ಕೋಲಾರ(ಫೆ.28):ಮಠವೊಂದನ್ನು ಸ್ಥಾಪಿಸಿ ಗೋ ಆಶ್ರಮ ಮಾಡುತ್ತೇನೆಂದು ಬೆಂಗಳೂರಿನಿಂದ ಬಂದ ಸ್ವಾಮೀಜಿಯೊಬ್ಬ 19 ವರ್ಷದ ಯುವತಿ ಜೊತೆ ಪರಾರಿ ಆಗಿರುವ ಘಟನೆ ಕೋಲಾರ ತಾಲೂಕಿನ ಹೊಳಲಿ ಗ್ರಾಮದಲ್ಲಿ ನಡೆದಿದೆ.

ಹೊಳಲಿ ಗ್ರಾಮದ ಸೇವಾಶ್ರಮ ಸಂಸ್ಥಾಪಕ ಪೀಠಾಧ್ಯಕ್ಷ ದತ್ತಾತ್ರೇಯ ಅವಧೂತ ಸ್ವಾಮೀಜಿ ಪ್ರೇಮ ಬಲೆಗೆ ಬಿದ್ದು, ಶಾಮಲಾ ಎಂಬ ಯುವತಿಯೊಂದಿಗೆ ಪರಾರಿಯಾಗಿದ್ದಾರೆ.

ಬಿಜೆಪಿಯವ್ರಿಗೆ ಪಾಕ್ ವೈರಸ್ ಬಂದಿದೆ ಎಂದ್ರು ಶಾಸಕ

ಹೊಳಲಿ ಗ್ರಾಮದಲ್ಲಿ ಮಠ ಕಟ್ಟಿಗೋ ಆಶ್ರಮ ಮಾಡುತ್ತೇನೆಂದು ಕಳೆದ ಜನವರಿ ತಿಂಗಳಲ್ಲಿ ಆಗಮಿಸಿದ ದತ್ತಾತ್ರೇಯ ಅವಧೂತ ಸ್ವಾಮೀಜಿ ಗ್ರಾಮದಲ್ಲಿ ಶಿವರಾತ್ರಿ ಪ್ರಯು ಕ್ತ ಆಶ್ರಮದಲ್ಲಿ ಭರ್ಜರಿ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನೂ ಆಹ್ವಾನಿಸಲಾಗಿತ್ತು. ಆದರೆ, ಅವರು ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ.

ಶಿವರಾತ್ರಿ ಕಳೆದು ಇನ್ನೂ ಒಂದು ವಾರವೂ ಕಳೆದಿಲ್ಲ. ಆಗಲೇ ಸ್ವಾಮೀಜಿಯು ಯುವತಿಯೊಂದಿಗೆ ಪರಾರಿಯಾಗಿದ್ದು, ಸ್ವಾಮೀಜಿ ಹಾಗೂ ಯುವತಿಯ ಫೋನ್‌ ನಂಬರ್‌ ಸ್ವಿಚ್‌ ಆಫ್‌ ಆಗಿದೆ. ಬೆಂಗಳೂರಿನ ವರ್ತೂರಿನ ದೇವಾಲಯವೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದ ಸ್ವಾಮೀಜಿ ಹೊಳಲಿ ಗ್ರಾಮದಲ್ಲಿನ ಮುಜರಾಯಿ ಇಲಾಖೆಗೆ ಸೇರಿದ ಭೀಮಲಿಂಗೇಶ್ವರ ದೇವಾಲಯದಲ್ಲಿ ಮಠ ಕಟ್ಟವುದಾಗಿ ಹೇಳಿ ಗ್ರಾಮದ ಕೆಲವು ಮುಖಂಡರು ಹಾಗೂ ಆಡಳಿತ ಮಂಡಳಿಯ ನೆರವಿನಿಂದ ನೂತನವಾಗಿ ಸೇವಾಶ್ರಮ ಪೀಠ ಸ್ಥಾಪಿಸಿದ್ದರು. ಕಳೆದ ಜನವರಿ ಸಂಕ್ರಾಂತಿ ಹಬ್ಬದ ದಿನದಂದು ದತ್ತಾತ್ರೇಯ ಅವಧೂತ ಸ್ವಾಮೀಜಿ ಎಂದು ಹೆಸರು ಬದಲಿಸಿ ತಾನೇ ಸೇವಾಶ್ರಮ ಪೀಠಾಧ್ಯಕ್ಷರಾಗಿ ಪಟ್ಟಾಭಿಷೇಕ ಮಾಡಿಕೊಂಡಿದ್ದರು.

ಮಂಗಳೂರು-ಬೆಂಗಳೂರು ರಾತ್ರಿ ರೈಲು ಬುಕ್ಕಿಂಗ್‌ ರದ್ದು

ಮೂರು ದಿನಗಳ ಹಿಂದೆ ಸ್ವಾಮೀಜಿ ಸೇವಾಶ್ರಮದಿಂದ ಯುವತಿ ಜೊತೆ ನಾಪತ್ತೆಯಾಗಿದ್ದಾರೆ. ಹುಡುಗಿ ನಾಪತ್ತೆ ಬಗ್ಗೆ ಯುವತಿಯ ಸೋದರ ಮಾವ ಶಂಕರ್‌ ಕೋಲಾರ ಗ್ರಾಮಾಂತರ ಪೋಲಿಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಯುವತಿಯ ಸಹೋದರನಿಗೆ ಫೋನ್‌ ಮಾಡಿದ ಸ್ವಾಮೀಜಿ ನಿಮ್ಮ ಹುಡುಗಿಯನ್ನು ತಿರುಪತಿಯಲ್ಲಿ ಮದುವೆಯಾಗಿದ್ದೇನೆ. ಮನೆಗೆ ಬಂದು ಮಾತನಾಡುತ್ತೇನೆ. ಪೋಲಿಸರಿಗೆ ದೂರು ಕೊಡಬೇಡಿ ಎಂದು ಕೇಳಿಕೊಂಡಿದ್ದಾನೆ.

ಊರ ತುಂಬಾ ತಮ್ಮ ಫೋಟೊ ಜೊತೆಗೆ ಗಣ್ಯರನ್ನೊಳಗೊಂಡು ಫ್ಲೆಕ್ಸ್‌, ಬ್ಯಾನರ್‌ ಹಾಕಿಸಿ ಭರ್ಜರಿಯಾಗಿ ಜಾತ್ರೆ ಮಾಡಿದ್ದರು. ಸ್ವಾಮೀಜಿ ಮೂಲತಃ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದವರು ಎನ್ನಲಾಗಿದೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಯುವತಿ ಮನೆಯವರು ದೂರು ದಾಖಲು ಮಾಡಿದ ವೇಳೆ ಪ್ರಾಥಮಿಕ ತನಿಖೆಯಿಂದ ಸ್ವಾಮೀಜಿ ಯುವತಿಯನ್ನು ಮದುವೆಯಾಗಿದ್ದಾನೆಂದು ತಿಳಿದು ಬಂದಿದೆ.

ಪ್ರಚೋದನಕಾರಿ ಪೋಸ್ಟ್: 'ವಿದೇಶದಲ್ಲಿ ಜೈಲುಪಾಲಾದ ಭಾರತೀಯರಿಗೆ ಸಹಾಯ'

ಅದ್ಧೂರಿ ಜಾತ್ರೆಗೆ ಬಳಸಿದ್ದ ಸೌಂಡ್‌ ಸಿಸ್ಟಮ್‌ ಸೇರಿದಂತೆ ಫ್ಲೆಕ್ಸ್‌, ಬ್ಯಾನರ್‌ನವರಿಗೂ ಇನ್ನೂ ಹಣ ನೀಡಿಲ್ಲ. ಗ್ರಾಮದ ಕೆಲವರ ಬಳಿ ಲಕ್ಷಾಂತರ ರುಪಾಯಿ ಹಣ ಕೂಡ ಪಡೆದಿರುವ ಸ್ವಾಮೀಜಿ ರಾತ್ರೋರಾತ್ರಿ ಯುವತಿಯೊಂದಿಗೆ ಪರಾರಿಯಾಗಿದ್ದಾನೆ. ಯುವತಿಯ ಆಧಾರ್‌ ಕಾರ್ಡ್‌, ಮಾರ್ಕ್ಸ್‌ಕಾರ್ಡ್‌, ರೇಷನ್‌ ಕಾರ್ಡ್‌ ಜೊತೆಗೆ ತೆಗೆದುಕೊಂಡು ಹೋಗಿದ್ದಾರೆ.

ಕೋಲಾರ ಗ್ರಾಮಾಂತರ ಪೋಲಿಸ್‌ ಠಾಣೆ ವ್ಯಾಪ್ತಿಯ ಹೊಳಲಿ ಗ್ರಾಮಕ್ಕೆ ಹೊಸದಾಗಿ ಆಗಮಿಸಿದ ದತ್ತಾತ್ರೆಯ ಸ್ವಾಮಿ ಎನ್ನುವವರು ಯುವತಿಯೊಂದಿಗೆ ಹೋಗಿರುವ ಮಾಹಿತಿ ಸಿಕ್ಕಿದೆ. ಸ್ವಾಮಿಜಿಯು ಯುವತಿಯ ಸಂಬಂಧಿಕರಿಗೆ ಫೋನಾಯಿಸಿ ಆಕೆಯನ್ನು ಮದುವೆ ಆಗಿರುವುದಾಗಿ ಹೇಳಿದ್ದಾರೆ. ಪರಾರಿ ಆಗಿರುವ ಇವರನ್ನು ಹುಡುಕಿ ತರಲು ತಂಡ ರಚಿಸಲಾಗಿದೆ ಎಂದು ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.