ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 157 ಮಂದಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ. ಈಗಾಗಲೇ ಸೋಂಕಿತರ ಪೈಕಿ 41 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಮೈಸೂರು (ಜು.30): ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 157 ಮಂದಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ. ಈಗಾಗಲೇ ಸೋಂಕಿತರ ಪೈಕಿ 41 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 

ಈ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಈವರೆಗೂ 172637 ಮಂದಿಗೆ ಕೊರೋನಾ ಪಾಸಿಟಿವ್‌ ಬಂದಿದ್ದು, ಇದರಲ್ಲಿ 168912 ಮಂದಿ ಗುಣಮುಖರಾಗಿದ್ದು, 2301 ಮಂದಿ ಮೃತಪಟ್ಟಿದ್ದಾರೆ. 

ಬೆಂಗಳೂರು : ಮತ್ತೆ ದಿನದಿನವೂ ಏರುತ್ತಿವೆ ಕೊರೋನಾ ಕೇಸ್

ಉಳಿದ 1424 ಮಂದಿ ಸಕ್ರಿಯ ಸೋಂಕಿತರು ವಿವಿಧೆಡೆ ಚಿಕಿತ್ಸೆ ಪÜಡೆಯುತ್ತಿದ್ದಾರೆ. ಮೈಸೂರು ನಗರದಲ್ಲಿ 84, ಎಚ್‌.ಡಿ. ಕೋಟೆ ತಾಲೂಕಿನಲ್ಲಿ 5, ಹುಣಸೂರು 8, ಕೆ.ಆರ್‌. ನಗರ 7, ಮೈಸೂರು ತಾಲೂಕಿನಲ್ಲಿ 4, ನಂಜನಗೂಡು 10, ಪಿರಿಯಾಪಟ್ಟಣ 37 ಹಾಗೂ ಟಿ. ನರಸೀಪುರ 2 ಸೇರಿದಂತೆ ಒಟ್ಟು 157 ಮಂದಿಗೆ ಕೋವಿಡ್‌ ಸೋಂಕು ತಗುಲಿದೆ.