ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಂಬಳದ ಜೋಡೆತ್ತು..!

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಈಗ ಅಧ್ಬುತ ಕಲಾಕೃತಿಗಳನ್ನು ನೋಡಿ ಆನಂದಿಸಬಹುದು. ಒಟ್ಟು 56 ಲಕ್ಷ ರು. ಮೌಲ್ಯದ ಕಲಾಕೃತಿಗಳನ್ನು ರಚಿಸಲಾಗಿದ್ದು, ಪ್ರಯಾಣಿಕರಿಗೆ ಕರಾವಳಿಯ ಕಿರು ಪರಿಚಯವನ್ನು ಕಲಾಕೃತಿಗಳು ಮಾಡಿಕೊಡಲಿವೆ.

art statues representing coastal karnataka culture in mangalore airport

ಮಂಗಳೂರು(ಜ.04): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕಲಾಕೃತಿಗಳಿಂದ ಸುಂದರಗೊಳಿಸುವ ಯೋಜನೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಗಿದೆ ಎಂದು ರಥಬೀದಿಯ ಎಸ್‌ಕ್ಯೂಬ್‌ ಆರ್ಟ್‌ ಗ್ಯಾಲರಿಯ ಮುಖ್ಯಸ್ಥ ಶಶಾಂಕ್‌ ತಿಳಿಸಿದ್ದಾರೆ.

ವಿಮಾನ ನಿಲ್ದಾಣ ಪ್ರಾಧಿಕಾರ ಟೆಂಡರ್‌ ಆಹ್ವಾನದ ಮೇರೆಗೆ ಸಂಸ್ಥೆ ಬಿಡ್‌ ಮಾಡಿ ಕಲಾಕೃತಿಗಳನ್ನು ಪ್ರಾಧಿಕಾರದ ಮುಂದೆ ಪ್ರಸ್ತುತ ಪಡಿಸಿತ್ತು. ಮೆಚ್ಚುಗೆ ವ್ಯಕ್ತಪಡಿಸಿದ ಆಯ್ಕೆ ಮಂಡಳಿ, ಪ್ರಾಧಿಕಾರ ನಿಲ್ದಾಣದ ಆರು ವಲಯಗಳ ಪೈಕಿ ಎರಡು ವಲಯಗಳಲ್ಲಿ 6 ಕಲಾಕೃತಿಗಳನ್ನು ರಚಿಸಲು ಗುತ್ತಿಗೆ ನೀಡಿತು. ಗುತ್ತಿಗೆಯ ಒಟ್ಟು ಮೌಲ್ಯ 56 ಲಕ್ಷ ರು. ಆಗಿದ್ದು, ಆರು ತಿಂಗಳಲ್ಲಿ ಕಲಾಕೃತಿ ಪೂರ್ಣಗೊಳಿಸಿ, ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ ಎಂದವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಂಗಳೂರು ಗಲಭೆ ಹಿಂದೆ ಅಫ್ಘಾನ್ ಫೋಟೋ ಕಿಚ್ಚು..! ಫೋಟೋದಲ್ಲೇನಿತ್ತು..?

26 ಅಡಿ ಎತ್ತರದ ಮಾನವನ ಕೈ ಮತ್ತು ಅದರಲ್ಲಿ ಕಾಗದದ ರಾಕೆಟ್‌ ಕಲಾಕೃತಿಯನ್ನು ವಿಮಾನ ನಿಲ್ದಾಣದಲ್ಲಿ ಹೊರಭಾಗದಲ್ಲಿ ನಿರ್ಮಿಸಲಾಗಿದೆ. ಇದು ವಿಮಾನ ಪ್ರಯಾಣಿಕರ ಕನಸು ಮತ್ತು ಆಕಾಂಕ್ಷೆಗಳನ್ನು ಸೂಚಿಸುವ ಚಿತ್ರ. ನಿಲ್ದಾಣದ ನಿರ್ಗಮನ ಆವರಣದಲ್ಲಿ ಕಂಬಳದ ಫೈಬರ್‌ ಗ್ಲಾಸ್‌ ಶಿಲ್ಪವನ್ನು ರಚಿಸಲಾಗಿದ್ದು, ಕರಾವಳಿಯ ಜಾನಪದ ಕಲೆಯನ್ನು ಪ್ರವಾಸಿಗರಿಗೆ ಪರಿಚಯಿಸುವುದು ಉದ್ದೇಶ. ಪ್ರವೇಶ ದ್ವಾರದಲ್ಲಿ ಫೈಬರ್‌ ಗ್ಲಾಸ್‌ ಮತ್ತು ಸ್ಟೀಲ್‌ ಮೆಟೀರಿಯಲ್‌ನಿಂದ ದೋಣಿ ನಡೆಸುವ ಬೆಸ್ತನ ಕಲಾಕೃತಿ ರಚಿಸಲಾಗಿದೆ. ಇದು ಕರಾವಳಿಯ ಮೀನುಗಾರಿಕೆ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಮೀನುಗಾರರ ಆಕಾಂಕ್ಷೆ, ಧೀರತನ ಮತ್ತು ಸಾಹಸ ಜೀವನ, ದೈನಂದಿನ ಹೋರಾಟವನ್ನು ಇದು ಪ್ರತಿಬಿಂಬಿಸುತ್ತದೆ. ಫೈಬರ್‌ ಗ್ಲಾಸ್‌ ಮತ್ತು ಸ್ಟೀಲ್‌ ಮೆಟೀರಿಯಲ್‌ನಿಂದ ಹುಲಿವೇಷ ಕುಣಿತದ ಚಿತ್ರಣವನ್ನು ಆಗಮನ ದ್ವಾರದಲ್ಲಿ ನಿರ್ಮಿಸಲಾಗಿದೆ. ವಿಶ್ವ ಪ್ರಸಿದ್ಧ ಮಂಗಳೂರಿನ ಹುಲಿವೇಷವನ್ನು ಪ್ರವಾಸಿಗರಿಗೆ ಪರಿಚಯಿಸಲಾಗುತ್ತಿದೆ ಎಂದು ಈ ಕಲಾಕೃತಿಗಳನ್ನು ರಚಿಸಿದ ಕಲಾವಿದ ಹರೀಶ್‌ ಕೊಡಿಯಾಲ್‌ಬೈಲ್‌ ವಿವರಿಸಿದ್ದಾರೆ.

ನೇತ್ರಾವತಿಗೆ ಮತ್ತೊಬ್ಬ ಆಹುತಿ: ಸಿದ್ಧಾಥ್‌ ಹೆಗ್ಡೆ ಆತ್ಮಹತ್ಯೆ ಸ್ಥಳದಲ್ಲಿಯೇ ನದಿಗೆ ಹಾರಿದ ಯುವಕ

ಕಲಾವಿದ ವೆಂಕಿಪಲಿಮಾರು, ತುಳು ಜಾನಪದ, ಸಂಸ್ಕೃತಿ ವಿಷಯದಲ್ಲಿ ಆ ಪ್ರತೇಕ ಟೆರಕೋಟಾ ಶಿಲ್ಪಗಳನ್ನು ರಚಿಸಿದ್ದಾರೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಕಾರಿಡಾರ್‌ಗಳಲ್ಲಿ ಇದನ್ನು ಸ್ಥಾಪಿಸಲಾಗಿದೆ. ಕಲಾವಿದೆ ರೇಷ್ಮಾ ಎಸ್‌.ಶೆಟ್ಟಿಅವರು ಮೂಡುಬಿದಿರೆ ಜೈನ ಮಠ ಮತ್ತು ಶ್ರವಣ ಬೆಳಗೊಳ ಮಠದ ಅಧಿಕೃತ ಸಾಂಪ್ರದಾಯಿಕ ಜೈನ ವರ್ಣ ಚಿತ್ರಗಳನ್ನು ಆಧರಿಸಿ 18*6 ಅಡಿಯ ಜೈನ್‌ ಮಿನಿಯೇಚರ್‌ ಪೈಂಟಿಂಗ್‌ ರಚಿಸಿದ್ದು, ನಿರ್ಗಮನ ದ್ವಾರದ ಎರಡೂ ಬದಿಗಳಲ್ಲಿ ಗೋಡೆಯಲ್ಲಿ ಪ್ರದರ್ಶಿಸಲಾಗಿದೆ ಎಂದು ಹರೀಶ್‌ ತಿಳಿಸಿದ್ದಾರೆ. ಕಲಾವಿದ ರಾಜೇಂದ್ರ ಕೇದಿಗೆ ಇದ್ದರು.

Latest Videos
Follow Us:
Download App:
  • android
  • ios