Asianet Suvarna News Asianet Suvarna News

Covid Vaccine: ಇನ್ಮುಂದೆ ಆಟೋ, ಟ್ಯಾಕ್ಸಿ ಪ್ರಯಾಣಿಕರಿಗೂ 2 ಡೋಸ್‌ ಕಡ್ಡಾಯ?

*   ಹೆಚ್ಚುತ್ತಿರುವ ಕೊರೋನಾ ಕೇಸ್‌ 
*   ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ
*   ಸೋಂಕಿನ ತೀವ್ರತೆ ನೋಡಿ ಆದೇಶ ವಿಸ್ತರಿಸಲು ಚಿಂತನೆ
 

2 Dose Vaccine Mandatory to Auto Taxi Passengers in Bengaluru grg
Author
Bengaluru, First Published Dec 31, 2021, 5:40 AM IST

ಬೆಂಗಳೂರು(ಡಿ.31):  ಮಾಲ್‌, ವಾಣಿಜ್ಯ ಸಂಕೀರ್ಣ ಮತ್ತು ಚಿತ್ರಮಂದಿರಗಳ ಪ್ರವೇಶಕ್ಕೆ ಎರಡು ಡೋಸ್‌ ಲಸಿಕೆ(Double Dose Vaccine) ಕಡ್ಡಾಯಗೊಳಿಸಿರುವ ಆದೇಶವನ್ನು ಆಟೋ(Auto), ಟ್ಯಾಕ್ಸಿಗಳೂ(Taxi) ವಿಸ್ತರಿಸಿ ಜಾರಿ ಮಾಡುವಂತೆ ಸರ್ಕಾರಕ್ಕೆ (BBMP) ಪ್ರಸ್ತಾವನೆ ಸಲ್ಲಿಸಿದೆ.

ಕೊರೋನಾ(Coronavirus) ಸೋಂಕಿನ ತೀವ್ರತೆ ಹೀಗೆ ಮುಂದುವರಿದರೆ ಮೆಟ್ರೋ, ಬಸ್‌ನಂತಹ ಸಾರ್ವಜನಿಕ ಸಾರಿಗೆ ಸೇವೆಗಳಿಗೆ ಅನ್ವಯವಾಗುವಂತೆ ನಿಯಮ ಜಾರಿಗೊಳಿಸಲು ಸರ್ಕಾರಕ್ಕೆ(Government of Karnataka) ಬಿಬಿಎಂಪಿ ಪ್ರಸ್ತಾಪಿಸಿದೆ. ಸದ್ಯ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಬಿಎಂಪಿ ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವ ಗ್ರಾಹಕರಿಗೂ ಕೊರೋನಾ ಲಸಿಕೆ ಎರಡು ಡೋಸ್‌ ಕಡ್ಡಾಯಗೊಳಿಸುವ ಚಿಂತನೆಯಲ್ಲಿದೆ.

What Is Next After 3rd Dose: 3ನೇ ಡೋಸ್‌ ಆಗಿ ಬೇರೆ ಲಸಿಕೆ: ಜ.10ರೊಳಗೆ ತೀರ್ಮಾನ

ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್‌, ಹೊಸ ವೈರಸ್‌ ನಿಯಂತ್ರಣ ದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಲು ಎರಡೂ ಡೋಸ್‌ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಸೋಂಕಿನ ತೀವ್ರತೆ ನೋಡಿಕೊಂಡು ಆಟೋ ಮತ್ತು ಟ್ಯಾಕ್ಸಿಯಲ್ಲೂ ಕಡ್ಡಾಯ ಲಸಿಕೆ(Vaccine) ಆದೇಶ ವಿಸ್ತರಿಸುವ ಯೋಚನೆ ಇದೆ ಎಂದರು.

ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕ್‌ ಚಂದ್ರ, ಈಗಾಗಲೇ ಮುಂಬೈನಲ್ಲಿ ಕೋವಿಡ್‌ 2ನೇ ಡೋಸ್‌ ಲಸಿಕೆ ಪಡೆದವರಿಗೆ ಮಾತ್ರ ಆಟೋ, ಟ್ಯಾಕ್ಸಿ ಸೇರಿ ಸಾರ್ವಜನಿಕ ವಾಹನಗಳಲ್ಲಿ ಸಂಚಾರಕ್ಕೆ ಅನುಮತಿ ನೀಡಿದೆ. ಇದೇ ಮಾದರಿಯನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಮಕ್ಕಳ ಕೋವ್ಯಾಕ್ಸಿನ್‌ ಲಸಿಕೆ ಪರಿಣಾಮಕಾರಿ: ಪ್ರಯೋಗದಲ್ಲಿ ಸಾಬೀತು

ಹೈದರಾಬಾದ್‌: 2ರಿಂದ 18 ವರ್ಷದೊಳಗಿನ ಮಕ್ಕಳ(Children) ಮೇಲೆ ನಡೆಸಿದ ಕೋವ್ಯಾಕ್ಸಿನ್‌(Covaxin) ಲಸಿಕೆಯ ಎರಡು ಮತ್ತು ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆ(Clinical Trial) ಫಲಪ್ರದವಾಗಿದೆ. ಮಕ್ಕಳ ಮೇಲೆ ಲಸಿಕೆ ಪ್ರಯೋಗವು ಸುರಕ್ಷಿತ, ಪರಿಣಾಮಕಾರಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ ಎಂದು ಭಾರತ್‌ ಬಯೋಟೆಕ್‌ ಇಂಟರ್‌ ನ್ಯಾಷನಲ್‌ ಲಿ. ಗುರುವಾರ ತಿಳಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಲಸಿಕೆ ಅಭಿವೃದ್ಧಿ ಪಡಿಸಿರುವ ಭಾರತ್‌ ಬಯೋಟೆಕ್‌(Bharat Biotech), ‘ಲಸಿಕೆ ಪ್ರಯೋಗದ ಅಂಕಿಅಂಶಗಳು ಪ್ರೋತ್ಸಾಹದಾಯಕವಾಗಿವೆ. ಲಸಿಕೆಯ ಸುರಕ್ಷಿತತೆಯೇ ಪ್ರಶ್ನೆಯಾಗಿತ್ತು. ಆದರೆ ಮಕ್ಕಳ ಮೇಲೆ ಲಸಿಕೆ ಸುರಕ್ಷಿತ, ಪರಿಣಾಮಕಾರಿ ಎಂದು ಪ್ರಯೋಗದಲ್ಲಿ ತಿಳಿದುಬಂದಿದೆ. ಪ್ರಯೋಗದ ವೇಳೆ ಗಂಭೀರ ಅಡ್ಡ ಪರಿಣಾಮದ ವರದಿಯಾಗಿಲ್ಲ ಎಂದು ತಿಳಿಸಿದೆ. 526 ಅರ್ಹ ಮಕ್ಕಳ ಮೇಲೆ ಲಸಿಕೆಯನ್ನು ಪ್ರಯೋಗಿಸಲಾಗಿತ್ತು. ಇತ್ತೀಚೆಗೆ ಕೋವ್ಯಾಕ್ಸಿನ್‌ ಲಸಿಕೆಯನ್ನು 15-18 ವರ್ಷದ ಮಕ್ಕಳ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

Covid pills: ಭಾರತಕ್ಕೆ ಬಂತು ಮೊದಲ ಕೋವಿಡ್‌ ಗುಳಿಗೆ

ಜ.3ರಿಂದ ಎಲ್ಲ ಜಿಲ್ಲೆಗಳಲ್ಲಿ ಮಕ್ಕಳಿಗೆ ಕೊರೋನಾ ಲಸಿಕೆ

ಕೊರೋನಾ ರೂಪಾಂತರಿ ತಳಿ ಒಮಿಕ್ರೋನ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್‌ ಲಸಿಕೆ ನೀಡಲು ತೀರ್ಮಾನಿಸಲಾಗಿದೆ. ಹೀಗಾಗಿ ಜ.3ರಿಂದ ರಾಜ್ಯದ ಎಲ್ಲ ಜಿಲ್ಲೆಗಳು ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಮಕ್ಕಳ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರಿಗೆ ಸೂಚಿಸಿದ್ದಾರೆ.

ಕೊರೋನಾ ನಿಯಂತ್ರಣ ಕಾರ್ಯತಂತ್ರಗಳಲ್ಲಿ ಲಸಿಕಾಕರಣವೂ ಒಂದಾಗಿದ್ದು, ಅತ್ಯಂತ ಯಶಸ್ವಿ ಹಾಗೂ ಪರಿಣಾಮಕಾರಿ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ 2021ರ ಜನವರಿ 16ರಿಂದ ವಿವಿಧ ಗುಂಪಿನ ಫಲಾನುಭವಿಗಳಿಗೆ ವಿವಿಧ ಹಂತಗಳಲ್ಲಿ ಕೊರೋನಾ ಲಸಿಕಾಕರಣ ನಡೆಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ 8.5 ಕೋಟಿಗೂ ಅಧಿಕ ಡೋಸ್‌ ಲಸಿಕೆ ನೀಡಲಾಗಿದೆ. ಈ ಪೈಕಿ 4.7 ಕೋಟಿ (ಶೇ.97) ಮೊದಲ ಡೋಸ್‌ ಹಾಗೂ 3.78 ಕೋಟಿ (ಶೇ.77) ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ. ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲದಿಂದ ಈ ಗಮನಾರ್ಹ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದು ಅಭಿನಂದನೆ ಸಲ್ಲಿಸಿದ್ದಾರೆ.
 

Follow Us:
Download App:
  • android
  • ios