ಮಂಗಳೂರು(ಜೂ.13): ಸೌದಿ ಅರೇಬಿಯಾದಿಂದ ಮಂಗಳೂರಿಗೆ ಸತತ 2ನೇ ದಿನವೂ ಮತ್ತೊಂದು ಚಾರ್ಟರ್‌ ವಿಮಾನ ಆಗಮಿಸಿದ್ದು, 172 ಪ್ರಯಾಣಿಕರು ಮಂಗಳೂರಿಗೆ ಬಂದಿಳಿದು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ.

ಗಲ್‌್ಫ ಏರ್‌ ಜಿಎಫ್‌-7272 ವಿಮಾನವು ಗುರುವಾರ ತಡರಾತ್ರಿ ಬಂದಿಳಿದಿದೆ. ಈ ವಿಮಾನವನ್ನು ಸೌದಿ ಅರೇಬಿಯಾದ ಎಕ್ಸ್‌ಪರ್ಟೈಸ್‌ ಕಾಂಟ್ರಾಕ್ಟಿಂಗ್‌ ಲಿಮಿಟೆಡ್‌ನ ನಿರ್ದೇಶಕ ಕೆ.ಎಸ್‌. ಶೇಖ್‌ ಕರ್ನಿರೆ ಈ ವಿಮಾನದ ಎಲ್ಲ ಪ್ರಯಾಣಿಕರ ಪ್ರಯಾಣವೆಚ್ಚ ಭರಿಸಿದ್ದಾರೆ. ಪ್ರಯಾಣಿಕರಲ್ಲಿ ಅವರ ಕಂಪೆನಿಯ ಉದ್ಯೋಗಿಗಳು ಮತ್ತು ಅವರ ಕುಟುಂಬಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.

ಸೌದಿಯಿಂದ 167 ಕನ್ನಡಿಗರು ತವರಿಗೆ: ಮಾನವೀಯತೆ ಮೆರೆದ ಅನಿವಾಸಿ ಉದ್ಯಮಿಗಳು

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬರುವ ಪ್ರತಿಯೊಂದು ವಿಮಾನ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿ ಸಾಂಸ್ಥಿಕ ಕ್ವಾರಂಟೈನ್‌ ಮಾಡಲು ಜಿಲ್ಲಾಡಳಿತದಿಂದ ತಂಡ ರಚನೆ ಮಾಡಲಾಗಿದೆ. ಅದರಂತೆ ಸರ್ಕಾರದ ಮಾರ್ಗದರ್ಶನದಂತೆ ಎಲ್ಲ ಪ್ರಯಾಣಿಕರನ್ನು ನಗರದ ವಿವಿಧ ಹೊಟೇಲ್‌ಗಳಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.

ಇಂದೂ ಬರಲಿದೆ ಚಾರ್ಟರ್‌ ಫ್ಲೈಟ್‌

ಸತತ ಮೂರನೇ ದಿನವಾದ ಶನಿವಾರವೂ ಮತ್ತೊಂದು ಚಾರ್ಟರ್‌ ವಿಮಾನ ದುಬೈನಿಂದ ಮಂಗಳೂರಿಗೆ ಬರಲಿದೆ. ದುಬೈನ ರಾಸ್‌ ಅಲ್‌ಖೈಮಾ ವಿಮಾನ ನಿಲ್ದಾಣದಿಂದ ಉತ್ತರ ಕನ್ನಡ ಜಿಲ್ಲೆ ಮತ್ತು ಸುತ್ತಮುತ್ತಲಿನ 175 ಪ್ರಯಾಣಿಕರು ಮತ್ತು ಒಂಭತ್ತು ಶಿಶುಗಳನ್ನು ಹೊತ್ತ ಈ ಚಾರಿಟಿ ವಿಮಾನ ಶನಿವಾರ ಮುಂಜಾನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ಇದರ ವೆಚ್ಚವನ್ನು ದುಬೈನ ನುಹಾ ಜನರಲ್‌ ಟ್ರೇಡಿಂಗ್‌ ಕಂಪೆನಿಯ ಅಧ್ಯಕ್ಷ ಎನ್‌ಆರ್‌ಐ ಉದ್ಯಮಿ ಮುನಿರಿ ಅತೀಕುರೆಹ್ಮಾನ್‌ ಭರಿಸಿದ್ದಾರೆ.

ಸ್ಪೆ ೖಸ್‌ ಜೆಟ್‌ 9085 ವಿಮಾನ ಶುಕ್ರವಾರ ರಾತ್ರಿ 10.35ಕ್ಕೆ (ಯುಎಇ ಸಮಯ) ಹೊರಟು ಬೆಳಗ್ಗೆ 3.55ರ ಸುಮಾರಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಲಿದೆ.

ದಕ್ಷಿಣ ಕನ್ನಡದಲ್ಲಿ ಮತ್ತೆ 17 ಪಾಸಿಟಿವ್‌, ನಾಲ್ವರು ಡಿಸ್ಚಾರ್ಜ್

ದುಬೈನಲ್ಲಿರುವ ಭಟ್ಕಳ ಮತ್ತು ಉತ್ತರ ಕನ್ನಡ ಜಿಲ್ಲೆಯ ಸುತ್ತಮುತ್ತಲಿನ ಜನರ ದುಃಸ್ಥಿತಿಯನ್ನು ನೋಡಿ ಅವರನ್ನು ತಾಯ್ನಾಡಿಗೆ ಕಳುಹಿಸಲು ಈ ವಿಮಾನ ವ್ಯವಸ್ಥೆ ಮಾಡಲು ಮುಂದೆ ಬಂದಿದ್ದಾಗಿ ಮುನಿರಿ ತಿಳಿಸಿದ್ದಾರೆ. ಕೋವಿಡ್‌ -19 ಪರೀಕ್ಷೆಯ ನಂತರವೇ ಎಲ್ಲ ಪ್ರಯಾಣಿಕರು ದುಬೈನ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಲಿದ್ದಾರೆ ಎಂದು ಅವರು ಹೇಳಿದರು.