ದೇಶದ ಅತೀ ಕಡಿಮೆ ಅವಧಿಯ ಸಿಎಂ ಬಿಎಸ್'ವೈ ನಂ 2

BSY Served Two and Half Day Chief Minister
Highlights

 2ನೇ ಸ್ಥಾನದಲ್ಲಿರುವ  ಬಿಎಸ್'ವೈ ಮೇ.17, 2018 ರಿಂದ ಮೇ.19ರ ವರೆಗೂ ಎರಡೂವರೆ ದಿನ ಸಿಎಂ ಆಗಿ ಅಧಿಕಾರ ಚಲಾಯಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಉತ್ತರ ಪ್ರದೇಶದ ಜಗದಾಂಬಿಕಾ ಪಾಲ್'ರಿದ್ದು  3 ದಿನ ಸಿಎಂ ಆಗಿದ್ದರು. 

ಬೆಂಗಳೂರು(ಮೇ. ): ದೇಶದ ಅತೀ ಕಡಿಮೆ ಅವಧಿಯ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಬಿ.ಎಸ್.ಯಡಿಯೂರಪ್ಪ ನಂ.2 ಸ್ಥಾನ ಲಭಿಸಿದೆ. ಮೊದಲಸ್ಥಾನದಲ್ಲಿ ಉತ್ತರಖಂಡ್ ಮುಖ್ಯಮಂತ್ರಿ ಹರೀಶ್ ರಾವತ್ ಅವರಿದ್ದಾರೆ. 
ಉತ್ತರಖಂಡ್ ಕಾಂಗ್ರೆಸ್ ಹಿರಿಯ ನಾಯಕರಾದ ರಾವತ್ 21 ಏಪ್ರಿಲ್ 2016 ರಿಂದ 22 ಏಪ್ರಿಲ್ 2016ರ ವರೆಗೆ ಕೇವಲ ಒಂದು ದಿನದ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರಿಯಾಗಿ ನಿರ್ವಹಿಸಿದ್ದರು. 2ನೇ ಸ್ಥಾನದಲ್ಲಿರುವ  ಬಿಎಸ್'ವೈ ಮೇ.17, 2018 ರಿಂದ ಮೇ.19ರ ವರೆಗೂ ಎರಡೂವರೆ ದಿನ ಸಿಎಂ ಆಗಿ ಅಧಿಕಾರ ಚಲಾಯಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಉತ್ತರ ಪ್ರದೇಶದ ಜಗದಾಂಬಿಕಾ ಪಾಲ್'ರಿದ್ದು  3 ದಿನ ಸಿಎಂ ಆಗಿದ್ದರು. 
ಅವರು 1998ರಲ್ಲಿ ಫೆಬ್ರವರಿ 21 ರಿಂದ 23ರವರೆಗೆ ಮುಖ್ಯಮಂತ್ರಿಯಾಗಿದ್ದರು. ಯಡಿಯೂರಪ್ಪವನರು 2007ರಲ್ಲಿ ಬಿಜೆಪಿ-ಜೆಡಿಎಸ್ ಸರ್ಕಾರವಿದ್ದಾಗ ಒಂದು ವಾರಗಳ ಕಾಲ ಮುಖ್ಯಮಂತ್ರಿಯಾಗಿದ್ದು ಕೂಡ ದಾಖಲೆಯಾಗಿದೆ.  

 1. ಹರೀಶ್ ರಾವತ್ [ಉತ್ತರಖಂಡ್] : 1 ದಿನ  21 ಏಪ್ರಿಲ್ 2016 ರಿಂದ 22 ಏಪ್ರಿಲ್ 2016
 2. ಬಿಎಸ್'ವೈ[ಕರ್ನಾಟಕ]: 2.1/2 ದಿನ  - ಮೇ.17, 2018 ರಿಂದ ಮೇ.19
 3. ಜಗದಾಂಬಿಕಾ ಪಾಲ್[ಉತ್ತರ ಪ್ರದೇಶ] : 3 ದಿನ - 1998ರಲ್ಲಿ ಫೆಬ್ರವರಿ 21 ರಿಂದ 23
 4. ಸತೀಶ್ ಪ್ರಸಾದ್ ಸಿಂಗ್[ಬಿಹಾರ್]: 5 ದಿನ ಜನವರಿ 28-ಫೆ.1, 1968
 5. ಓಂ ಪ್ರಕಾಶ್ ಚೌತಾಲಾ[ಹರ್ಯಾಣ]: 6 ದಿನ ಜುಲೈ 12-17,1990
 6. ನಿತೀಶ್ ಕುಮಾರ್ [ಬಿಹಾರ್]: 8 ದಿನ,ಮಾರ್ಚ್ 3-10, 2000
 7. ಬಿ.ಎಸ್.ಯಡಿಯೂರಪ್ಪ[ಕರ್ನಾಟಕ]: 8 ದಿನ, ನವಂಬರ್ 12-19, 2007
 8. ಎಸ್.ಸಿ. ಮಾರಕ್[ಮೇಘಾಲಯ]: 12 ದಿನ,ಫೆ.27-ಮಾರ್ಚ್ 10,1998
 9. ಓಂ ಪ್ರಕಾಶ್ ಚೌತಾಲಾ[ಹರ್ಯಾಣ]: 17 ದಿನ ಮಾರ್ಚ್ 21- ಏಪ್ರಿಲ್ 6,1991
 10. ಜಾನಕಿ ರಾಮಚಂದ್ರನ್[ತಮಿಳುನಾಡು]: 24 ದಿನ ಜನವರಿ 7-30,1988
 11. ಬಿ.ಪಿ.ಮಂಡಲ್[ಬಿಹಾರ್]: 31 ದಿನ ಫೆ.1- ಮಾರ್ಚ್ 2, 1968
 12. ಸಿ.ಹೆಚ್. ಮೊಹಮದ್ ಕೋಯಾ[ಕೇರಳ]: ಅಕ್ಟೋಬರ್ 12 - ಡಿ.1, 1979

 

 

 

 

 

 

loader