Asianet Suvarna News Asianet Suvarna News

13 ದಸರೆಯಲ್ಲಿ ಭಾಗಿಯಾಗಿದ್ದ ಸಾಂಗಿನಿ ಅಶ್ವ ಸಾವು

ನಾಡಹಬ್ಬ ದಸರಾ ಮೆರವಣಿಗೆಯಲ್ಲಿ 13 ಬಾರಿ ಅಶ್ವರೋಹಿ ದಳದ ದಂಡನಾಯಕರ ಅಶ್ವವಾಗಿ ಹೆಜ್ಜೆ ಹಾಕುತ್ತಿದ್ದ ಸಾಂಗಿನಿ ಎಂಬ ಹೆಸರಿನ ಅಶ್ವವು ಗುರುವಾರ ಮೃತಪಟ್ಟಿದೆ.

13 Sangini Ashwa who was involved in Dussehra died snr
Author
First Published Oct 8, 2023, 8:19 AM IST

ಮೈಸೂರು : ನಾಡಹಬ್ಬ ದಸರಾ ಮೆರವಣಿಗೆಯಲ್ಲಿ 13 ಬಾರಿ ಅಶ್ವರೋಹಿ ದಳದ ದಂಡನಾಯಕರ ಅಶ್ವವಾಗಿ ಹೆಜ್ಜೆ ಹಾಕುತ್ತಿದ್ದ ಸಾಂಗಿನಿ ಎಂಬ ಹೆಸರಿನ ಅಶ್ವವು ಗುರುವಾರ ಮೃತಪಟ್ಟಿದೆ.

2009ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಸಾಂಗಿನಿ ಅಶ್ವವು 14 ವರ್ಷ ಸೇವೆ ಸಲ್ಲಿಸಿ ಸಾವನ್ನಪ್ಪಿದೆ. ಸಾಂಗಿನಿ ಅಶ್ವಕ್ಕೆ ಪೊಲೀಸ್ ಇಲಾಖೆಯ ಸಕಲ ಗೌರವದೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ.

ಅಶ್ವರೋಹಣ ಚಾಂಪಿಯನ್ ಶಿಪ್ ನಲ್ಲಿ ಮತ್ತು ಮೌಂಟೆಡ್ ಪೊಲೀಸ್ ಕರ್ತವ್ಯ ಕೂಟದಲ್ಲಿ ಕ್ವಾಡ್ ಡ್ರಿಲ್, ಡ್ರೇಸ್ಸಾಜ್ ಕ್ರೀಡೆಯಲ್ಲಿ 2 ಬೆಳ್ಳಿ ಹಾಗೂ 1 ಕಂಚಿನ ಪದಕ ಪಡೆದಿರುವ ಸಾಂಗಿನಿ ಅಶ್ವವು, ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಬನ್ನಿಮಂಟಪದ ಮೈದಾನದಲ್ಲಿ ಕವಾಯತು ದಂಡನಾಯಕನ ಅಶ್ವವಾಗಿ ಕರ್ತವ್ಯ ನಿರ್ವಹಿಸಿದೆ.

ದಸರಾ ಕಾರ್ಯಕ್ರಮ

ಮೈಸೂರು (ಅ.05): ವಿಶ್ವವಿಖ್ಯಾತ ಮೈಸೂರು ದಸರಾ 2023ಕ್ಕೆ ದಿನಗಣನೆ ಶುರುವಾಗಿದೆ. ಅರಮನೆಯಲ್ಲಿ ದಸರಾ ಪರಂಪರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅರಮನೆಯಲ್ಲಿ ನಡೆಯುವ ದಸರಾ ಪೂಜಾ ಕಾರ್ಯಕ್ರಮಗಳ ಪಟ್ಟಿ ಇದೀಗ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದ್ದು, ಇಂತಿವೆ. ಅ.9 ರಂದು ರತ್ನ ಖಚಿತ ಸಿಂಹಾಸನ ಜೋಡಣೆ ಆಗಲಿದೆ. ಬೆಳಗ್ಗೆ 7 ಗಂಟೆಗೆ ನವಗ್ರಹ ಹೋಮ ಸೇರಿ ಹಲವು ಪೂಜಾ ವಿಧಿ ವಿಧಾನಗಳು ನಡೆಯಲಿದೆ. ಬಳಿಕ ಬೆಳಗ್ಗೆ 10:05 ರಿಂದ 10:35ರ ಶುಭ ಲಗ್ನದಲ್ಲಿ ಸಿಂಹಾಸನ ಜೋಡಣೆ ಆಗಲಿದೆ. 

ಬಳಿಕ ಗೋಶಾಲೆಗೆ ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸು ಆಗಮಿಸಲಿವೆ. ಅ.15 ರಂದು 6 ಗಂಟೆಯಿಂದ 6:25ರ ವರೆಗೆ ಶುಭ ಮುಹೂರ್ತದಲ್ಲಿ ಸಿಂಹ ಜೋಡಣೆ ಮಾಡಲಾಗುತ್ತದೆ. ಬೆಳಗ್ಗೆ 07:05 ರಿಂದ 7:45ರ ಶುಭ ಲಗ್ನದಲ್ಲಿ ಕಂಕಣ ಧಾರಣೆ ನಡೆಯಲಿದೆ. ಈ ವೇಳೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಅವರ ಪತ್ನಿ ತ್ರಿಷಿಕಾ ಕುಮಾರಿಗೆ ಕಂಕಣ ಧಾರಣೆ ನಡೆಯಲಿದೆ. ಬಳಿಕ 9:45ಕ್ಕೆ ಅರಮನೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸು ಆಗಮಿಸಲಿವೆ. ಬೆಳಗ್ಗೆ 10:15ಕ್ಕೆ ಕಳಸ ಪೂಜೆ ಹಾಗೂ ಸಿಂಹಾಸನ ಪೂಜೆ ನೆರವೇರಲಿದೆ. 

ತಮಿಳ್ನಾಡಿನ 40 ಎಂಪಿ ಸೀಟಿಗಾಗಿ ರಾಜ್ಯವನ್ನೇ ಅಡವಿಟ್ಟ ಕಾಂಗ್ರೆಸ್‌: ಎಚ್.ಡಿ.ರೇವಣ್ಣ

ಇದಾದ ಬಳಿಕ ಬೆಳಗ್ಗೆ 11:30ರಿಂದ 11:50ಕ್ಕೆ ಖಾಸಗಿ ದರ್ಬಾರ್ ನಡೆಯಲಿದೆ. ಅಂದು ಮಧ್ಯಾಹ್ನ 1:45 ರಿಂದ 02:05ರ ಅವಧಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ರವಾನೆ ಮಾಡಲಾಗುತ್ತದೆ. ಅ.20 ರಂದು 10:05 ರಿಂದ 10:25ಕ್ಕೆ ಸರಸ್ವತಿ ಪೂಜೆ, ಅ.21 ರಂದು ಕಾಳರಾತ್ರಿ ಪೂಜೆ, ಅ.22 ರಂದು ದುರ್ಗಾಷ್ಠಮಿ ಪೂಜೆ, ಅ.23 ರಂದು ದುರ್ಗಾಷ್ಠಮಿ ಪೂಜೆ ನಡೆಯಲಿದೆ. ಅದೇ ದಿನ ಬೆಳಗ್ಗೆ 5:30ಕ್ಕೆ ಚಂಡಿಹೋಮದೊಂದಿಗೆ ಪೂಜೆ ಆರಂಭವಾಗಲಿದೆ. ಆ ಸಮಯದಲ್ಲಿ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸು ಆಗಮಿಸಲಿವೆ.

ಬಳಿಕ ಬೆಳಗ್ಗೆ 6:05 ರಿಂದ 06:15ಕ್ಕೆ ಖಾಸಾ ಆಯುಧಗಳು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನೆ ಆಗಲಿವೆ. ಬೆಳಗ್ಗೆ 07:15ಕ್ಕೆ ಖಾಸಾ ಆಯುಧಗಳು ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆಗೆ ವಾಪಸ್ ತರಲಾಗುತ್ತದೆ. ಬೆಳಗ್ಗೆ 9:30ಕ್ಕೆ ಚಂಡಿಹೋಮ ಪೂರ್ಣಾಹುತಿ ನಡೆಯಲಿದೆ. ಬೆಳಗ್ಗೆ 11:45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸು ಬರಲಿವೆ. ಬಳಿಕ ಮಧ್ಯಾಹ್ನ 12:20ಕ್ಕೆ ಆಯುಧಪೂಜೆ ಆರಂಭವಾಗಲಿದೆ. 

ಈ ವೇಳೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಆಯುಧಗಳಿಗೆ ಪೂಜೆ ನಡೆಯಲಿದೆ. ಬಳಿಕ ಸಂಜೆ ಖಾಸಗಿ ದರ್ಬಾರ್ ಇರಲಿದೆ. ನಂತರ ಸಿಂಹ ವಿಸರ್ಜನೆ, ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ ಆಗಲಿದೆ. ಅಂಬಾವಿಲಾಸದಲ್ಲಿ ದಪ್ತಾರ್ ಪೂಜೆ ಮಾಡಿ, ಮಹಾಸನ್ನಿಧಾನದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅಮಲದೇವಿ ದರ್ಶನ ಪಡೆಯಲಿದ್ದಾರೆ. 

ಕೋವಿಡ್ ಸಂದರ್ಭದಲ್ಲಿ ಸ್ವಂತ ಹಣದಿಂದ ಬಡವರಿಗೆ ರೇಷನ್ ಹಂಚಿದ್ದ ಪೊಲೀಸ್ ಸಿಬ್ಬಂದಿ ಹೃದಯಾಘಾತದಿಂದ ಸಾವು!

ಅ.24 ರಂದು ವಿಜಯದಶಮಿ ಆಚರಣೆ ನಡೆಯಲಿದೆ. ಬೆಳಗ್ಗೆ 9:45ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸು ಆಗಮಿಸಲಿವೆ. ಬೆಳಗ್ಗೆ 11 ರಿಂದ 11:40ರ ವೇಳೆಗೆ ವಿಜಯದಶಮಿ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆ ಅರಮನೆ ಆನೆ ಬಾಗಿಲಿನಿಂದ ಅರಮನೆ ಭುವನೇಶ್ವರಿ ದೇಗುಲದವರೆಗೂ ನಡೆಯಲಿದೆ. ಬಳಿಕ ಭುವನೇಶ್ವರಿ ದೇಗುಲದಲ್ಲಿ ಶಮಿ ಪೂಜೆಯನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸಲಿದ್ದಾರೆ. ಪೂಜೆ ಮಗಿಸಿ ಅರಮನೆಗೆ ವಾಪಸ್ಸು ತೆರಳಿ ಕಂಕಣ‌ ವಿಸರ್ಜನೆ, ನ.8 ಬುಧವಾರ ಸಿಂಹಾಸನ ಭದ್ರತಾ ಕೊಠಡಿಗೆ ರವಾನೆ ಮಾಡಲಾಗುತ್ತದೆ.

Follow Us:
Download App:
  • android
  • ios