Asianet Suvarna News Asianet Suvarna News

ಬೆಳಗಾವಿ: ವಿದ್ಯುತ್‌ ಅವಘಡಕ್ಕೆ ಅಜ್ಜಿ-ಮೊಮ್ಮಗ ಸಾವು

*  ​ಬೆಳಗಾವಿ ಜಿಲ್ಲೆ​ಯ ಹುಕ್ಕೇರಿ ತಾಲೂ​ಕಿ​ನ ​ಸಂಕೇ​ಶ್ವ​ರ ಪಟ್ಟಣದಲ್ಲಿ ನಡೆದ ಘಟನೆ
*  ಘಟನೆಯಲ್ಲಿ ಮೃತ ಅಜ್ಜಿಯ ಸೊಸೆಗೂ ಗಂಭೀರ ಗಾಯ
*  ಈ ಕುರಿತು ಸಂಕೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು 
 

Two Killed due to Electric shock at Sankeshwar in Belagavi grg
Author
Bengaluru, First Published Oct 4, 2021, 1:25 PM IST
  • Facebook
  • Twitter
  • Whatsapp

ಸಂಕೇಶ್ವರ(ಅ.04):  ಬಟ್ಟೆಒಣ ಹಾಕಲು ಹೋಗಿದ್ದ ವೃದ್ಧಗೆ ವಿದ್ಯುತ್‌ ತಂತಿ ತಗುಲಿದೆ. ಆ ವೇಳೆ ಮೊಮ್ಮಗ ಅಜ್ಜಿ​ ಸಹಾಯಕ್ಕೆ ಆಗಮಿಸಿದ್ದ ವೇಳೆ ಆತನಿಗೂ ವಿದ್ಯುತ್‌ ಶಾಕ್‌(Electric shock) ತಗುಲಿ ಇಬ್ಬರು ಅಜ್ಜಿ-ಮೊಮ್ಮಗ ಮೃತಪಟ್ಟು, ಸೊಸೆಗೆ ಗಂಭೀರ ಗಾಯವಾದ ಘಟನೆ ಬೆಳ​ಗಾವಿ(Belagavi) ಜಿಲ್ಲೆ​ಯ ಹುಕ್ಕೇರಿ ತಾಲೂ​ಕಿ​ನ ​ಸಂಕೇ​ಶ್ವ​ರ(Sankeshwar) ಪಟ್ಟಣದ ಮಡ್ಡಿ ಗಲ್ಲಿಯಲ್ಲಿ ಭಾನುವಾರ ನಡೆದಿದೆ.

ಪಟ್ಟಣದ ಮಡ್ಡಿಗಲ್ಲಿ ನಿವಾಸಿ ಶಾಂತವ್ವ ದುಂಡಪ್ಪ ಬಸ್ತವಾಡಿ(75) ಹಾಗೂ ಸಿದ್ದಾರ್ಥ ಬಾಪು ಬಸ್ತವಾಡಿ(25 ) ಮೃತರು. ಮೃತ ಶಾಂತವ್ವ ಬಸ್ತವಾಡಿ ಬೆಳಗ್ಗೆ ಬಟ್ಟೆಒಣ ಹಾಕಲು ಹಿತ್ತಲಿಗೆ ಹೋದ ಸಂದರ್ಭದಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಬಟ್ಟೆಒಣ ಹಾಕುತ್ತಿದ್ದ ತಂತಿಯಲ್ಲಿ ವಿದ್ಯುತ್‌ಹರಿದು ವೃದ್ಧೆಗೆ ವಿದ್ಯುತ್‌ತಗು​ಲಿ​ದೆ. ಅಲ್ಲೆ ಇದ್ದ ಮೊಮ್ಮಗ ಸಿದ್ಧಾರ್ಥ ಬಸ್ತವಾಡಿ ಅಜ್ಜಿಯ ಸಹಾಯಕ್ಕೆ ಧಾವಿಸಿದ್ದ ವೇಳೆ ಆತನಿಗೂ ವಿದ್ಯುತ್‌ತಗುಲಿ ಗಂಭೀರ ಗಾಯವಾಗಿತ್ತು.

ರಾಯಭಾಗ: ವಿದ್ಯುತ್ ಪ್ರವಹಿಸಿ ಸಹೋದರರಿಬ್ಬರ ದುರ್ಮರಣ

ಕೂಡಲೇ ಇಬ್ಬರನ್ನು ಪಟ್ಟಣದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಸ್ಥಳದಲ್ಲಿ ಮೊಮ್ಮಗ ಸಿದ್ಧಾರ್ಥ ನಿಧನ ಹೊಂದಿದ, ವೃದ್ಧೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಕೊನೆಯುಸಿರೆಳೆದಿದ್ದಾಳೆ. ಇನ್ನೋರ್ವ ಗಾಯಾಳು ಮೃತ ಅಜ್ಜಿಯ ಸೊಸೆಗೂ ಗಂಭೀರ ಗಾಯವಾಗಿದೆ. ಈ ಕುರಿತು ಸಂಕೇಶ್ವರ ಪೊಲೀಸ್‌(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios