Asianet Suvarna News Asianet Suvarna News

ಭಾರೀ ನಿರೀಕ್ಷೆಯಲ್ಲಿರುವ ಜಾರ್ಜ್ ಗೆ ಒಲಿದಿದೆ ವರ

 ಕನ್ನಡದ ಪ್ರಖ್ಯಾತ ದಾರ್ಶನಿಕ ಸರ್ವಜ್ಞ ಕವಿ ಯ ಹೆಸರಿನಲ್ಲಿರುವ ಸರ್ವಜ್ಞ ನಗರದಲ್ಲಿ ಅನ್ಯ ಭಾಷಿಗರದ್ದೇ ಪ್ರಾಬಲ್ಯ, ಇಲ್ಲಿ ಕನ್ನಡಿಗರು ವಿರಳ. ತಮಿಳರು, ಅಲ್ಪಸಂಖ್ಯಾತ ಮತದಾರರೆ ಹೆಚ್ಚಿರುವ ಇಲ್ಲಿ ಕಳೆದೆರಡು ಬಾರಿಯು ಕಾಂಗ್ರೆಸ್ ಅಭ್ಯರ್ಥಿ ಕೆ.ಜೆ.ಜಾರ್ಜ್ ಗೆಲುವು ಸಾಧಿಸಿದ್ದು, ಇದೀಗ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. 

George Contest From Sarvagnanagar

ಸಂಪತ್ ತರೀಕೆರೆ

ಬೆಂಗಳೂರು :  ಕನ್ನಡದ ಪ್ರಖ್ಯಾತ ದಾರ್ಶನಿಕ ಸರ್ವಜ್ಞ ಕವಿ ಯ ಹೆಸರಿನಲ್ಲಿರುವ ಸರ್ವಜ್ಞ ನಗರದಲ್ಲಿ ಅನ್ಯ ಭಾಷಿಗರದ್ದೇ ಪ್ರಾಬಲ್ಯ, ಇಲ್ಲಿ ಕನ್ನಡಿಗರು ವಿರಳ. ಬ್ರಿಟಿಷರ ಕಾಲದ ಬೆಂಗಳೂರಿಗೆ ಹೊಂದಿರುವ ಕ್ಷೇತ್ರ ಈಶಾನ್ಯ ಭಾರತೀಯರು, ಹೊರ ರಾಜ್ಯಗಳ ವಿದ್ಯಾರ್ಥಿಗಳಿಂದ ತುಂಬಿದೆ.

 ಶ್ರೀಮಂತರು, ಮಧ್ಯಮ ವರ್ಗದವರ ಜನವಸತಿ ಪ್ರದೇಶಗಳು, ಮಾಲ್‌ಗಳು, ಬಂಗಾರದ ಅಂಗಡಿಗಳಿಂದ ಎಂ.ಜಿ.ರಸ್ತೆಯನ್ನೂ ಕೂಡ ನಾಚಿಸುತ್ತದೆ. ತಮಿಳರು, ಅಲ್ಪಸಂಖ್ಯಾತ ಮತದಾರರೆ ಹೆಚ್ಚಿರುವ ಇಲ್ಲಿ ಕಳೆದೆರಡು ಬಾರಿಯು ಕಾಂಗ್ರೆಸ್ ಅಭ್ಯರ್ಥಿ ಕೆ.ಜೆ.ಜಾರ್ಜ್ ಗೆಲುವು ಸಾಧಿಸಿದ್ದು, ಇದೀಗ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. 

ಭಾರತಿನಗರ ವಿಧಾನಸಭೆ ಕ್ಷೇತ್ರ - ಯಲಹಂಕ ವಿಧಾನಸಭೆ ಕ್ಷೇತ್ರದ ವಿಂಗಡಣೆಯಿಂದ ಸರ್ವಜ್ಞನಗರ ಕ್ಷೇತ್ರ ಸೃಷ್ಟಿ ಯಾಗಿದೆ. ಈ ಕ್ಷೇತ್ರಕ್ಕೆ  ಐದಾರು ಚುನಾವಣೆ ಕಂಡಿ ರುವ ಹಿರಿಯ ರಾಜಕಾರಣಿ ಕಾಂಗ್ರೆಸ್‌ನ ಕೆ.ಜೆ.ಜಾರ್ಜ್ ಮೊದಲ ಶಾಸಕ. ಈ ಬಾರಿಯ ಚುನಾವಣೆಯಲ್ಲಿ ಕೆ.ಜೆ.ಜಾರ್ಜ್ ಅವರಿಗೆ ಬಿಜೆಪಿ ಅಭ್ಯರ್ಥಿ ರಾಮಚೈತನ್ಯ ವರ್ಧಿನಿ  ಟ್ರಸ್ಟ್ ಅಧ್ಯಕ್ಷ ಮುನಿನಾಗರೆಡ್ಡಿ ಅಲಿಯಾನ್ ಎಂ.ಎನ್.ರೆಡ್ಡಿ ಪ್ರತಿಸ್ಪರ್ಧಿ. 

ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿರೆಡ್ಡಿ ಮತ್ತು ಜೆಡಿಎಸ್‌ನ  ಅನ್ವರ್ ಷರೀಫ್, ಕರ್ನಾಟಕ ಪ್ರಜ್ಞಾವಂತ ಜನತಾಪಕ್ಷದಿಂದ ಇರ್ಷಾದ್ ಅಹಮದ್‌ಖಾನ್,  ಎಂಇಪಿಯಿಂದ ಎಸ್.ಸೈಯದ್ ಇದಾಯುತ್ತುಲ್ಲ ಸೇರಿದಂತೆ ೧೪ ಮಂದಿ ಕಣದಲ್ಲಿದ್ದು, ಇಲ್ಲಿನ ಬಹುಸಂಖ್ಯಾತ ಅಲ್ಪಸಂಖ್ಯಾತರ ಮತಗಳು ಛಿದ್ರವಾಗುವ ಸಾಧ್ಯತೆ ಹೆಚ್ಚಿದೆ. 

ಇದು ಜಾರ್ಜ್ ಅವರ ಹ್ಯಾಟ್ರಿಕ್ ಕನಸಿಗೆಕಂಟಕ ಎನಿಸಿದೆ.  ೨೦೦೮ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಪದ್ಮನಾಭ ರೆಡ್ಡಿ ೨೦೧೩ರಲ್ಲಿ ಬಿಜೆಪಿಯಿಂದ ಸ್ಪರ್ಧೆಗಿಳಿದು ೪೫,೪೮೮ ಮತಗಳೊಂದಿಗೆ 2 ನೇ ಸ್ಥಾನಕ್ಕೆ ತೃಪ್ತಿಪಟ್ಟುರು. ಈ ಬಾರಿ ಅವರೇ ಬಿಜೆಪಿ ಅಭ್ಯರ್ಥಿ ಎಂಬ ನಿರೀಕ್ಷೆ ಇತ್ತಾದರೂ, ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ ಜಾರ್ಜ್ ಅವರು ನಿರಾಳರಾದಂತಿದೆ. ಪದ್ಮನಾಭರೆಡ್ಡಿ ಸ್ಪರ್ಧಿಸಿದ್ದರೆ ಜಾರ್ಜ್‌ಗೆ ಪ್ರಬಲ ಪೈಪೋಟಿ ಸಾಧ್ಯತೆ ಇತ್ತು. 

ಇತ್ತೀಚೆಗೆ ಕಾಡುಗೊಂಡನಹಳ್ಳಿ ವ್ಯಾಪ್ತಿಯಲ್ಲಿ 62 ಅಡಿ ಎತ್ತರ 750  ಟನ್ ತೂಕದ ಬೃಹತ್ ಆಂಜನೇಯ ಸ್ವಾಮಿ ಸ್ಥಳಾಂತರ ಪ್ರಕರಣದಲ್ಲಿ  ಮುಂಚೂಣಿ ಯಲ್ಲಿದ್ದ ಮುನಿನಾಗರೆಡ್ಡಿ ಈ ಪ್ರಕರಣವನ್ನು  ಮತಗಳಾಗಿ ಪರಿವರ್ತಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆ. ಆಂಜನೇಯ ಮೂರ್ತಿ ಸ್ಥಳಾಂತರ  ಸೇರಿ ೫ ವರ್ಷಗಳಿಂದ ಕ್ಷೇತ್ರದಲ್ಲಿ ನಡೆದ ಘಟನೆಗಳು, ರಾಜ್ಯದಲ್ಲಿ ನಡೆದ ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರ ಕೊಲೆ ಪ್ರಕರಣಗಳು ಇತ್ಯಾದಿ ಘಟನೆಗಳನ್ನು ಆಧರಿಸಿ ಕ್ಷೇತ್ರದಲ್ಲಿ ಹಿಂದೂಗಳ  ಮತಗಳನ್ನು ಕ್ರೋಢೀಕರಿಸುವ ಪ್ರಯತ್ನದಲ್ಲಿ  ಮುನಿನಾಗರೆಡ್ಡಿ ತೊಡಗಿದ್ದಾರೆ. 

ನರೇಂದ್ರಮೋದಿ ಅವರ ಅಲೆ ಮತ್ತು ಹಿಂದೂ ಮತದಾರರನ್ನು ಒಗ್ಗೂಡಿಸಿ ಗೆಲ್ಲಲೇಬೇಕೆಂದಿರುವ ಅವರಿಗೆ ಬಾಣಸವಾರಿ, ಕಮ್ಮನಹಳ್ಳಿ, ಕಾಚರಕನಹಳ್ಳಿ ಪಾಲಿಕೆ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ೨೦೦೮ರಲ್ಲಿ ಬಿಎಸ್ಪಿಯಿಂದ ಸ್ಪರ್ಧಿಸಿ 16 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದ ಇಸ್ಮಾಯಿಲ್ ಶರೀಫ್ ಅವರ ಸಹೋದರ ಅನ್ವರ್ ಶರೀಫ್ ಈ ಬಾರಿ ಜೆಡಿಎಸ್ ಅಭ್ಯರ್ಥಿ. 

ಜೆಡಿಎಸ್‌ನಿಂದ ಈ ಹಿಂದೆ ಪದ್ಮನಾಭರೆಡ್ಡಿ ಕ್ಷೇತ್ರದಲ್ಲಿ ಒಳ್ಳೆಯ ತಳಪಾಯ ಹಾಕಿದ್ದರೂ, ಆ ನಂತರ ಅವರು ಬಿಜೆಪಿ ಸೇರ್ಪಡೆಗೊಂಡಿದ್ದರು. ಇದರಿಂದ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯವೇ ಇಲ್ಲದಂತಾಗಿದೆ. ಇದೀಗ ಅನ್ವರ್ ಶರೀಫ್ ಜೆಡಿಎಸ್ ಸಂಘಟಿಸುತ್ತಾ, ಒಕ್ಕಲಿಗರು, ಹಿಂದುಳಿದ ವರ್ಗದವರು ಹಾಗೂ ಕುಮಾರಸ್ವಾಮಿ ಪರವಾದ ಯುವಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಬೇಕಿದೆ.  

ವಿಶೇಷವೆಂದರೆ, ಕಳೆದ ಬಾರಿ ಸ್ಪರ್ಧಿಸಿದ್ದ ಎಸ್ ಡಿಪಿಐ ಪಕ್ಷದ ಅಭ್ಯರ್ಥಿ ೧೧ ಸಾವಿರಕ್ಕೂ ಹೆಚ್ಚು ಮತಗಳಿಸಿದ್ದರು. ಈ ಬಾರಿ ಹಿಂದೆ ಸರಿದಿರುವುದರಿಂದ ಕಾಂಗ್ರೆಸ್ ಲಾಭ ತರುವ ಸಾಧ್ಯತೆ ಇದೆ. ಆಮ್‌ಆದ್ಮಿ ಪಕ್ಷದ ಅಭ್ಯರ್ಥಿ ಪೃಥ್ವಿರೆಡ್ಡಿ ಭ್ರಷ್ಟಾಚಾರ ವಿರೋಧಿ ಸೂತ್ರಗಳೊಂದಿಗೆ ಮತಯಾಚನೆಯಲ್ಲಿ ತೊಡಗಿದ್ದಾರೆ. 

Follow Us:
Download App:
  • android
  • ios