ಬೆಂಗಳೂರು:  ಸರಣಿ ಸೋಲಿನಿಂದ ಕಂಗೆಟ್ಟ ಬಿಜೆಪಿ ಕಂಗೆಟ್ಟಿದ್ದು, ಯಡಿಯೂರಪ್ಪ ಆತಂಕಗೊಂಡಿದ್ದಾರೆಂದು ಹೇಳಲಾಗಿದೆ.

ವಿಧಾನ ಪರಿಷತ್ತು ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶಗಳು ಮಂಗಳವಾರ ಪ್ರಕಟವಾಗಿದ್ದು,  ಬಿಜೆಪಿ ಒಂದು ಸ್ಥಾನ ಕಳೆದುಕೊಂಡಿದೆ.  ರಾಜರಾಜೇಶ್ವರಿ ನಗರ ಚುನಾವಣೆಯಲ್ಲೂ ಬಿಜೆಪಿ ಸೋಲನ್ನನುಭವಿಸಿತ್ತು.  ಇದೀಗ ಜಯನಗರ ವಿಧಾನಸಭೆ ಕ್ಷೇತ್ರದ ಸೋಲಿನಿಂದ ಬಿಜೆಪಿ ಕಂಗೆಟ್ಟಿದೆಯೆನ್ನಲಾಗಿದೆ.

ಈ ಬೆಳವಣಿಗೆಗಳಿಂದ  ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್. ಯಡಿಯೂರಪ್ಪಆತಂಕಗೊಂಡಿದ್ದಾರೆನ್ನಲಾಗಿದೆ. ಮನೆಯಿಂದ ಹೊರಗೆ ಬಾರದೇ, ಮಾಧ್ಯಮಗಳಿಂದಲೂ ಯಡಿಯೂರಪ್ಪ ಅಂತರ ಕಾಯ್ದುಕೊಂಡಿದ್ದರು.  

ರಾಜ್ಯ ಇತರ ನಾಯಕರ ವಿರುದ್ಧ ಯಡಿಯೂರಪ್ಪ ಬೇಸರಗೊಂಡಿದ್ದು, ಆಪ್ತರ ಭೇಟಿಗೂ ನಿರಾಕರಿಸುತ್ತಿದ್ದಾರೆಯೆನ್ನಲಾಗಿದೆ.