ಕುರಿ ಮೇಯಿಸಲು ಹೋದ ಮಕ್ಕಳು ಮನೆಗೆ ಬಂದಿದ್ದು ಶವವಾಗಿ

ಕುರಿ ಮೇಯಿಸಲು ಹೋದ ಮಕ್ಕಳಿಬ್ಬರು ಮನೆಗೆ ಬಂದಿದ್ದು ಶವವಾಗಿ. ಈ ದುರ್ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. 

2 young boys Died After Fell into lake snr

ಚಿಕ್ಕಬಳ್ಳಾಪುರ (ನ.10):  ಕುರಿ ಮೇಯಿಸಲು ತೆರಳಿದ್ದ ಬಾಲಕರಿಬ್ಬರು ಕೆರೆಯಲ್ಲಿ ಮುಳುಗಿ  ಸಾವಿಗೀಡಾಗಿದ್ದಾರೆ. 

 ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಚ್ಚನಹಳ್ಳಿಯ ಬಳಿ ಘಟನೆ  ನಡೆದಿದೆ. 

ದರ್ಶನ್ (15)  ಮತ್ತು ಶಿವ(14) ಮೃತ ದುರ್ದೈವಿಗಳು.  ದಿಬ್ಬೂರಹಳ್ಳಿ ಗ್ರಾಮದ  ಮೂರ್ತಿ ಹಾಗೂ ನಾಗಮಣಿ ದಂಪತಿಗಳ ಮಗ ದರ್ಶನ್  10 ನೇ ತರಗತಿ ಹಾಗೂ ಇದೇ ತಾಲ್ಲೂಕಿನ ಕಾಚಹಳ್ಳಿ ಗ್ರಾಮದ ಮಂಜುನಾಥ ಮತ್ತು ಗಂಗರತ್ನಮ್ಮ ದಂಪತಿಯ ಮಗನಾದ ಶಿವ 9 ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು.

ಸತ್ತ ಮಗು ಅಂತ್ಯಸಂಸ್ಕಾರಕ್ಕೂ ಮುನ್ನ ಬದುಕಿತು! ಆದರೆ... ... 

  ಕಾಚಹಳ್ಳಿ ಗ್ರಾಮದ ಶಿವ ಕೋವಿಡ್ ಕಾರಣದಿಂದ ಶಾಲೆ ತೆರೆಯದ ಕಾರಣ ದಿಬ್ಬೂರಹಳ್ಳಿಯ ಸಂಬಂಧಿಕರಾದ ಮೂರ್ತಿ ಮನೆಗೆ ಬಂದಿದ್ದ.  ಕುರಿ ಮೇಯಿಸಲೆಂದು ದರ್ಶನ್ ಜೊತೆ ಶಿವ ತೆರಳಿದ್ದು,  ಕುರಿ ಮೇಯಿಸುತ್ತಾ ಬಚ್ಚನಹಳ್ಳಿಯ ಬಳಿಯ ಆಶ್ರಯ ವಸತಿ ಶಾಲೆಯ ಹಿಂಭಾಗದಲ್ಲಿರುವ ಯರ್ರಕುಂಟೆಯಲ್ಲಿ ಹತ್ತಿರ ಕುರಿಗಳನ್ನು ಮೇಯಲು ಬಿಟ್ಟು ಕುಂಟೆಯ ನೀರಿನಲ್ಲಿ ಈಜಲು ಹೋಗಿ  ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ  ದಿಬ್ಬೂರಹಳ್ಳಿ ಪೋಲೀಸರು ಭೇಟಿ ನೀಡಿದ್ದು, ಶವಗಳನ್ನು ನೀರಿನಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಲಾಗುತ್ತಿದೆ.

Latest Videos
Follow Us:
Download App:
  • android
  • ios