ಕರ್ನಾಟಕ ಚುನಾವಣೆ : ಜೂಲಿಯಸ್ ಸೀಸರ್ ಗೆ ಹೋಲಿಕೆ

Omar Abdullah compares Karnataka's choice to Julius Caesar
Highlights

ಕರ್ನಾಟಕ ಚುನಾವಣಾ ಫಲಿತಾಂಶದಲ್ಲಿ ಇನ್ನೇನು ಬಿಜೆಪಿ ಬಹುಮತದತ್ತ ಸಾಗುತ್ತಿದೆ ಎಂಬ ಮುನ್ಸೂಚನೆಗಳು ಮಾಧ್ಯಮಗಳಲ್ಲಿ ಪ್ರಕಟವಾದುದನ್ನು ಗಮನಿಸಿದ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲ ಬಳಸಿದ ನುಡಿಗಟ್ಟೊಂದು ಭಾರಿ ಗಮನ ಸೆಳೆಯಿತು. 

ಶ್ರೀನಗರ: ಕರ್ನಾಟಕ ಚುನಾವಣಾ ಫಲಿತಾಂಶದಲ್ಲಿ ಇನ್ನೇನು ಬಿಜೆಪಿ ಬಹುಮತದತ್ತ ಸಾಗುತ್ತಿದೆ ಎಂಬ ಮುನ್ಸೂಚನೆಗಳು ಮಾಧ್ಯಮಗಳಲ್ಲಿ ಪ್ರಕಟವಾದುದನ್ನು ಗಮನಿಸಿದ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲ ಬಳಸಿದ ನುಡಿಗಟ್ಟೊಂದು ಭಾರಿ ಗಮನ ಸೆಳೆಯಿತು. 

ವಿಲಿಯಂ ಶೇಕ್ಸ್‌ಪಿಯರ್‌ರ ‘ಜೂಲಿಯಸ್ ಸೀಸರ್’ನ ಪ್ರಸಿದ್ಧ ಲ್ಯಾಟಿನ್ ನುಡಿಗಟ್ಟು ‘ಇತ್ ತು ಕರ್ನಾಟಕ ’ ಎಂಬ ನುಡಿಗಟ್ಟು ಅವರು ಬಳಸಿದ್ದರು. ‘ಎಟ್ ತು’ ಅಂದರೆ, ‘ನೀವು ಕೂಡ’ ಕೈಕೊಟ್ಟಿರಲ್ಲ ಎಂಬ ಅರ್ಥ ನೀಡುತ್ತದೆ. ಕರ್ನಾಟಕದ
ಜನತೆ ಕೂಡ ಕಾಂಗ್ರೆಸ್‌ಗೆ ಕೈಕೊಟ್ಟರಲ್ಲ? ಎಂಬರ್ಥದಲ್ಲಿ ಆತಂಕದಿಂದ ಅವರು ಈ ನುಡಿಗಟ್ಟು ಬಳಸಿದ್ದರು.

ರೋಮನ್ ಸರ್ವಾಧಿಕಾರಿ ಜೂಲಿಯಸ್ ಸೀಸರ್ ತನ್ನ ಸ್ನೇಹಿತ ಮಾರ್ಕಸ್ ಜೂನಿಯಸ್ ಬ್ರೂಟಸ್‌ನಿಂದ ಹತ್ಯೆಗೀಡಾದ ಸಂದರ್ಭ ಈ ಮಾತು ಬಳಸುತ್ತಾನೆ.

loader