Asianet Suvarna News Asianet Suvarna News

ಆಷ್ಘನಲ್ಲಿ ಸಿಲುಕಿದ ಇಬ್ಬರು ಮಂಗಳೂರಿಗರ ಏರ್‌ಲಿಫ್ಟ್‌: ಇನ್ನೊಬ್ಬರ ರಕ್ಷಣೆಗೆ ಪ್ರಯತ್ನ

  • ತಾಲಿಬಾನ್‌ ವಶಕ್ಕೆ ಒಳಪಟ್ಟಅಷ್ಘಾನಿಸ್ತಾನದಲ್ಲಿ ಸಿಲುಕಿದ ಮಂಗಳೂರಿನ ಉಳ್ಳಾಲದ ಇಬ್ಬರ ರಕ್ಷಣೆ
  • ಇವರಲ್ಲಿ ಒಬ್ಬರು ಈಗಾಗಲೇ ತಾಯ್ನಾಡು ತಲುಪಿದ್ದು, ಇನ್ನೊಬ್ಬರು ಇನ್ನಷ್ಟೆಬರಬೇಕಾಗಿದೆ.
2 Mangaluru people Airlift from Afghanistan snr
Author
Bengaluru, First Published Aug 20, 2021, 9:54 AM IST

ಮಂಗಳೂರು (ಆ.20):  ತಾಲಿಬಾನ್‌ ವಶಕ್ಕೆ ಒಳಪಟ್ಟಅಷ್ಘಾನಿಸ್ತಾನದಲ್ಲಿ ಸಿಲುಕಿದ ಮಂಗಳೂರಿನ ಉಳ್ಳಾಲದ ಇಬ್ಬರು ಸಹೋದರರನ್ನು ಏರ್‌ಲಿಫ್ಟ್‌ ಮಾಡಲಾಗಿದೆ. ಇವರಲ್ಲಿ ಒಬ್ಬರು ಈಗಾಗಲೇ ತಾಯ್ನಾಡು ತಲುಪಿದ್ದು, ಇನ್ನೊಬ್ಬರು ಇನ್ನಷ್ಟೆಬರಬೇಕಾಗಿದೆ. ಆದರೆ ಬಂಟ್ವಾಳದ ಸಿದ್ಧಕಟ್ಟೆಮೂಲದ ಪಾದ್ರಿಯ ರಕ್ಷಣೆಗೆ ಪ್ರಯತ್ನ ನಡೆಯುತ್ತಿದೆ.

ಮಂಗಳೂರು ಹೊರವಲಯದ ಉಳ್ಳಾಲ ನಿವಾಸಿ ಮೆಲ್ವಿನ್‌ ಬುಧವಾರ ಸುರಕ್ಷಿತವಾಗಿ ಮನೆಗೆ ವಾಪಸಾಗಿದ್ದಾರೆ. ಮೆಲ್ವಿನ್‌ ಅವರು ಕಾಬೂಲ್‌ನಲ್ಲಿ ಆಷ್ಘನ್‌ ಮಿಲಿಟರಿ ಕೇಂದ್ರದಲ್ಲಿ ಎಲೆಕ್ಟ್ರಿಷಿಯನ್‌ ಆಗಿ 10 ವರ್ಷಗಳಿಂದ ದುಡಿಯುತ್ತಿದ್ದರು. ಅಲ್ಲೇ ಸಮೀಪದಲ್ಲೇ ಇವರ ಸಹೋದರ ಮೆಲ್ವಿನ್‌ ಅವರ ಸಹೋದರ ಅಷ್ಘಾನಿಸ್ತಾನದ ಇಕೋಲೋಗ್‌ ಇಂಟರ್‌ ನ್ಯಾಷನಲ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. 3 ದಿನದ ಹಿಂದೆ ತಾಲಿಬಾನ್‌ಗಳ ಅಟ್ಟಹಾಸ ಜಾಸ್ತಿಯಾದಾಗ ಮೆಲ್ವಿನ್‌ ತಾಯ್ನಾಡಿಗೆ ಮರಳಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ದಿನವಿಡೀ ಕಾದ ಬಳಿಕ ನಸುಕಿನ ಜಾವ ಅಷ್ಘಾನ್‌ ಮಿಲಿಟರಿಗೆ ಸೇರಿದ ವಿಮಾನ ಏರ್‌ಲಿಫ್ಟ್‌ ಮಾಡಿತ್ತು. ಸಹೋದರನ ಮೊಬೈಲ್‌ ಸ್ವಿಚ್‌ಆಫ್‌ ಆಗಿತ್ತು.

ತಾಲಿಬಾನಿಗಳಿಗೆ ಸಾಲು ಸಾಲು ಸವಾಲು : ಹಣವಿಲ್ಲ, ಅಹಾರ ದುಬಾರಿ

3 ದಿನದಿಂದ ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಅತಂತ್ರರಾಗಿದ್ದ ಮೆಲ್ವಿನ್‌ರ ಸಹೋದರನನ್ನು ಬುಧವಾರ ರಾತ್ರಿ ಕತಾರ್‌ಗೆ ಏರ್‌ಲಿಫ್ಟ್‌ ಮಾಡಿರುವ ಮಾಹಿತಿ ಅವರ ಕುಟುಂಬಕ್ಕೆ ಲಭ್ಯವಾಗಿದೆ. ಅಲ್ಲಿಂದ ಒಂದು ವಾರದಲ್ಲಿ ತವರಿಗೆ ಆಗಮಿಸುವ ನಿರೀಕ್ಷೆ ಇದೆ.

ಸದ್ಯಕ್ಕೆ ಕ್ಷೇಮವಾಗಿದ್ದೇನೆ: ಫಾ.ಸಿಕ್ವೇರಾ

ಅಷ್ಘಾನಿಸ್ತಾನ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಬಂಟ್ವಾಳ ಸಿದ್ಧಕಟ್ಟೆಯ ಫಾ.ಜೆರೋಮ್‌ ಸಿಕ್ವೇರಾ ಅವರನ್ನು ಪಾರು ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಬುಧವಾರ ಸಂಜೆ ಸಿದ್ಧಕಟ್ಟೆಯಲ್ಲಿರುವ ಸಹೋದರನಿಗೆ ಕರೆ ಮಾಡಿ ಕ್ಷೇಮವಾಗಿದ್ದೇನೆ ಎಂದು ಹೇಳಿದ್ದು ಬಿಟ್ಟರೆ ಮತ್ತೆ ಫಾ.ಜೆರೋಮ್‌ ಸಿಕ್ವೇರಾ ಮಾತನಾಡಿದ್ದಾರೆಯೇ ಎಂಬುದು ಖಚಿತವಾಗಿಲ್ಲ. ಈ ಬಗ್ಗೆ ಮನೆಯವರು ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.

Follow Us:
Download App:
  • android
  • ios