ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಣಕ್ಕಿಳಿದಿದ್ದ ಜಿಲ್ಲೆಯ ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಚುನಾವಣೆ ವಿಪರೀತ ಕುತೂಹಲ ಕೆರಳಿಸಿತ್ತು. ಒಕ್ಕಲಿಗ ಹಾಗೂ ಬ್ರಾಹ್ಮಣರ ಪ್ರಾಬಲ್ಯವುಳ್ಳ ಈ ಕ್ಷೇತ್ರದಲ್ಲಿ ಮೂವರೂ ಒಕ್ಕಲಿಗ ಅಭ್ಯರ್ಥಿಗಳೇ ಇದ್ದಿದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆಂಬ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.

ಕಾಂಗ್ರೆಸ್‌ನಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸ್ಪರ್ಧಿಸಿದ್ದು, ಪ್ರಾಮಾಣಿಕನೆಂಬ ಹಣೆ ಪಟ್ಟಿ ಗೆಲ್ಲುವಂತೆ ಮಾಡಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಕೆಜಿಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಗುರುತಿಸಿಕೊಂಡು, ಇದೀಗ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಆರ್.ಎಂ.ಮಂಜುನಾಥ ಗೌಡರ ಪ್ರಭಾವವೂ ಇಲ್ಲಿತ್ತು.

ಆದರೆ, 14 ವರ್ಷದ ಬಾಲಕಿ ಕೊಲೆ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಕಿಮ್ಮನೆ ರತ್ನಾಕರ್ ಬೆಂಬಲ ಸೂಚಿಸಿದ್ದು, ಇವರ ಸೋಲಿಗೆ ಮುಳುವಾಯಿತು ಎನ್ನಲಾಗುತ್ತಿದೆ.

2013ರಲ್ಲಿ ಈ ಮೂವರೂ ಅಭ್ಯರ್ಥಿಗಳಿಗೆ ಹೆಚ್ಚು ಕಮ್ಮಿ ಸಾವಿರ ಮತಗಳ ಅಂತರವಿದ್ದಿದ್ದು, ಇದೇ ಕುತೂಹಲ ಈ ವರ್ಷವೂ ಮುಂದುವರಿದಿತ್ತು. ಬಹುಶಃ ಕಾಂಗ್ರೆಸ್‌-ಜೆಡಿಎಸ್ ಸ್ಪರ್ಧೆ, ಬಿಜೆಪಿಗೆ ವರವಾಗಿದ್ದು, ಬಿಜೆಪಿ ಅಭ್ಯರ್ಥಿ ಆಗರ ಜ್ಞಾನೇಂದ್ರ ಸುಮಾರು 20 ಸಾವಿರ ಮತಗಳಿಂದ ಗೆದ್ದಿದ್ದಾರೆ.

ಪಡೆದ ಮತಗಳು ಹೀಗಿವೆ

ಆರಗ ಜ್ಞಾನೇಂದ್ರ
 (ಬಿಜೆಪಿ)

ಪಡೆದ ಮತಗಳು- ೬೭೫೨೭

ಸಮೀಪದ ಪ್ರತಿಸ್ಪರ್ಧಿ ಕಿಮ್ಮನೆ ರತ್ನಾಕರ್ (ಕಾಂಗ್ರೆಸ್)

ಗೆಲುವಿನ ಅಂತರ- ೨೧೭೪೭

ಚುನವಣೆ ಅಪ್‌ಡೇಟ್ಸ್

ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ