ಮತ ಚಲಾಯಿಸದ ರಮ್ಯಾ

First Published 12, May 2018, 6:09 PM IST
Congress Do Not cast her Vote at Assembly Election
Highlights

ಪ್ರಸ್ತುತ ಎಐಸಿಸಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಮಂಡ್ಯ ಲೋಕಸಭೆ ಕ್ಷೇತ್ರದ ಸಂಸದರಾಗಿ ಒಮ್ಮೆ ಆಯ್ಕೆಯಾಗಿದ್ದರು.   

ಮಂಡ್ಯ(ಮೇ.12): ನಟಿ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ ಅವರು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿತಮ್ಮ ಹಕ್ಕು ಚಲಾಯಿಸಿಲ್ಲ. ಮಂಡ್ಯದ ವಿದ್ಯಾನಗರದ 10ನೇ ವಾರ್ಡ್'ನ ಮತದಾರರಾಗಿರುವ ಮಾಜಿ ಸಂಸದೆ ಮತದಾನ. ಅವರ ಮನೆಗೆ ಬೀಗ ಹಾಕಲಾಗಿದೆ. ರಮ್ಯಾ ಆಗಮಿಸುತ್ತಾರೆ ಎಂದು ಬೆಳಿಗ್ಗೆಯಿಂದಲೂ ಬೆಂಬಲಿಗರು, ಅಭಿಮಾನಿಗಳು ಕಾದು ಕುಳಿತರೂ ಯಾವುದೇ ಪ್ರಯೋಜನವಾಗಿಲ್ಲ.

ಪ್ರಸ್ತುತ ಎಐಸಿಸಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಡ್ಯ ಲೋಕಸಭೆ ಕ್ಷೇತ್ರದ ಸಂಸದರಾಗಿ ಒಮ್ಮೆ ಆಯ್ಕೆಯಾಗಿದ್ದರು. ಅಂಬರೀಶ್ ಬದಲು ರಮ್ಯಾಗೆ ಟಿಕೆಟ್ ನೀಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ತಾವು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇತ್ತೀಚಿಗಷ್ಟೆ ಮೊಳಕಾಲ್ಮೂರು ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಡಾ. ಯೋಗೀಶ್ ಬಾಬು ಅವರಿಗೆ ಆರ್ಥಿಕ ಸಹಾಯ ಮಾಡುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಮನವಿ ಮಾಡಿದ್ದರು.             

ಈ ಸುದ್ದಿಗಾಗಿ  :  ಮತಗಟ್ಟೆಯಲ್ಲಿ ರಮ್ಯಾ ಕ್ರಮಸಂಖ್ಯೆ 420 ಕ್ಲಿಕ್ ಮಾಡಿ

 

 

 

loader