ಮಂಗಳೂರು ಗಲಭೆ ಹಿಂದೆ ಅಫ್ಘಾನ್ ಫೋಟೋ ಕಿಚ್ಚು..! ಫೋಟೋದಲ್ಲೇನಿತ್ತು..?
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆಯ ಹಿಂದೆ ಅಫ್ಘಾನಿಸ್ತಾನದ ಹಿಂಸಾಚಾರದ ಫೋಟೋಗಳೇ ಕಿಚ್ಚು ಹತ್ತಿಸಿದೆ ಎಂಬ ವಿಚಾರ ತನಿಖೆ ವೇಳೆ ಬಹಿರಂಗವಾಗಿದೆ.
ಮಂಗಳೂರು(ಜ.03): ಮಂಗಳೂರು ಗಲಭೆಯ ಹಿಂದೆ ವಿದೇಶದಿಂದ ಹರಿದು ಬಂದ ಸಂದೇಶಗಳ ಕೈವಾಡವಿದೆ ಎಂಬ ವಿಚಾರ ಬಯಲಾದ ಬೆನ್ನಲ್ಲೇ ಇದೀಗ ಮತ್ತೊಂದು ವಿಷಯ ತಿಳಿದು ಬಂದಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆಯ ಹಿಂದೆ ಅಫ್ಘಾನಿಸ್ತಾನದ ಹಿಂಸಾಚಾರದ ಫೋಟೋಗಳೇ ಕಿಚ್ಚು ಹತ್ತಿಸಿದೆ ಎಂಬ ವಿಚಾರ ತನಿಖೆ ವೇಳೆ ಬಹಿರಂಗವಾಗಿದೆ.
ಮಂಗಳೂರು ಗಲಭೆ : ಹೊರಬಿತ್ತು ಕಮ್ಮಕ್ಕು ನೀಡಿದ ಸ್ಫೋಟಕ ಮಾಹಿತಿ !
ಮಂಗಳೂರು ಪೌರತ್ವ ತಿದ್ದುಪಡಿ ಹಿಂಸಾಚಾರ ಪ್ರಕರಣದಲ್ಲಿ ಅಫ್ಘಾನ್ ಹಿಂಸಾಚಾರದ ಫೋಟೋ ಬಳಸಿ ಪ್ರಚೋದನೆ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲದ ರೌಡಿ ಶೀಟರ್ ಟೋಪಿ ಸಿದ್ದಿಕ್(48) ಅಫ್ಘಾನಿಸ್ತಾನದ ಹಿಂಸಾಚಾರದ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದ.
ಡಿ.19ರ ಪ್ರತಿಭಟನೆ ಹಿಂಸಾರೂಪ ಪಡೆಯಲು ಸಿದ್ದಿಕ್ ಕಾರಣವೆಂಬುದು ವಿಚಾರಣೆ ವೇಳೆ ಬಹಿರಂಗವಾಗಿದೆ. ಅಫ್ಘಾನ್‌ನಲ್ಲಿ ಪುಟ್ಟ ಮಗುವಿನ ಮೇಲೆ ನಡೆದ ಹಿಂಸಾಚಾರ ಫೋಟೋ ಬಳಸಿಕೊಂಡು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಕಾಶ್ಮೀರ ಸೇರಿ ನಾನಾ ಕಡೆಯ ಫೋಟೋಗಳನ್ನು ಮಂಗಳೂರಿನ ಫೋಟೋ ಎಂದು ಹರಿಬಿಡಲಾಗಿತ್ತು.
ನೇತ್ರಾವತಿಗೆ ಮತ್ತೊಬ್ಬ ಆಹುತಿ: ಸಿದ್ಧಾಥ್ ಹೆಗ್ಡೆ ಆತ್ಮಹತ್ಯೆ ಸ್ಥಳದಲ್ಲಿಯೇ ನದಿಗೆ ಹಾರಿದ ಯುವಕ
10ಕ್ಕೂ ಅಧಿಕ ವಾಟ್ಸಪ್ ಗ್ರೂಪ್‌ಗಳಲ್ಲಿ ಸಂದೇಶ ವೈರಲ್ ಮಾಡಿದ್ದ ಆರೋಪಿ ಗಲಭೆಗೆ ಪ್ರಚೋದನೆ ನೀಡಿದ್ದ. ಮಂಗಳೂರು ಸೈಬರ್ ಕ್ರೈಮ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತನ ಮೇಲೆ ಉಳ್ಳಾಲ ಠಾಣೆಯಲ್ಲಿ ಕೊಲೆ ಯತ್ನ, ಗಲಭೆ ಸೇರಿ ಹತ್ತು ಕೇಸುಗಳಿವೆ.
ವಿದೇಶದಿಂದ ಬಂದ ಮೇಸೇಜ್‌ಗಳಿಂದ ಮಂಗಳೂರಲ್ಲಿ ಗಲಭೆ..?