ರಾಜಭವನದ ಎದುರೇ ಸತ್ಯಾಗ್ರಹಕ್ಕೆ ಕೂರಲಿರುವುದಾಗಿ ಜೆಡಿಎಸ್- ಕಾಂಗ್ರೆಸ್ ಶಾಸಕರ ಜಂಟಿ ನಿರ್ಧಾರ ಕೈಗೊಂಡಿದ್ದಾರೆ. ಇಂದು ಸಂಜೆಯೊಳಗೆ ಸರ್ಕಾರ ರಚನೆಗೆ ಅನುಮತಿ ನೀಡುವಂತೆ ಒತ್ತಾಯಿಸುವ ಸಾಧ್ಯತೆಯಿದೆ. ಸತ್ಯಾಗ್ರಾಹಕ್ಕೆ ಕಾಂಗ್ರೆಸ್ ರಾಷ್ಟ್ರೀಯ ವರಿಷ್ಠರು ಜೊತೆಯಾಗಲಿದ್ದಾರೆ.

ಬೆಂಗಳೂರು(ಮೇ.16): ಕಾಂಗ್ರೆಸ್ - ಜೆಡಿಎಸ್ ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡದಿದ್ದರೆ ಅಮರಣಾಂತರ ಉಪವಾಸ ಸತ್ಯಾಗ್ರಹಕ್ಕೆ ನಿರ್ಧಾರ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ರಾಜ್ಯಪಾಲರ ಮೇಲೆ ಒತ್ತಡ ತಂತ್ರಕ್ಕೆ ಈ ನಿರ್ಧಾರಕ್ಕೆ ಕಾಂಗ್ರೆಸ್- ಜೆಡಿಎಸ್ ಶಾಸಕರು ಮುಂದಾಗಿದ್ದಾರೆ. 
ರಾಜಭವನದ ಎದುರೇ ಸತ್ಯಾಗ್ರಹಕ್ಕೆ ಕೂರಲಿರುವುದಾಗಿ ಜೆಡಿಎಸ್- ಕಾಂಗ್ರೆಸ್ ಶಾಸಕರ ಜಂಟಿ ನಿರ್ಧಾರ ಕೈಗೊಂಡಿದ್ದಾರೆ. ಇಂದು ಸಂಜೆಯೊಳಗೆ ಸರ್ಕಾರ ರಚನೆಗೆ ಅನುಮತಿ ನೀಡುವಂತೆ ಒತ್ತಾಯಿಸುವ ಸಾಧ್ಯತೆಯಿದೆ. ಸತ್ಯಾಗ್ರಾಹಕ್ಕೆ ಕಾಂಗ್ರೆಸ್ ರಾಷ್ಟ್ರೀಯ ವರಿಷ್ಠರು ಜೊತೆಯಾಗಲಿದ್ದಾರೆ.
ಜೆಡಿಎಸ್ ಶಾಸಕಾಂಗ ಸಭೆಗೆ ಬಹುತೇಕ ಶಾಸಕರು ಹಾಜರಾಗಿದ್ದು, ಜೆಡಿಎಸ್ ಕಾರ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಶಾಸಕಾಂಗ ಈಗಾಗಲೇ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ರಾಜ್ಯಪಾಲರನ್ನು ಭೇಟಿ ಮಾಡಿರುವ ಅವರು ಸರ್ಕಾರ ರಚನೆಗೆ ಒಂದು ವಾರ ಕಾಲಾವಕಾಶ ಅವಕಾಶ ಕೋರಿದ್ದಾರೆ.

ಶಾಸಕರ ಖರೀದಿ ಯತ್ನ : ರಮ್ಯಾ ಟ್ವೀಟ್ ವಾಗ್ದಾಳಿ

ಬಿಜೆಪಿಯಿಂದ 15 ಮಂದಿ ಜೆಡಿಎಸ್'ಗೆ ಬರಲು ತಯಾರಾಗಿದ್ದಾರೆ