Asianet Suvarna News Asianet Suvarna News

ದಾವಣಗೆರೆಯಲ್ಲಿ ಡೆಂಘೀಗೆ 8ನೇ ತರಗತಿ ಬಾಲಕಿ ಬಲಿ

*  15 ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಬಾಲಕಿ
*  ದಾವಣಗೆರೆ ನಗರದ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ
*  ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಡೆಂಘೀ ಹಾಗೂ ವೈರಲ್‌ ಜ್ವರಗಳ ಪ್ರಕರಣಗಳು

13 Year Old Girl Dies due to Dengue Fever in Davanagere grg
Author
Bengaluru, First Published Sep 23, 2021, 7:11 AM IST

ದಾವಣಗೆರೆ(ಸೆ.23): ಕೊರೋನಾ(Coronavirus) ಅಬ್ಬರ ಕಡಿಮೆಯಾಗಿ ರಾಜ್ಯಾದ್ಯಂತ ಜ್ವರದ ಹಾವಳಿ ಹೆಚ್ಚುತ್ತಿದ್ದಂತೆ ಇದೀಗ ದಾವಣಗೆರೆಯಲ್ಲಿ ಡೆಂಘೀ(DengueFever) ಜ್ವರಕ್ಕೆ ಎಂಟನೇ ತರಗತಿ ವಿದ್ಯಾರ್ಥಿನಿಯೊಬ್ಬಳು(Student) ಬುಧವಾರ ಬಲಿಯಾಗಿದ್ದಾಳೆ. ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಸುಮಯ್ಯಾ ಕೌಸರ್‌(13) ಡೆಂಘೀಗೆ ಬಲಿಯಾದ ಬಾಲಕಿ.

15 ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಕೆರೆಬಿಳಚಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೋರಿಸಿ, ಅಲ್ಲಿಂದ ಚನ್ನಗಿರಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪ್ಲೇಟ್‌ಲೆಟ್‌ ಕಡಿಮೆಯಾಗುತ್ತಿದ್ದ ಹಿನ್ನೆಲೆಯಲ್ಲಿ ವೈದ್ಯರ ಸೂಚನೆ ಮೇರೆಗೆ ನಂತರ ದಾವಣಗೆರೆ(Davanagere) ನಗರದ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

ಡೇಂಜರ್‌ ಡೆಂಘಿ 2, ಮನೆಯಲ್ಲಿ ಮುಂಜಾಗ್ರತಾ ಕ್ರಮ ಹೇಗಿರಬೇಕು.? ವೈದ್ಯರ ಮಾತು

ಜಿಲ್ಲೆಯಲ್ಲಿ ಡೆಂಘೀ ಹಾಗೂ ವೈರಲ್‌ ಜ್ವರಗಳ ಪ್ರಕರಣ ಹೆಚ್ಚಾಗುತ್ತಿರುವುದು ಅದರಲ್ಲೂ ಮಕ್ಕಳೇ(Children) ಹೆಚ್ಚಿನ ಸಂಖ್ಯೆಯಲ್ಲಿ ಜ್ವರಕ್ಕೆ ತುತ್ತಾಗುತ್ತಿರುವುದು ಆತಂಕ ಮೂಡಿಸಿದೆ.
 

Follow Us:
Download App:
  • android
  • ios