ನೋಡಪ್ಪಾ ನಾನು ಎಷ್ಟು ವಾಚ್ ಬೇಕಾದ್ರು ನನ್ನ ದುಡ್ಡಲ್ಲಿ ತೆಗೆದುಕೊಳ್ಳುವ ಶಕ್ತಿ ನನಗಿದೆ. ಯಾರು ಪ್ಯಾಂಟ್ ಹಾಕ್ತಾರೆ, ವಾಚ್ ಹಾಕ್ತಾರೆ, ಕನ್ನಡಕ ಹಾಕೋತಾರೆ ನಾನು ಪ್ರಶ್ನೆ ಮಾಡೋಕೆ ಹೋಗೊಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಹಾಸನ (ಡಿ.06): ನೋಡಪ್ಪಾ ನಾನು ಎಷ್ಟು ವಾಚ್ ಬೇಕಾದ್ರು ನನ್ನ ದುಡ್ಡಲ್ಲಿ ತೆಗೆದುಕೊಳ್ಳುವ ಶಕ್ತಿ ನನಗಿದೆ. ಯಾರು ಪ್ಯಾಂಟ್ ಹಾಕ್ತಾರೆ, ವಾಚ್ ಹಾಕ್ತಾರೆ, ಕನ್ನಡಕ ಹಾಕೋತಾರೆ ನಾನು ಪ್ರಶ್ನೆ ಮಾಡೋಕೆ ಹೋಗೊಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ನಂತರ ಮಾತನಾಡಿದ ಅವರು, ಅದು ಅವರವರ ವೈಯಕ್ತಿಕ ವಿಚಾರ,‌ ಆಸೆಗಳು. ಕೆಲವರು ಒಂದು ಸಾವಿರದ ಶೂ ಹಾಕೋತಾರೆ ಕೆಲವರು ಒಂದು ‌ಲಕ್ಷದ ಶೂ ಹಾಕೋತಾರೆ. ನಾನು ಒಂದು ಸಾವಿರದ ವಾಚ್ ಆದ್ರೂ ಕಟ್ಟುತ್ತೇನೆ, ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ. ಅದು ನನ್ನ ಆಸ್ತಿ, ನನ್ನ ಸಂಪಾದನೆ, ಶ್ರಮ,‌ ಕಷ್ಟ ಎಂದರು.

ಏನೋ ಪಾಪ ವಿರೋಧ ಪಾರ್ಟಿ ಗೊತ್ತಿಲ್ಲದೆ ಮಾತಾಡಿದ್ದಾರೆ ಬಿಡಿ. ಬಿಜೆಪಿ ಲೀಡರ್‌ಗಳಿಗೆ ನನ್ನ ವ್ಯವಹಾರ ಏನು ಎಂಬುದು ಗೊತ್ತಿದೆ. ಇವರಿಗೇನೋ ಗೊತ್ತಿಲ್ಲ ಅನ್ಸುತ್ತೆ. ಇರ್ಲಿ ಬಿಡಿ ಪಾಪ ಎಂದು ಲೇವಡಿ ಮಾಡಿದರಲ್ಲದೇ, ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ನೋಟಿಸ್ ವಿಚಾರವಾಗಿ, ನಾನು ಎಕ್ಸ್ಪೆಕ್ಟ್ ಮಾಡಿರಲಿಲ್ಲ ನನಗೆ ಡಿ.ಕೆ ಸುರೇಶ್‌ಗೆ ನೋಟೀಸ್ ಕೊಡ್ತಾರೆ ಅಂತಾ. ನಾವು ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೆವು. ಚಾರ್ಜ್ ಶೀಟ್‌ನಲ್ಲಿ ನಮ್ಮ ಹೆಸರಿರಲಿಲ್ಲ. ನಮ್ಮ ಹೇಳಿಕೆ ತೆಗೆದುಕೊಂಡು ಬಿಟ್ಟಿದ್ರು ಎಂದು ತಿಳಿಸಿದರು.

ಮಾತನಾಡಿ ರಿಪ್ಲೈ ಕೊಡ್ತೇನೆ

ಈ ಹಂತದಲ್ಲಿ ನೋಟಿಸ್ ಕೊಟ್ಟಿದ್ದಾರೆ. ನಾನು ಹೋಗ್ತೇನೆ, ಹೋಗಿ ಏನ್ ರಿಪ್ಲೈ ಕೊಡಬೇಕೊ ಕೊಡ್ತಿನಿ. ನನ್ನನ್ನ ಹೆದರಿಸುತ್ತೀನಿ ಅನ್ಕೊಂಡ್ರೆ ಅದು ಸಾಧ್ಯವಿಲ್ಲ. ವಕೀಲರ ಬಳಿ‌ ಮಾತನಾಡಿ ರಿಪ್ಲೈ ಕೊಡ್ತೇನೆ. ನನಗೆ ನೋಟಿಸ್ ಕೊಡುವಂತದ್ದು ಏನಿತ್ತು. ಎಲ್ಲಾ ಬ್ಲಾಕ್ ವೈಟ್ ಅಲ್ಲಿ ಇದೆ. ನಮ್ಮ ಪಾರ್ಟಿಗೆ ಕೊಡದೆ ಇನ್ಯಾರಿಗ್ರೀ ಕೊಡಲಿ. ನಮ್ಮ‌ ಸಾಧನೆಗಳು ಜನರಿಗೆ ಮುಟ್ಟುತ್ತಿದೆ. ಗ್ಯಾರಂಟಿಯಿಂದ 1 ಲಕ್ಷ 11 ಕೋಟಿ ಬಿಡುಗಡೆ ಆದ್ರೆ ಸಮಾವೇಶ ಮಾಡುವುದಕ್ಕೆ ಯೋಜಿಸುತ್ತೇವೆ ಎಂದು ಡಿಸಿಎಂ ಡಿಕೆಶಿ ಹೇಳಿದರು.