ಕಲಬುರಗಿ: ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಹಾವು ಕಡಿದು ವಿದ್ಯಾರ್ಥಿನಿ ಸಾವು
ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಕಾಲ ಬೆರಳಿಗೆ ಹಾವು ಕಚ್ಚಿದ ಪರಿಣಾಮ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಯಳಸಂಗಿ ಗ್ರಾಮದಲ್ಲಿ ನಡೆದ ಘಟನೆ
ಆಳಂದ(ಮೇ.30): ಮನೆಯಲ್ಲಿ ಮಧ್ಯಾಹ್ನದ ವೇಳೆ ತನ್ನ ಗೆಳತಿಯರೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಕಾಲ ಬೆರಳಿಗೆ ಹಾವು ಕಚ್ಚಿದ ಪರಿಣಾಮ ಪಿಯುಸಿ ಪೂರೈಸಿದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಧಾರುಣ ಘಟನೆ ತಾಲೂಕಿನ ಯಳಸಂಗಿ ಗ್ರಾಮದಲ್ಲಿ ಭಾನುವಾರ ವರದಿಯಾಗಿದೆ.
ಗ್ರಾಮದ ಪೂಜಾ ಯಲ್ಲಾಲಿಂಗ್ ಹೂಗಾರ (18), ಎಂಬ ವಿದ್ಯಾರ್ಥಿನಿ ಮನೆಯಲ್ಲಿದ್ದಾಗ ಹಾವು ಕಡಿದು ಮೃತಪಟ್ಟ ದುರ್ದೈವಿ. ಪೂಜಾ ಪ್ರಸಕ್ತ ಸಾಲಿನ ಪಿಯುಸಿ ದ್ವಿತೀಯ ವರ್ಷದ ಕಲಾ ವಿಭಾಗದಲ್ಲಿ ಉತ್ತೀರ್ಣಳಾಗಿದ್ದು, ಮುಂದೆ ಬಿಎ ಪ್ರವೇಶ ಪಡೆಯಲು ಗೆಳತಿಯೊಂದಿಗೆ ವಿಡಿಯೋ ಕಾಲ್ ಮೂಲಕ ಚರ್ಚಿಸತೊಡಗಿದ್ದ ವೇಳೆ ಮೊದಲು ಹಾವು ಬಲಗಾಲಿನ ಬೆರಳಿಗೆ ಕಚ್ಚಿದೆ. ಕಾಲು ಜಾಡಿಸಿದ್ದಾಗ ಮತ್ತೊಮ್ಮೆ ಇನ್ನೊಂದು ಬೆರಳಿಗೆ ಕಚ್ಚಿದ ಮೇಲೆ ನೋಡಿದ ವಿದ್ಯಾರ್ಥಿನಿಗೆ ಹಾವು ಎಂದು ಗೊತ್ತಾಗಿ ಕಿರುಚಾಡಿ ಹೊರಬಂದ ಮನೆಯವರಿಗೆ ಹೇಳಿದ್ದಾಳೆ.
ಅಯೋಧ್ಯೆ ರಾಮ ವಿಗ್ರಹ ಕೆತ್ತನೆಗೆ ರಾಜ್ಯದ ಇಬ್ಬರು: ಏಕಕಾಲಕ್ಕೆ 3 ಪ್ರತಿಮೆಗಳು ಸಿದ್ಧ
ಈ ಕುರಿತು ಕುಟುಂಬಸ್ಥರು ಝಳಕಿ ಬಿ. ಗ್ರಾಮದ ಆರ್ಯುವೇಧ ಔಷಧಿ ಚಿಕಿತ್ಸೆ ನೀಡಿದ್ದರಾದರು. ಫಲಕಾರಿಯಾಗದೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಮುಂದಾಗಿದ್ದದರಾದರು ಅಷ್ಟೊತ್ತಿಗೆ ಹಾವಿನ ವಿಷವೇರಿ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ.
ಮೃತ ಬಾಲಕಿಯ ಬಡ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಹೂಗಾರ ಸಮಾಜದ ಅಧ್ಯಕ್ಷ ಈರಣ್ಣಾ ಹೂಗಾರ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.