Asianet Suvarna News Asianet Suvarna News

ಪ್ರಾದೇಶಿಕತೆಗೆ ಮೋದಿ ಒತ್ತು, ಗ್ಲೋಬಲ್ ಸಮಸ್ಯೆಯೇ ರಾಹುಲ್‌ಗೆ ಕುತ್ತು

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಲೋಕಲ್ ಸಮಸ್ಯೆಯೇ ಪ್ರಮುಖ ಪಾತ್ರವಹಿಸೋದು. ನೀರಿಲ್ಲ, ರಸ್ತೆ ಬೇಕು, ಬೀದಿ ದೀಪಗಳಿರಲಿ, ಬೆಳೆಗೆ ಬೆಲೆ ಬರಲೆಂದು ಮಂದಿ ಬೀದಿಗಿಳಿಯುತ್ತಾರೆ. ಸಮಸ್ಯೆಗೆ ಸರಕಾರ ಪರಿಹಾರ ಸೂಚಿಸಲಿ ಎಂದು ನಿರೀಕ್ಷಿಸುತ್ತಾರೆ. ಮೋದಿ ಲೋಕಲ್ ಸಮಸ್ಯೆಗಳ ಬಗ್ಗೆ ಮಾತನಾಡಿದರೆ, ರಾಹುಲ್ ಗಾಂಧಿ ಗ್ಲೋಬಲ್ ಸಮಸ್ಯೆಗಳದ್ದೇ ತಲೆ ನೋವೆಂದರು.

Modi speaks on regional issues Rahul stresses on global issue in Karnataka election rallies

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಲೋಕಲ್ ಸಮಸ್ಯೆಯೇ ಪ್ರಮುಖ ಪಾತ್ರವಹಿಸೋದು. ನೀರಿಲ್ಲ, ರಸ್ತೆ ಬೇಕು, ಬೀದಿ ದೀಪಗಳಿರಲಿ, ಬೆಳೆಗೆ ಬೆಲೆ ಬರಲೆಂದು ಬೀದಿಗಿಳಿಯುತ್ತಾರೆ. ಸಮಸ್ಯೆಗೆ ಸರಕಾರ ಪರಿಹಾರ ಸೂಚಿಸಲಿ ಎಂದೇ ಜನ ಬಯಸುತ್ತಾರೆ. 

ಗೌಡಾಸ್ತ್ರ ಪ್ರಯೋಗಿಸಿದ್ದ ಮೋದಿ ಇಂದು ದಲಿತಾಸ್ತ್ರ

ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದ ವಿವಿಧೆಡೆ ಚುನಾವಣಾ ಪ್ರಚಾರ ನಡೆಸಿದರು. ಮೋದಿ ಲೋಕಲ್ ಸಮಸ್ಯೆಗೆ ಹೆಚ್ಚು ಒತ್ತು ನೀಡಿದರು. ಜನರ ಭಾವನೆಗಳನ್ನು ಕೆದಕಿದರು. ಆದರೆ, ರಾಹುಲ್ ಮಾತ್ರ ಡೋಕ್ಲಾಮ್‌ನಂಥ ರಾಷ್ಟ್ರೀಯ ಸಮಸ್ಯೆ ಬಗ್ಗೆ ಹೇಳಿ, ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ತುಟಿ ಪಿಟಿಕ್ ಅನ್ನಲಿಲ್ಲ.

ತೊಗರಿ, ಹಂಪಿ ಪ್ರಸ್ತಾಪಿಸಿದ ಮೋದಿ:

ಕಲಬುರಗಿಯಲ್ಲಿ 'ತೊಗರಿ ಕಣಜವಾದ ಜಿಲ್ಲೆಯ ರೈತರಿಗೆ ರಾಜ್ಯ ನೀಡಿದ್ದೇನು?' ಎಂದು ಪ್ರಶ್ನಿಸುವ ಮೂಲಕ ತೊಗರಿ ಬೆಳೆಗಾರರ ಹೃದಯ ಕದಿಯಲು ಮೋದಿ ಯತ್ನಿಸಿದರು. ಬಿಸಿಲಿನ ತಾಪದಲ್ಲಿಯೂ ಭಾಷಣ ಕೇಳಲು ಬಂದ ಮತದಾರರಿಗೆ, 'ಈ ಬಿಸಿಲು ಸಹಿಸುವ ಜನರಿಗೆ ಸಿಎಂ ಸಿದ್ದರಾಮಯ್ಯ ಆಡಳಿತ ಸಹಿಸಲಾಗುತ್ತಿಲ್ಲ,' ಎಂದೂ ಹೇಳಿದರು. ಅಷ್ಟೇ ಅಲ್ಲ ಗಣಿ ಜಿಲ್ಲೆ ಬಳ್ಳಾರಿಯಲ್ಲಿ, 'ಹಂಪಿ ಚಿತ್ರವನ್ನು ಹೊಸ 50 ರೂ. ನೋಟಿನಲ್ಲಿ ಮುದ್ರಿಸುವ ಮೂಲಕ ಜಿಲ್ಲೆಯ ಪಾರಂಪರಿಕ ತಾಣವನ್ನು ಗೌರವಿಸಿದ್ದೇನೆ,' ಎಂದು ಜನರ ಭಾವನೆಯನ್ನು ಕೆದಕಿದರು.

ಚುನಾವಣಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿಗೆ ಬಂದು ಕಸದ ಸಮಸ್ಯೆಯನ್ನೇ ಹೈಲೈಟ್ ಮಾಡಿದರು ಮೋದಿ. 'Steel' ಬ್ರಿಡ್ಜ್ ಅಲ್ಲ, 'Steal'ಬ್ರಿಡ್ಜ್ ಮಾಡಲು ಮುಂದಾಗಿದ್ದ ಸಿದ್ದರಾಮಯ್ಯ ಸರಕಾರ, ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ ಎಂದರು. ಆ ಮೂಲಕ, ಬೆಂಗಳೂರಿಗರು ಅನುಭವಿಸುತ್ತಿರುವ ಸಮಸ್ಯೆಯನ್ನು ಸಮರ್ಥವಾಗಿ ಫೋಕಸ್ ಮಾಡಿದರು.

ರಾಹುಲ್ ಹೇಳಿದ್ದೇನು?

'ಪ್ರಧಾನಿ ಮೋದಿಗೆ ಹೇಳಲು ಏನೂ ಇಲ್ಲ. ಬಸವಣ್ಣನ ಪ್ರತಿಮೆಗೆ ಕೈ ಮುಗಿಯುತ್ತಾರೆ. ಆದರೆ, ನುಡಿದಂತೆ ನಡೆಯುವುದಿಲ್ಲ. ಉತ್ತರ ಭಾರತದಲ್ಲಿ ದಲಿತರ ಮೇಲೆ ದಾಳಿಯಾದಾಗ ಮೋದಿ ಎಲ್ಲಿದ್ದರು? ಹೆಣ್ಣು ಮಕ್ಕಳ ಶಿಕ್ಷಣವನ್ನು ನಿರ್ಲಕ್ಷಿಸಿರುವ ಬಿಜೆಪಿ, ಹಿಂದೂಸ್ಥಾನದ ಮಹಿಳೆಯರನ್ನೂ ರಕ್ಷಿಸುತ್ತಿಲ್ಲ. ಚೀನಾದಲ್ಲಿ ಹೋಗಿ ಮನ್​ ಕೀ ಬಾತ್​ ಹೇಳ್ತಾರೆ ಮೋದಿ. ವಿವಾದಿತ ಡೋಕ್ಲಾಂ ಸಮಸ್ಯೆ ಬಗ್ಗೆ ಬಾಯಿ ಬಿಡುವುದೇ ಇಲ್ಲ,' ಎಂದರು.

"

ಎಲ್ಲಿಯೂ ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಮಾತನಾಡಲೇ ಇಲ್ಲ. ಲೋಕಲ್ ಸಮಸ್ಯೆಗಳ ಬಗ್ಗೆ ಮಾತನಾಡಿ, ಅದಕ್ಕೆ ಸಿದ್ದರಾಮಯ್ಯ ನೇತೃತ್ವದ  ಸರಕಾರ ಕಂಡು ಕೊಂಡ ಪರಿಹಾರದ ಬಗ್ಗೆ ಹೇಳಿದ್ದರೆ, ಕನ್ನಡಗಿರ ಮನ ಗೆಲ್ಲುವಲ್ಲಿ ರಾಹುಲ್ ಯಶಸ್ವಿಯಾಗುತ್ತಿದ್ದರು. ನೈಜ ಸಮಸ್ಯೆಗಳಿಗೆ ಮೋದಿ ಒತ್ತು ನೀಡಿದರೆ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಮಸ್ಯೆಗಳನ್ನೇ ಉದಾಹರಿಸಿದ ರಾಹುಲ್, ಜನರ ಭಾವನೆಗಳಿಗೆ ಸ್ಪಂದಿಸುವಲ್ಲಿ ವಿಫಲರಾದರೆಂಬುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
 

ದೇವೇಗೌಡರಿಗೆ ಟಾಂಗ್ ನೀಡಿದ ಮೋದಿ

 

 

Follow Us:
Download App:
  • android
  • ios