Asianet Suvarna News Asianet Suvarna News

ಹಾಸನ : 7/6 ಜೆಡಿಎಸ್ ಪಾಲು, ಒಂದು ಕ್ಷೇತ್ರದಲ್ಲಿ ಅರಳಿತು ಕಮಲ

 ಹಾಸನ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆಯನ್ನು ತೆರೆದಿದೆ.  ಹಾಸನದಲ್ಲಿ ಒಟ್ಟು 7 ಕ್ಷೇತ್ರಗಳಿವೆ. 7 ಕ್ಷೇತ್ರಗಳಲ್ಲಿ 6 ಕ್ಷೇತ್ರಗಳನ್ನು ಜೆಡಿಎಸ್ ತನ್ನ ವಶಕ್ಕೆ ಪಡೆದುಕೊಂಡಿದೆ. 

Hassan Election Results 2018 : JDS Won 6 constituency

ಹಾಸನ : ಹಾಸನ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆಯನ್ನು ತೆರೆದಿದೆ.  ಹಾಸನದ ಒಟ್ಟು 7 ಕ್ಷೇತ್ರಗಳಿವೆ. 7 ಕ್ಷೇತ್ರಗಳಲ್ಲಿ 6 ಕ್ಷೇತ್ರಗಳನ್ನು ಜೆಡಿಎಸ್ ತನ್ನ ವಶಕ್ಕೆ ಪಡೆದುಕೊಂಡಿದೆ. 

ಹಾಸನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಜಯಗಳಿಸಿದ್ದಾರೆ. ಒಟ್ಟು 63348 ಮತಗಳನ್ನು ಪಡೆಯುವ ಮೂಲಕ ಮೊದಲ ಬಾರಿ ಇಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. 

ಶ್ರವಣಬೆಳಗೊಳದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎಸ್ ಬಾಲಕೃಷ್ಣ 105516 ಮತಗಳನ್ನು ಪಡೆಯುವ ಮೂಲಕ ಜಯಭೇರಿ ಬಾರಿಸಿದ್ದಾರೆ.  

ಅರಸೀಕೆರೆಯಲ್ಲಿ  ಜೆಡಿಎಸ್ ಅಭ್ಯರ್ಥಿ ಕೆ.ಎಂ ಶಿವಲಿಂಗೇಗೌಡ 93,986 ಮತಗಳಿಂದ  ಕಾಂಗ್ರೆಸ್ ಅಭ್ಯರ್ಥಿ ಜಿ.ಬಿ ಶಶಿಧರ್ ಅವರನ್ನು ಸೋಲಿಸಿದ್ದಾರೆ. 

ಬೇಲೂರು ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಪಡೆದಿದ್ದು, ಅಭ್ಯರ್ಥಿ ಲಿಂಗೇಶ್ 64268 ಮತ ಪಡೆಯುವ ಮೂಲಕ  ಬಿಜೆಪಿ ಅಭ್ಯರ್ಥಿ ಎಚ್.ಕೆ ಸುರೇಶ್ ಅವರನ್ನು ಸೋಲಿಸಿದ್ದಾರೆ. 

ಹೊಳೆನರಸೀಪುರದ ಕ್ಷೇತ್ರದಲ್ಲಿ ಎಚ್.ಡಿ ರೇವಣ್ಣ ಜಯಶಾಲಿಯಾಗಿದ್ದು, 10,8541 ಮತಗಳನ್ನು ಪಡೆಯುವ ಮೂಲಕ ಸಿದ್ದರಾಮಯ್ಯ ಆಪ್ತ ಬಾಗೂರು ಮಂಜೇಗೌಡ ಅವರನ್ನು ಸೋಲಿಸಿದ್ದಾರೆ. 

ಅರಕಲಗೂಡು ಕ್ಷೇತ್ರದಲ್ಲಿ  ಬಿಜೆಪಿ ಅಭ್ಯರ್ಥಿ ಯೋಗಾ ರಮೇಶ್ ವಿಜಯಿಯಾಗಿದ್ದಾರೆ. 85064 ಮತ ಪಡೆದು ಕಾಂಗ್ರೆಸ್ ಸಚಿವರಾಗಿದ್ದ ಎ. ಮಂಜು ಅವರನ್ನು ಸೋಲಿಸಿದ್ದಾರೆ. 

ಇತ್ತ ಸಕಲೇಶಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಕೆ ಕುಮಾರಸ್ವಾಮಿ  62,262 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ನಾರ್ವೆ ಸೋಮಶೇಖರ್ ಅವನ್ನು ಸೋಲಿಸಿದ್ದಾರೆ. 

https://kannada.asianetnews.com/karnataka-assembly-election-2018/jds-congress-deal-to-form-next-government-in-karnataka-p8rpmk

https://kannada.asianetnews.com/karnataka-assembly-election-2018/haveri-election-results-2018-bjp-won-4-seats-p8rpfq

Follow Us:
Download App:
  • android
  • ios