Asianet Suvarna News Asianet Suvarna News

ಮಂಗಳೂರು ಗೋಲಿಬಾರ್‌ ಸಂತ್ರಸ್ತರ ನೆರವಿಗೆ 2 ಕೋಟಿ ಸಂಗ್ರಹ?

ಮಂಗಳೂರಿನಲ್ಲಿ ಡಿ.19ರಂದು ನಡೆದ ಹಿಂಸಾಚಾರ ವೇಳೆ ನಡೆದ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ಸಮುದಾಯದಿಂದ ಸುಮಾರು 2 ಕೋಟಿ ರು.ಗೂ ಅಧಿಕ ಮೊತ್ತ ಸಂಗ್ರಹಣೆಯಾಗಿರುವುದಾಗಿ ಹೇಳಲಾಗಿದೆ.

2 cores collected for golibar victims in mangalore
Author
Bangalore, First Published Jan 4, 2020, 10:08 AM IST
  • Facebook
  • Twitter
  • Whatsapp

ಮಂಗಳೂರು(ಜ.04): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಡಿ.19ರಂದು ನಡೆದ ಹಿಂಸಾಚಾರ ವೇಳೆ ನಡೆದ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ಸಮುದಾಯದಿಂದ ಸುಮಾರು 2 ಕೋಟಿ ರು.ಗೂ ಅಧಿಕ ಮೊತ್ತ ಸಂಗ್ರಹಣೆಯಾಗಿರುವುದಾಗಿ ಹೇಳಲಾಗಿದೆ.

ಗೋಲಿಬಾರ್‌ನಲ್ಲಿ ಮೃತರಾದ ಇಬ್ಬರಿಗೆ ಸರ್ಕಾರ ಆರಂಭದಲ್ಲಿ ಪರಿಹಾರವಾಗಿ ತಲಾ 10 ಲಕ್ಷ ರು. ಮೊತ್ತ ಪ್ರಕಟಿಸಿ, ಬಳಿಕ ಮೃತರ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪರಿಹಾರ ಮೊತ್ತವನ್ನು ತಡೆಹಿಡಿದಿತ್ತು. ಸರ್ಕಾರದ ಈ ಧೋರಣೆಗೆ ಹಲವು ಮುಸ್ಲಿಂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಂಬಳದ ಜೋಡೆತ್ತು..!

ಇಂತಹ ಸರ್ಕಾರದ ನೆರವನ್ನು ತಿರಸ್ಕರಿಸುವಂತೆ ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟ ಬಹಿರಂಗವಾಗಿ ಹೇಳಿಕೆ ನೀಡಿ, ಸಮಾಜ ಬಾಂಧವರ ನೆರವನ್ನು ಪಡೆಯುವಂತೆ ತಿಳಿಸಿತ್ತು. ಇದೇ ವೇಳೆ ಮಾಜಿ ಸಚಿವ, ಶಾಸಕ ಯು.ಟಿ.ಖಾದರ್‌ ಹಾಗೂ ಮಾಜಿ ಶಾಸಕ ಮೊಯ್ದಿನ್‌ ಬಾವಾ ಕೂಡ ಸಮಾಜಕ್ಕೆ ನೆರವು ನೀಡುವ ತಾಕತ್ತು ಇದೆ ಎಂದು ಹೇಳಿದ್ದರು. ಆ ಬಳಿಕ ಮುಸ್ಲಿಂ ಸಮುದಾಯದ ವಿವಿಧ ಸಂಘಟನೆಗಳು ಸುಮಾರು 2 ಕೋಟಿ ರು.ಗೂ ಅಧಿಕ ಮೊತ್ತವನ್ನು ನೇರವಾಗಿ ಸಂಗ್ರಹಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮಂಗಳೂರು ಗಲಭೆ ಹಿಂದೆ ಅಫ್ಘಾನ್ ಫೋಟೋ ಕಿಚ್ಚು..! ಫೋಟೋದಲ್ಲೇನಿತ್ತು..?

ಲಭ್ಯ ಮಾಹಿತಿ ಪ್ರಕಾರ ಈ ಮೊತ್ತದಲ್ಲಿ ಮೃತ ನೌಶೀನ್‌ ಕಂದುಕ ಹಾಗೂ ಜಲೀಲ್‌ ಕುದ್ರೋಳಿ ಅವರ ಕುಟುಂಬಕ್ಕೆ ತಲಾ 25 ಲಕ್ಷ ರೂ. ನೀಡುವ ಸಾಧ್ಯತೆ ಇದ್ದು, ಗೋಲಿಬಾರ್‌ನಲ್ಲಿ ಗಾಯಗೊಂಡಿರುವ ಎಂಟು ಮಂದಿಗೆ ಉಳಿದ ಮೊತ್ತವನ್ನು ಹಂಚಲಿದ್ದಾರೆ ಎನ್ನಲಾಗಿದೆ. ಈ ನೆರವಿನ ಮೊತ್ತವನ್ನು ಮಂಗಳೂರಿನಲ್ಲಿ ಬೃಹತ್‌ ಕಾರ್ಯಕ್ರಮ ನಡೆಸಿ ಹಸ್ತಾಂತರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಅಧಿಕೃತವಾಗಿ ಸಂಬಂಧಪಟ್ಟವರಿಂದ ಘೋಷಣೆ ಹೊರಬಿದ್ದಿಲ್ಲ.

ನೇತ್ರಾವತಿಗೆ ಮತ್ತೊಬ್ಬ ಆಹುತಿ: ಸಿದ್ಧಾಥ್‌ ಹೆಗ್ಡೆ ಆತ್ಮಹತ್ಯೆ ಸ್ಥಳದಲ್ಲಿಯೇ ನದಿಗೆ ಹಾರಿದ ಯುವಕ

ಈಗಾಗಲೇ ಮೃತರ ಕುಟುಂಬಕ್ಕೆ ಕಾಂಗ್ರೆಸ್‌ನಿಂದ ತಲಾ 7.50 ಲಕ್ಷ ರು., ಜೆಡಿಎಸ್‌ ಪರವಾಗಿ ತಲಾ 5 ಲಕ್ಷ ಹಾಗೂ ಪಶ್ಚಿಮ ಬಂಗಾಳ ಸರ್ಕಾರ ತಲಾ 5 ಲಕ್ಷ ರು. ಪರಿಹಾರ ಮೊತ್ತ ನೀಡಿದೆ. ಇದನ್ನು ಹೊರತುಪಡಿಸಿ ಸುಮಾರು 2 ಕೋ. ರು. ಮಿಕ್ಕಿ ನೆರವಿನ ಮೊತ್ತ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.

Follow Us:
Download App:
  • android
  • ios