ಪಕ್ಷಕ್ಕಾಗಿ ರಿಸ್ಕ್ ತೆಗೆದುಕೊಂಡರೂ ಪ್ರತಿ ಬಾರಿ ನನಗೆ ಅನ್ಯಾಯ

First Published 23, May 2018, 8:51 PM IST
Sonia, Rahul and State Leaders Support DK Shivakumar
Highlights

ಪಕ್ಷ ನೀಡಿದ ಟಾಸ್ಕ್'ಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ದೊಡ್ಡ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದರೂ, ಪ್ರತಿ ಬಾರಿ ನನಗೆ ದ್ರೋಹವಾಗುತ್ತಿದೆ ಎಂದು ಭಾವುಕರಾಗಿ ಹೈಕಮಾಂಡ್ ನಾಯಕರ ಎದುರು ತಮ್ಮ ಅಳಲು ತೋಡಿಕೊಂಡಿದ್ದಾರೆ. 

ಬೆಂಗಳೂರು(ಮೇ.23): ಪಕ್ಷಕ್ಕಾಗಿ ರಿಸ್ಕ್ ತೆಗೆದುಕೊಂಡರೂ ಪ್ರತಿಬಾರಿ ನನಗೆ ಅನ್ಯಾಯವಾಗುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ.ಶಿವಕುಮಾರ್  ಸೋನಿಯಾ, ರಾಹುಲ್ ಎದುರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಕ್ಷ ನೀಡಿದ ಟಾಸ್ಕ್'ಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ದೊಡ್ಡ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದರೂ, ಪ್ರತಿ ಬಾರಿ ನನಗೆ ದ್ರೋಹವಾಗುತ್ತಿದೆ ಎಂದು ಭಾವುಕರಾಗಿ ಹೈಕಮಾಂಡ್ ನಾಯಕರ ಎದುರು ತಮ್ಮ ಅಳಲು ತೋಡಿಕೊಂಡಿದ್ದಾರೆ. 
ಡಿಸಿಎಂ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಡಿಕೆಶಿಯನ್ನು ಸಮಾಧಾನ ಪಡಿಸಿದ ಹಿರಿಯ ನಾಯಕರು ನೀವು ಪಕ್ಷದ ನಿಷ್ಟಾವಂತ ಕಾರ್ಯಕರ್ತರು, ನಿಮ್ಮನ್ನು ಪಕ್ಷ ಯಾವತ್ತೂ ಕಡೆಗಣಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಸೋನಿಯಾ, ರಾಹುಲ್ ಎದುರು ಡಿಕೆಶಿ ಬೆಂಬಲಕ್ಕೆ ಖರ್ಗೆ, ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

loader