ತಮಿಳ್ನಾಡಿನ 40 ಎಂಪಿ ಸೀಟಿಗಾಗಿ ರಾಜ್ಯವನ್ನೇ ಅಡವಿಟ್ಟ ಕಾಂಗ್ರೆಸ್: ಎಚ್.ಡಿ.ರೇವಣ್ಣ
ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಮಿಳುನಾಡಿನ 40 ಸ್ಥಾನಗಳನ್ನು ಪಡೆಯಲು ನಮ್ಮ ರಾಜ್ಯವನ್ನು ಅಡ ಇಟ್ಟಿರುವುದಾಗಿ ಕಾಂಗ್ರೆಸ್ ನಡೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದರು.
ಹಾಸನ (ಅ.05): ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಮಿಳುನಾಡಿನ 40 ಸ್ಥಾನಗಳನ್ನು ಪಡೆಯಲು ನಮ್ಮ ರಾಜ್ಯವನ್ನು ಅಡ ಇಟ್ಟಿರುವುದಾಗಿ ಕಾಂಗ್ರೆಸ್ ನಡೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದರು. ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿ, ತಮಿಳುನಾಡಿನಲ್ಲಿ40 ಸ್ಥಾನ ಗೆಲ್ಲಲು ನಮ್ಮ ರಾಜ್ಯವನ್ನು ಅಡ ಇಟ್ಟಿದಾರೆ ಎಂದು ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ಟ್ರಿಬ್ಯುನಲ್ ರಚನೆ ಮಾಡಿದಾಗ ಕಾಂಗ್ರೆಸ್ ಸ್ವಾಗತ ಮಾಡಿದವರು ಈಗ ಕಾವೇರಿ ವಿಚಾರದ ಬಗ್ಗೆ ಮಾತಾಡುತ್ತಾರೆ.
ಇವರು ಬೇಕಾದಾಗ ಕೋಮುವಾದಿಗಳ ಜೊತೆ ತಮ್ಮವರನ್ನು ಕಳಿಸುತ್ತಾರೆ. ಅಲ್ಲಿ ಹೋಗಿ ಮೇವು ತಿಂದು ಬನ್ನಿ ಅಂತಾರೆ. ಅವರಿಗೆ ಮಾನ ಮರ್ಯಾದೆ ಇದ್ದರೆ ಸುಮ್ಮನಿರಲಿ. ಈ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಓಟ್ ಕೊಡಲಿ ಬಿಡಲಿ ಅವರನ್ನು ಕೈಬಿಡಲು ಸಾಧ್ಯವೇ ಇಲ್ಲ. ಈ ಜಿಲ್ಲೆಯಲ್ಲಿ ದೇವೇಗೌಡರು ರಾಜಕಾರಣ ಮಾಡಲು ಅಲ್ಪಸಂಖ್ಯಾತರ ಕೊಡುಗೆ ಇದೆ. ಇವರು ಏನೇ ಬಾಯಿ ಬಡಿದುಕೊಂಡರೂ ನಾನು ಅಲ್ಪ ಸಂಖ್ಯಾತರ ಜೊತೆ ಇರ್ತೀನಿ ಎಂದು ಗುಡುಗಿದರು.
Haveri: ಸರ್ಕಾರಿ ಬಸ್ ಏರಿದ ಆಂಜನೇಯ: 30 ಕಿಲೋ ಮೀಟರ್ ಪ್ರಯಾಣಿಸಿದ ಕೋತಿ!
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅಲ್ಪಸಂಖ್ಯಾತರಿಗೆ ಅನುಕೂಲ ಮಾಡಿಲ್ಲವೇ. ಈ ಜಿಲ್ಲೆಯಲ್ಲಿ ಎರಡು ಲಕ್ಷ ಲಿಂಗಾಯತರು ಇದ್ದರೂ ಹಾಸನ ಜಿಲ್ಲೆಯಲ್ಲಿ ಒಂದೇ ಒಂದು ಕ್ಷೇತ್ರದ ಅಭ್ಯರ್ಥಿ ಮಾಡಲಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಮೈತ್ರಿ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ಇವರಿಗೇನು ಸಮಸ್ಯೆ. ಬಿಜೆಪಿಗೆ ನಮ್ಮ ಪಕ್ಷವನ್ನು ಅಡ ಇಡೋಕೆ ಹೋಗಿಲ್ಲ. ದೇವೇಗೌಡರ ಬಗ್ಗೆ ಮೋದಿಯವರಿಗೆ ಗೌರವ ಇದೆ. ಐಎನ್ ಡಿ ಅಂದರೆ ಇಂಡಿಯನ್ ಡೆಮಾಕ್ರಸಿ ಮುಗಿಸೊದು ಅಂತ ಇದೆ ವೇಳೆ ಕಾಂಗ್ರೆಸ್ ಬಗ್ಗೆ ವ್ಯಂಗ್ಯವಾಡಿದರು.
ಶಾಮನೂರು ಹೇಳಿಕೆ ಸರಿ: ಶಾಮನೂರು ಶಿವಶಂಕರಪ್ಪ ಬಿಜೆಪಿಗೆ ಹೋಗಿದ್ರೆ ಕೇಂದ್ರ ಸಚಿವರಾಗಿರುತ್ತಿದ್ದರು. ಅವರು ಹೇಳಿರೋದು ಸರಿಯಾಗಿದೆ. ಹಾಸನ ಜಿಲ್ಲೆಯಲ್ಲಿ ಇವರ ಯೋಗ್ಯತೆಗೆ ಒಬ್ಬೇ ಒಬ್ಬ ಲಿಂಗಾಯತ ಅಭ್ಯರ್ಥಿ ಹಾಕಲಿಲ್ಲ. ಈಗ ಇವರಿಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಬಂದಿದೆ. ೬೦ ವರ್ಷ ಅವರಿಂದ ಓಟ್ ಹಾಕಿಸಿಕೊಂಡಿದಿರಿ ಈಗ ಅವರ ಸೇವೆ ಮಾಡಿ. ಆಗ ಕೋಮುವಾದಿಗಳ ಬಳಿ ಬಸ್ ಓಡಿಸಿಕೊಂಡು ಹೋಗಿದ್ದವರು ಯಾರು? ಎಂದು ವಸತಿ ಸಚಿವ ಜಮೀರ್ ಅಹಮದ್ ವಿರುದ್ಧ ರೇವಣ್ಣ ಕಿಡಿಕಾರಿದರು. ಜಮೀರಣ್ಣ ನನ್ನ ಆತ್ಮೀಯ ಅವರಿಗೆ ಇನ್ನೂ ನಾಲ್ಕು ಖಾತೆ ಕೊಡಲಿ.
ಆಗ ಇವರಿಗೆ ಕೋಮುವಾದಿಗಳ ಜೊತೆ ಹೋಗಬಾರದು ಅಂತಾ ಗೊತ್ತಿರಲಿಲ್ಲವಾ! ಎಂದು ಅಲ್ಪಸಂಖ್ಯಾತರಿಗೆ ಕುಮಾರಸ್ವಾಮಿ ಕೊಡುಗೆ ಏನು ಎಂಬ ಜಮೀರ್ ಅಹಮದ್ ಪ್ರಶ್ನೆಗೆ ರೇವಣ್ಣ ತಿರುಗೇಟು ನೀಡಿದರು. ಆಗ ಕುಮಾರಣ್ಣ ನೀನು ನಾನು ಜೋಡೆತ್ತು ಎಂದಿದ್ದರು. ಈಗ ಎಲ್ಲಿದಾರೆ? ಸಿಎಂ ಇಬ್ರಾಹಿಂ ನಾನು ಯಾವುದೇ ಕಾರಣದಿಂದ ಕಾಂಗ್ರೆಸ್ ಗೆ ಹೋಗಲ್ಲ ಎಂದಿದಾರೆ. ಬೇಕಿದ್ದರೆ ರಾಜಕೀಯ ನಿವೃತ್ತಿ ಆಗ್ತಿನಿ ಕಾಂಗ್ರೆಸ್ ಗೆ ಹೋಗಲ್ಲ ಎಂದಿದ್ದು, ಅವರು ಅಕ್ಟೋಬರ್ ೧೬ ರವರೆಗೆ ಏನೂ ಮಾತಾಡಲ್ಲ. ಆನಂತರ ಮಾತಾಡೋಣ ಎಂದಿದಾರೆ ಅವರು ಯಾವುದೇ ಕಾರಣದಿಂದ ಕಾಂಗ್ರೆಸ್ ಗೆ ಹೋಗಲ್ಲ ಎಂದಿದಾರೆ ಎಂದರು.
ಗೌಡರಿಂದ ಮುಸ್ಲಿಮರಿಗೆ ಶೇ.4 ಮೀಸಲು: ರಾಜ್ಯದಲ್ಲಿ ಒಂದು ತಿಂಗಳಿಂದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಅಲ್ಪಸಂಖ್ಯಾತರ ಬಗ್ಗೆ ಕರುಣೆ ತೋರುತ್ತಿದೆ. ಈ ದೇಶದಲ್ಲಿ ಹಳ್ಳಿ ರೈತನ ಮಗ ದೇವೇಗೌಡರು ಸಿಎಂ ಆಗೊವರೆಗೆ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಟ್ಟಿರಲಿಲ್ಲ. ದೇವೇಗೌಡರು ಸಿಎಂ ಆದ ಬಳಿಕ ಅವರಿಗೆ ಮೀಸಲಾತಿ ಕೊಟ್ಟರು. ಇವರು ೬೦ ವರ್ಷ ಏನು ಮಾಡ್ತಾ ಇದ್ದರು ಸ್ವಾಮಿ. ಕಾಂಗ್ರೆಸ್ ಮಾಡದ ಕೆಲಸವನ್ನು ದೇವೇಗೌಡರು ಮಾಡಿದರು. ಮುಸ್ಲಿಮರಿಗೆ ಶೇ.೪ ಮೀಸಲಾತಿ ಕೊಟ್ಟಿದ್ದು ದೇವೇಗೌಡರು. ಇವರು ಅಲ್ಪ ಸಂಖ್ಯಾತರ ಓಟ್ ಇಟ್ಟುಕೊಳ್ಳಲು ಮಾತ್ರ ಪ್ರಯತ್ನ ಮಾಡ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ರೇವಣ್ಣ ಹರಿಹಾಯ್ದರು.
ಕರ್ನಾಟಕಕ್ಕೆ ಮುಂದೆ ಬಹಳ ದೊಡ್ಡ ಅಪಾಯ ಕಾದಿದೆ: ಸಿ.ಟಿ.ರವಿ
ಅಲ್ಪ ಸಂಖ್ಯಾತರಿಗೆ ಅವಕಾಶ ಕೊಟ್ಟಿದ್ದು ಜೆಡಿಎಸ್. ಹಿಂದುಳಿದ ವರ್ಗದವರಿಗೂ ರಾಜಕೀಯವಾಗಿ ಅವಕಾಶ ನೀಡಿದ್ದು ದೇವೇಗೌಡರು. ಮೀಸಲಾತಿಯೇ ಇಲ್ಲದೆ ಹಿಂದುಳಿದ ವರ್ಗದ ಜನರಿಗೆ ಅದಿಕಾರ ಕೊಟ್ಟವರು ದೇವೇಗೌಡರು. ಕಾಂಗ್ರೆಸ್ ನವರು ಏನಾದ್ರು ಇಂತಹ ಅವಕಾಶ ಕೊಟ್ಟಿದಾರಾ! ಹಾಸನದ ಜಿಪಂ ನಲ್ಲಿ ಜನರಲ್ ಸ್ಥಾನಕ್ಕೆ ಪರಿಶಿಷ್ಟ ಸಮುದಾಯದ ವ್ಯಕ್ತಿಯನ್ನ ಅದ್ಯಕ್ಷ ರನ್ನಾಗಿ ಮಾಡಿದ್ದು ದೇವೇಗೌಡರು. ದೇವೇಗೌಡರು ಬರೋವರೆಗೆ ಅವರ ಯೋಗ್ಯತೆಗೆ ನಗರಸಭೆಗೆ ಅಧ್ಯಕ್ಷರನ್ನು ಮಾಡೋಕೆ ಆಗಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಜೆಡಿಎಸ್ ನಾಯಕ ರೇವಣ್ಣ ಕಿಡಿಕಾರಿದರು.