ಟೆಹ್ರಾನ್‌ನಲ್ಲಿ ನಡೆದ ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದಿಂದ ಸುಮಾರು 100 ಮಂದಿ ಇರಾನ್‌ಗೆ ತೆರಳಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ (ಜು.8): ಟೆಹ್ರಾನ್‌ನಲ್ಲಿ ನಡೆದ ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ(Ayatollah Ali Khamenei) ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮ(Alipura village)ದಿಂದ ಸುಮಾರು 100 ಮಂದಿ ಇರಾನ್‌ಗೆ ತೆರಳಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇವರೆಲ್ಲಾ ಭಾನುವಾರ ಬೆಂಗಳೂರಿನಿಂದ ಮುಂಬೈಗೆ ತೆರಳಿ, ಅಲ್ಲಿಂದ ದುಬೈ ಮೂಲಕ ಟೆಹ್ರಾನ್‌ಗೆ ತೆರಳಿದ್ದು, ಖಮೇನಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ಇತಿಹಾಸದಲ್ಲೇ 5 ಅತ್ಯಂತ ದುಬಾರಿ ಅಂತ್ಯಕ್ರಿಯೆಗಳಿವು! ಅಲೆಕ್ಸಾಂಡರ್ ದಿ ಗ್ರೇಟ್ ಅಗ್ರಸ್ಥಾನ, ಅಲಿ ಖಮೇನಿ ಸ್ಥಾನ ಎಷ್ಟು?
ಖಮೇನಿಗೂ ಚಿಕ್ಕಬಳ್ಳಾಪುರಕ್ಕೂ ಇರುವ ನಂಟೇನು?
ಬಹುಸಂಖ್ಯಾತ ಶಿಯಾ ಮುಸ್ಲಿಮರನ್ನು ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಅಲಿಪುರ ಗ್ರಾಮವು ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರೊಂದಿಗೆ ಆಳವಾದ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಸಂಬಂಧವನ್ನು ಹೊಂದಿದೆ. ಇಲ್ಲಿನ ಜನ ಖಮೇನಿ ಅವರನ್ನು ತಮ್ಮ ಪ್ರಮುಖ ಧರ್ಮಗುರುವೆಂದು ಗೌರವಿಸುತ್ತಾರೆ. ಈ ಚಿಕ್ಕ ಗ್ರಾಮವನ್ನು ''ಮಿನಿ ಇರಾನ್'' ಎಂದೂ ಕರೆಯುತ್ತಾರೆ. 1981-82ರ ವೇಳೆ ಖಮೇನಿ ಅವರು ಅಲಿಪುರಕ್ಕೆ ಭೇಟಿ ನೀಡಿದ್ದರು. ಇರಾನ್ ಸರ್ಕಾರಿ ಸಂಸ್ಥೆಗಳ ಸಹಾಯದಿಂದ ನಿರ್ಮಿಸಲಾದ ಸಮುದಾಯ ಆಸ್ಪತ್ರೆಯನ್ನು ಉದ್ಘಾಟಿಸಿದ್ದರು.
ಫೆಬ್ರವರಿ 28ರಂದು ಅಮೆರಿಕ-ಇಸ್ರೇಲಿ ನಡೆಸಿದ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಇರಾನ್‌ನ ಮಾಜಿ ಸರ್ವೋಚ್ಛ ನಾಯಕ ಖಮೇನಿ ಹತರಾಗಿದ್ದು, ಶನಿವಾರದಿಂದ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಆರಂಭವಾಗಿವೆ.


