ಅಮೃತ ನಗರೋತ್ಥಾನ ಹಂತ-4ಕ್ಕೆ 145 ಕೋಟಿ ಮಂಜೂರು: ಸಚಿವ ಎಂಟಿಬಿ ನಾಗರಾಜ್
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ)-4 ಯೋಜನೆಯಡಿ ಜಿಲ್ಲೆಯ 6 ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 145 ಕೋಟಿ ರು, ಮಂಜೂರಾಗಿದೆಯೆಂದು ರಾಜ್ಯ ಪೌರಾಡಳಿತ ಸಚಿವರಾದ ಎಂಟಿಬಿ ನಾಗರಾಜ್ ಹೇಳಿದರು.
ಚಿಕ್ಕಬಳ್ಳಾಪುರ (ನ.02): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ)-4 ಯೋಜನೆಯಡಿ ಜಿಲ್ಲೆಯ 6 ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 145 ಕೋಟಿ ರು, ಮಂಜೂರಾಗಿದೆಯೆಂದು ರಾಜ್ಯ ಪೌರಾಡಳಿತ ಸಚಿವರಾದ ಎಂಟಿಬಿ ನಾಗರಾಜ್ ಹೇಳಿದರು. ಜಿಲ್ಲಾ ಕೇಂದ್ರದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ 145 ಕೋಟಿಗೂ ಕಾಮಗಾರಿಗಳ ಕ್ರಿಯಾ ಯೋಜನೆಗೆ ಟೆಂಡರ್ ಕರೆದು ಈಗಾಗಲೇ ಕಾರ್ಯಾದೇಶ ನೀಡಿ ಕಾಮಗಾರಿಗಳನ್ನು ಪ್ರಾರಂಭಿಸಲು ಕ್ರಮಕೈಗೊಳ್ಳಲಾಗಿದೆಂದರು.
ಅಮೃತ ನಿರ್ಮಲ ನಗರ ಯೋಜನೆಯಡಿ ಚಿಕ್ಕಬಳ್ಳಾಪುರ ನಗರಸಭೆಗೆ 1 ಕೋಟಿ ಅನುದಾನ ಮಂಜೂರಾಗಿದ್ದು, ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ಜಿಲ್ಲೆಗೆ ಎಸ್‌ಎಫ್‌ಸಿ ವಿಶೇಷ ಅನುದಾನದಡಿ 2019-20 ಮತ್ತು 2020-21ನೇ ಸಾಲಿನಲ್ಲಿ ಒಟ್ಟು 33 ಕೋಟಿ ಅನುದಾನ ಮಂಜೂರಾಗಿದ್ದು, ಚಿಕ್ಕಬಳ್ಳಾಪುರ ನಗರಸಭೆಯ ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು. ಜಿಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 167 ಎಕರೆ 22 ಗುಂಟೆ ಜಮೀನನ್ನು ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡಲು ಮೀಸಲಿಟ್ಟಿದ್ದು, ಇದರಲ್ಲಿ ಚಿಕ್ಕಬಳ್ಳಾಪುರ, ಗೌರಿಬಿದನೂರು ಮತ್ತು ಗುಡಿಬಂಡೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ 355 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದೆ.
ಇನ್‌ಸ್ಪೆಕ್ಟರ್ ಬಗೆಗಿನ ನನ್ನ ಮಾತು ತಿರುಚಲಾಗಿದೆ: ಸಚಿವ ಎಂಟಿಬಿ ನಾಗರಾಜ್
ಕೈಗಾರಿಕೀಕರಣದ ಪಿತಾಮಹ ಸರ್ ಎಂ.ವಿಶ್ವೇಶ್ವರಯ್ಯ ತವರು ಜಿಲ್ಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆಗೆ ಹೆಚ್ಚಿನ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿ, ಈ ಮೂಲಕ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 2022-23 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಸಮಗ್ರ ಕೈಗಾರಿಕಾ ಟೌನ್ ಷಿಪ್ ಅಭಿವೃದ್ಧಿಪಡಿಸಲು ನೂತನವಾಗಿ ರಚನೆಯಾಗಿರುವ ಮಂಚೇನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ 1267-07 ಎಕರೆ ಜಮೀನು ಗುರುತಿಸಲಾಗಿದೆ ಎಂದು ಸಚಿವರು ಹೇಳಿದರು.
ಸಿದ್ದರಾಮಯ್ಯ ಹುಲಿನಾ?: ಬಿಜೆಪಿ ನಾಯಕರು ಭಯ ಪಡಲಿಕ್ಕೆ ಸಿದ್ದರಾಮಯ್ಯ ಅವರೇನು ಹುಲಿನಾ, ಅವರು ಕೂಡ ನಮ್ಮಂತೆ ಮನುಷ್ಯರಲ್ಲವೇ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಾಂಗ್ ನೀಡಿದರು. ಜಿಲ್ಲಾ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ನಾ ಕಂಡರೆ ಭಯ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಂಟಿಬಿ ನಾಗರಾಜ್, ಯಾರು, ಯಾರನ್ನ ಕಂಡರೂ ಭಯ ಇಲ್ಲ. ನಾವು ಹುಲಿಗಳಲ್ಲ, ಸಿದ್ದರಾಮಯ್ಯ ಕೂಡ ಹುಲಿ ಅಲ್ಲ. ನಾವೆಲ್ಲಾ ಮನುಷ್ಯರೆಂದರು.
ಹೊರಗುತ್ತಿಗೆ ಕಾರ್ಮಿಕರಿಗೆ ಹೆಚ್ಚುವರಿ ವೇತನ: ಅದೇ ರೀತಿ 14, 15 ವರ್ಷಗಳಿಂದ ಟ್ರಕ್ ಲೋಡರ್ಸ್, ಟ್ರಕ್ ಚಾಲಕರು, ವಾಲ್ವಮೆನ್‌ಗಳು, ಕಂಪ್ಯೂಟರ್ ಅಪರೇಟರ್‌ಗಳು ಸೇರಿ ಸುಮಾರು 4.600 ಪೌರ ಕಾರ್ಮಿಕರು ಹೊರಗುತ್ತಿಗೆ ಮೇಲೆ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕಾಯಂಗೊಳಿಸುವವರೆಗೆ ಹೆಚ್ಚುವರಿಯಾಗಿ 5,000 ಸಾವಿರ ರು, ವೇತನ ನೀಡಲು ತಿರ್ಮಾನಿಸಲಾಗಿದೆ ಎಂದರು.
ರಾಜ್ಯದ ಸಮಗ್ರ ಅಭಿವೃದ್ಧಿಯೇ ‘ಪಂಚರತ್ನ’ ಗುರಿ: ಎಚ್.ಡಿ.ಕುಮಾರಸ್ವಾಮಿ
ನನ್ನನ್ನು ಸೇರಿಸಿ ತನಿಖೆ ಮಾಡಲಿ: ಕೆ.ಆರ್.ಪುರಂ ಠಾಣೆ ಸಿಪಿಐ ನಂದೀಶ್ ಆತ್ಮಹತ್ಯೆ ವಿಚಾರದಲ್ಲಿ ನೀಡಿರುವ ತಮ್ಮ ಹೇಳಿಕೆ ವಿವಾದ ಎದ್ದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಾನು ಮುಚ್ಚುಮರೆ ಇಲ್ಲದೇ ಮಾತನಾಡಿದ್ದೇನೆ. ನನ್ನನ್ನು ಸೇರಿಸಿ ಈ ಬಗ್ಗೆ ತನಿಖೆ ನಡೆಸಲಿ. ನಾನು ಎಲ್ಲೂ ಇಂತಹವರು ಹಣ ಕೊಟ್ಟಿದ್ದಾರೆ. ಇಂತಹವರು ಹಣ ಪಡೆದಿದ್ದಾರೆ ಎಂದು ಎಲ್ಲಯೂ ಹೇಳಿಲ್ಲ ಎಂದರು.