ ಕಾರ್ಯವನ್ನು ಶಾಸಕ ಬಿ.ಆರ್. ಪಾಟೀಲ ಮತ್ತು ಇಲ್ಲಿನ ನಾಗರಿಕ ಮುಖಂಡರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಚಿಕಿತ್ಸೆ ನೀಡಿದ ತಂಡದ ವೈದ್ಯರಾದ ಡಾ. ಪ್ರಮೋದ್, ಡಾ. ಸೈಯದಾ ಫಾತಿಮಾ, ಡಾ ಉಸ್ಮಾನ ಸುತಾರ, ಡಾ. ಆಶಾ ಹಾಗೂ ಸ್ಟಾಪನರ್ಸ್ ಉಮೇಶ, ಶ್ರೀದೇವಿ ಶೇರಿಕಾರ, ಹರಿಷ್, ಬಸವರಾಜ್, ಧರ್ಮರಾಜ್, ಶಿವಲೀಲಾ, ಪರಿದ್ದೀನ್ ಬಾನು, ನಾಗರಾಜ ಇನ್ನಿತರು ಒಳಗೊಂಡ ತಂಡವು, ಸಿಬ್ಬಂದಿ ಶ್ರೀಕಾಂತ ಕೆಂಗೇರಿ, ಶಿವರಾಜ ಪಾಟೀಲ, ತುಕಾರಾಮ, ಕಾಶಿನಾಥ, ಸೋಮಣ್ಣಾ ಮತ್ತು ಸ್ವಾಮಿ ಇನ್ನಿತರು ಶ್ರಮಿಸಿದರು. ಹಠಾತಾಗಿ ವಾಂತಿ, ಭೇದಿಯಿಂದಾಗಿ ಆಳಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ಚಡಚಣ ತಾಲೂಕಿನ ಲೋಣಿ ನಿವಾಸಿಗಳನ್ನು ವೈದ್ಯಾಧಿಕಾರಿ ಡಾ. ಮಹಾಂತಪ್ಪಾ ಹಾಳಮಳಿ ನೇತೃತ್ವದ ಸಿಬ್ಬಂದಿಗಳು ಚಿಕಿತ್ಸೆ ನೀಡಿದರು.