ಮಂಗಳೂರು(ಜು.13): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮುದಾಯಕ್ಕೆ ಹರಡಿರುವ ಕೊರೋನಾ ಸೋಂಕು ಈಗ ಹಿಡಿತಕ್ಕೆ ಬಾರದಷ್ಟುತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಿದ್ದು, ಇದೇ ಮೊದಲ ಬಾರಿಗೆ ಭಾನುವಾರ 196 ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಸೋಂಕಿತರ ಸಂಖ್ಯೆ ಏರುತ್ತಿರುವಂತೆಯೇ ಸಾವಿನ ಸಂಖ್ಯೆಯೂ ನಿಯಂತ್ರಣಕ್ಕೆ ಸಿಗದೆ ಮತ್ತೆ ಐವರು ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಸಾವಿನ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ಭಾನುವಾರ ಒಟ್ಟು 96 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಬೆಳ್ತಂಗಡಿಯ ಪಿಲಿಚಾಮುಂಡಿಕಲ್ಲು ನಿವಾಸಿ 55 ವರ್ಷದ ವ್ಯಕ್ತಿ, ಪುತ್ತೂರಿನ ಮೂಲಡ್ಕ ನಿವಾಸಿ 50 ವರ್ಷದ ವ್ಯಕ್ತಿ, ಮಂಗಳೂರಿನ ಉರ್ವಾಸ್ಟೋರ್‌ನ 72 ವರ್ಷದ ವೃದ್ಧ, ಮಂಗಳೂರಿನ ಬಳ್ಳಾಲ್‌ಭಾಗ್‌ ನಿವಾಸಿ 58 ವರ್ಷದ ವೃದ್ಧೆ, ಬಂದರು ನಿವಾಸಿ 68 ವರ್ಷದ ವೃದ್ಧೆ ಬಲಿಯಾದವರು. ಇವರಲ್ಲಿ ಒಬ್ಬರು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರೆ, ಉಳಿದ ನಾಲ್ವರು ಡಯಾಬಿಟಿಸ್‌, ಹೈಪರ್‌ ಟೆನ್ಶನ್‌, ಹೃದಯ ರೋಗ ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮೂವರು ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರೆ, ಇನ್ನೊಬ್ಬರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಒಬ್ಬರು ಮನೆಯಲ್ಲೇ ತೀವ್ರ ಉಸಿರಾಟ ಸಮಸ್ಯೆಯಿಂದ ಸಾವಿಗೀಡಾಗಿದ್ದಾರೆ.

ಬಯೋಕಾನ್‌ ಕೊರೋನಾ ಔಷಧಕ್ಕೆ 32 ಸಾವಿರ, ಒಬ್ಬ ರೋಗಿಗೆ 4 ಇಂಜೆಕ್ಷನ್

ಮೂಲ ಗೊತ್ತಿಲ್ಲದ ಸೋಂಕು ಏರಿಕೆ: ಒಂದೇ ದಿನದಲ್ಲಿ 196 ಪಾಸಿಟಿವ್‌ ಪ್ರಕರಣಗಳು ದಾಖಲಾಗಿರುವುದು ಜಿಲ್ಲೆಯಲ್ಲಿ ಇದೇ ಮೊದಲು. ಇದಕ್ಕಿಂತಲೂ ತೀವ್ರ ಆತಂಕದ ಸಂಗತಿಯೆಂದರೆ, ಇವರಲ್ಲಿ ಸೋಂಕು ಮೂಲವೇ ಪತ್ತೆಯಾಗದ 57 ಪ್ರಕರಣಗಳಿವೆ. ದಿನದಿಂದ ದಿನಕ್ಕೆ ಇಂತಹ ಪ್ರಕರಣಗಳು ಏರುತ್ತಿರುವುದು, ಸಮುದಾಯದಲ್ಲಿ ಸೋಂಕು ಹರಡುತ್ತಿರುವ ತೀವ್ರತೆಯನ್ನು ಬಿಂಬಿಸುತ್ತಿದೆ.

ಹಿಂದೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ, ಹೊರ ಪ್ರದೇಶಗಳಿಂದ ಬಂದವರಿಗೇ ಹೆಚ್ಚು ಪಾಸಿಟಿವ್‌ ಬರುತ್ತಿದ್ದರೆ, ಕೆಲ ದಿನಗಳಿಂದ ಏಕಾಏಕಿ ಸೋಂಕು ಹರಡುವ ಸ್ವರೂಪವೇ ಬದಲಾಗಿಬಿಟ್ಟಿದೆ. ಭಾನುವಾರ ಹೊಸದಾಗಿ ಸೋಂಕು ಪತ್ತೆಯಾದ 196 ಮಂದಿಯಲ್ಲಿ ಕೇವಲ 20 ಮಂದಿಗೆ ಮಾತ್ರ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಬಂದಿದ್ದರೆ, ಇನ್ಫೂ$್ಲಯೆನ್ಜಾ ಲೈಕ್‌ ಇಲ್ನೆಸ್‌ 91 ಪ್ರಕರಣಗಳಿವೆ. ತೀವ್ರ ಉಸಿರಾಟ ಸಮಸ್ಯೆಯ 16 ಪ್ರಕರಣಗಳು ಇವೆ. ವಿದೇಶದಿಂದ ಬಂದ 10 ಮಂದಿಗೆ ಮಾತ್ರ ಪಾಸಿಟಿವ್‌ ದೃಢಪಟ್ಟಿದೆ. ಹೆರಿಗೆಯ ಮೊದಲು ಇಬ್ಬರು ಗರ್ಭಿಣಿಯರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.

ನಿನ್ನೆ ದೇಶದಲ್ಲಿ 30,800 ಜನರಿಗೆ ಕೊರೋನಾ, 503 ಸಾವು

ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 96 ಮಂದಿ ಭಾನುವಾರ ಗುಣಮುಖರಾಗಿ ಡಿಸ್ಚಾಜ್‌ರ್‍ ಆಗಿದ್ದಾರೆ. ಇವರಲ್ಲಿ ಹೆಚ್ಚಿನವರು ಯುವಕರೇ ಆಗಿದ್ದರೆ, ಹಿರಿಯ ನಾಗರಿಕರೂ ಸೇರಿದ್ದಾರೆ.

ಒಟ್ಟು ಸೋಂಕಿತರು- 2230

ಗುಣಮುಖರು- 876

ಮೃತರು- 46

ಚಿಕಿತ್ಸೆ ಪಡೆಯುತ್ತಿರುವವರು- 1308